ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರ ಯಾವಾಗ ಬೀಳುತ್ತೊ ಗೊತ್ತಿಲ್ಲ: ಶೋಭಾ ಕರಂದ್ಲಾಜೆ

news18
Updated:October 25, 2018, 12:23 PM IST
ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರ ಯಾವಾಗ ಬೀಳುತ್ತೊ ಗೊತ್ತಿಲ್ಲ: ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
  • News18
  • Last Updated: October 25, 2018, 12:23 PM IST
  • Share this:
- ಸಂತೋಷ್ ಕೊಣ್ಣುರ,  ನ್ಯೂಸ್ 18 ಕನ್ನಡ

ಗದಗ (ಅಕ್ಟೋಬರ್.25) :  ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರ ಯಾವಾಗ ಬೀಳುತ್ತೆ ಗೊತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಸಚಿವ ಹೆಚ್.ಡಿ ರೇವಣ್ಣ ಕಾಂಗ್ರೆಸ್ ಶಾಸಕರ ಕೆಲಸ ಮಾಡಿಕೊಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಆರೋಪಿಸುತ್ತಿದ್ದಾರೆ. ಜತೆಗೆ ಸಮ್ಮಿಶ್ರ ಸರ್ಕಾರದಿಂದ ಹೊರಬರುವಂತೆ ಅವರ ಶಾಸಕರೇ ತಮ್ಮ ನಾಯಕರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಾವು ಆಪರೇಷನ್ ಕಮಲ ಮಾಡಲ್ಲ

ನಾವು ಆಪರೇಷನ್ ಕಮಲ ಮಾಡಲ್ಲ, ಆ ರೀತಿಯ ತೀರ್ಮಾನ ಆಗಿದೆ. ಸಿ.ಎಂ ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಕಾಂಗ್ರೆಸ್‌ನ ಶಾಸಕರ ಕೆಲಸ ಮಾಡಿಕೊಡ್ತಿಲ್ಲ ಅಂತ ಮಾತಾನಾಡ್ತಿದ್ದಾರೆ. ನಾವು ಶಿವಮೊಗ್ಗ ಬಳ್ಳಾರಿ ಜಮಖಂಡಿ ಕ್ಷೇತ್ರವನ್ನು ನೂರಕ್ಕೆ ನೂರು ಗೆಲ್ಲುತ್ತೇವೆ ಎಂದರು.

ಇದನ್ನು ಓದಿ :  ಕಾಂಗ್ರೆಸ್​ ಮುಖವಾಡ ಡಿಕೆಶಿಯಿಂದ ಬಯಲಾಗಿದೆ; ಸಂಸದೆ ಶೋಭಾ ಕರಂದ್ಲಾಜೆ

ಉಪ ಚುನಾವಣೆಯಲ್ಲಿ ಬಿಜೆಪಿ ಪರವಾದ ಒಳ್ಳೆಯ ವಾತಾವರಣವಿದೆ. ಐದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಇನ್ನೊಂದು ಸುತ್ತು ಎಲ್ಲ ಕ್ಷೇತ್ರಗಳಿಗೆ ಹೋಗುತ್ತೇನೆ ಎಂದರು. ಇನ್ನು ಶ್ರೀರಾಮುಲು ಮುಂದಿನ ಸಿಎಂ ಎನ್ನೋ ಸೋಮಣ್ಣ ಹೇಳಿಕೆ ನನಗೆ ಯಾವುದು ಗೊತ್ತಿಲ್ಲ ಎಂದು ಜಾರಿಕೊಂಡರು.ಸಿದ್ದರಾಮಯ್ಯ ಬಾಯಲ್ಲಿ ಇಂಥ ಮಾತು ನಿರೀಕ್ಷೆ ಮಾಡಿರಲಿಲ್ಲ

ಶ್ರೀರಾಮುಲುಗೆ ಸಿದ್ದರಾಮಯ್ಯ 420 ಎಂಬ ಪದ ಬಳಕೆ ಮಾಡಿರುವ ಕುರಿತು ಎಸ್ ಯಡಿಯೂರಪ್ಪ ಕಿಡಿಕಾರಿದರು.  ಸಿದ್ದರಾಮಯ್ಯ ಅವರ ಬಾಯಲ್ಲಿ ಇಂಥ ಮಾತು ನಿರೀಕ್ಷೆ ಮಾಡಿರಲಿಲ್ಲ. ಶ್ರೀರಾಮುಲು ವಿರುದ್ಧ 420 ಪದ ಬಳಕೆ ಮಾಡಿರುವುದು, ಇಡೀ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡಿದಂತೆ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಹೇಳಿದರು.

ಇದನ್ನು ಓದಿ : ಅಪ್ಪ-ಮಕ್ಕಳು ಮೋಸಗಾರರು, ಚಾಮುಂಡೇಶ್ವರಿ ಸೋಲನ್ನು ಮರೆಯಬೇಡಿ; ಸಿದ್ದರಾಮಯ್ಯಗೆ ಬಿಎಸ್​ವೈ ಕಿವಿಮಾತು

 
First published: October 25, 2018, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading