ರಾಜ್ಯದಲ್ಲಿ ಇರುವುದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್​ ಸರ್ಕಾರ; ಸಂಸದ ಶ್ರೀನಿವಾಸ ಪ್ರಸಾದ್​

ಕರ್ನಾಟಕಕ್ಕೆ ಇಂತಹ ಸ್ಥಿತಿ ಬರಬಾರದಿತ್ತು. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇಂತಹ ಸ್ಥಿತಿ ಕರ್ನಾಟಕದಲ್ಲಿ ಬಂದಿರುವುದು ನಮ್ಮ ದೌರ್ಭಾಗ್ಯ, ಎಂದು ಬೇಸರ ವ್ಯಕ್ತಪಡಿಸಿದರು.

Latha CG | news18
Updated:July 14, 2019, 3:39 PM IST
ರಾಜ್ಯದಲ್ಲಿ ಇರುವುದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್​ ಸರ್ಕಾರ; ಸಂಸದ  ಶ್ರೀನಿವಾಸ ಪ್ರಸಾದ್​
ವಿ. ಶ್ರೀನಿವಾಸ್​ ಪ್ರಸಾದ್​​
Latha CG | news18
Updated: July 14, 2019, 3:39 PM IST
ಚಾಮರಾಜನಗರ,(ಜು.14): ಅತೃಪ್ತ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರ ರಾಜೀನಾಮೆ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಬಹುಮತ ಕಳೆದುಕೊಂಡಿರುವ ಸಮ್ಮಿಶ್ರ ಸರ್ಕಾರ ಇರುವುದು ಬೇಡ, ಸಿಎಂ ರಾಜೀನಾಮೆ ಕೊಡಲಿ ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುವುದಾಗಿ ಪಣ ತೊಟ್ಟಿದ್ದಾರೆ. ಎಚ್​ಡಿಕೆ ನಡೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್​ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಇದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್ ಸರ್ಕಾರ. ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ. ಮೈತ್ರಿ ಸರ್ಕಾರ ಅಸಮಾಧಾನ, ಗೊಂದಲಗಳ ಗೂಡಾಗಿದೆ. ಎರಡೂ ಪಕ್ಷಗಳಲ್ಲಿ ಒಳಗೊಳಗೆ ಅಸಮಾಧಾನವಿದೆ,' ಎಂದರು.

'ವಿಶ್ವನಾಥ್​​ ಅವರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನವಿತ್ತು. ಜೆಡಿಎಸ್ ನಲ್ಲಿನ ಬೆಳವಣಿಗೆಗಗಳು ಅವರಿಗೆ ತೀವ್ರ ಬೇಸರ ತರಿಸಿತ್ತು. ಈ ಹಿಂದೆ ಅವರು 'ಹಳ್ಳಿ ಹಕ್ಕಿ' ಅಂತಾ ಪುಸ್ತಕ ಬರೆದಿದ್ದರು. ಈಗ ಜೆಡಿಎಸ್ ಜೊತೆ ಇದ್ದ ಕಹಿ ಅನುಭವವನ್ನು 'ಹಳ್ಳಿ ಹಕ್ಕಿಯ ಗೋಳು 'ಎಂದು ಬರೆಯಬೇಕಾಗಿದೆ,' ಎಂದು ಲೇವಡಿ ಮಾಡಿದರು.

ಮುಂಬೈ ಅತೃಪ್ತರ ಕ್ಯಾಂಪ್ ಫುಲ್ ಖುಷ್; ಆಕ್ಸಿಜನ್ ನಿಲ್ಲಿಸಿಬಂದ್ರಿ ಎಂದು ಎಂಟಿಬಿಯನ್ನು ಕೊಂಡಾಡಿದ ಹೆಚ್. ವಿಶ್ವನಾಥ್!

'ಪ್ರಸ್ತುತ ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಸರ್ಕಾರ ರಚನೆ ಮಾಡಲು ಬಿಜೆಪಿ ಸಿದ್ಧವಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕೂಡ ಇದನ್ನೇ ಹೇಳಿದ್ದಾರೆ. ಎಲ್ಲಾ ಶಾಸಕರು ಕೂಡ ರೆಸಾರ್ಟ್‌ನಲ್ಲಿ ಇದ್ದಾರೆ,' ಎಂದು ಹೇಳಿದರು.

'ಕರ್ನಾಟಕಕ್ಕೆ ಇಂತಹ ಸ್ಥಿತಿ ಬರಬಾರದಿತ್ತು. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇಂತಹ ಸ್ಥಿತಿ ಕರ್ನಾಟಕದಲ್ಲಿ ಬಂದಿರುವುದು ನಮ್ಮ ದೌರ್ಭಾಗ್ಯ,' ಎಂದು ಬೇಸರ ವ್ಯಕ್ತಪಡಿಸಿದರು.
First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...