HOME » NEWS » State » BJP MP SHOBHA KARANDLAJE HITS OUT AT FORMER MINISTER DK SHIVAKUMAR LG

ಪಾಕಿಸ್ತಾನದ ಪರ ಅಮೂಲ್ಯ ಘೋಷಣೆ: ಮಾಜಿ ಸಚಿವ ಡಿಕೆಶಿ ಬಗ್ಗೆಯೂ ತನಿಖೆಯಾಗಲಿ; ಶೋಭಾ ಕರಂದ್ಲಾಜೆ

ಘೋಷಣೆ ಕೂಗಿದ ಅಮೂಲ್ಯ ತಂದೆ ಬಗ್ಗೆ ತನಿಖೆಯಾಗಬೇಕು. ಯಾಕೆಂದರೆ ಅವರು  ಕೊಪ್ಪದವರು, ಹಿಂದೆ ನಕ್ಸಲರ ಜೊತೆ ಸಂಪರ್ಕ ಇತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಸಿರಿಮನೆ ನಾಗರಾಜು  ಮತ್ತು ನಕ್ಸಲ್ ಬೆಂಬಲಿಗರ ಒಡನಾಟ ಇದೆ. ಹೀಗಾಗಿ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ  ಇದೆ ಎಂದು ಶೋಭಾ ಹೇಳಿದರು.

news18-kannada
Updated:February 21, 2020, 4:18 PM IST
ಪಾಕಿಸ್ತಾನದ ಪರ ಅಮೂಲ್ಯ ಘೋಷಣೆ: ಮಾಜಿ ಸಚಿವ ಡಿಕೆಶಿ ಬಗ್ಗೆಯೂ ತನಿಖೆಯಾಗಲಿ; ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
  • Share this:
ಉಡುಪಿ(ಫೆ.21): ಭಾರತ ವಿರೋಧಿ ಘೋಷಣೆ ಕೂಗುವ ಜಾಲ ನಿರ್ಮಾಣ ಆಗಿದೆ. ದೇಶದಲ್ಲಿ ಜಿನ್ನಾ ಮಾನಸಿಕತೆ ಸೃಷ್ಟಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಣ ಕೊಟ್ಟು ಒತ್ತಡ ಹಾಕಿ ಪ್ರಚಾರಕ್ಕಾಗಿ ಹೇಳಿಕೆ ಕೊಡಲಾಗುತ್ತಿದೆ. ಪಾಕ್ ಪರ ಘೋಷಣೆ ಕೂಗುವವರಿಗೆ ಉಗ್ರ ಶಿಕ್ಷೆ ಆಗಬೇಕು.  ಭಾರತ ಮತ್ತು ರಾಜ್ಯದ ಕಾನೂನಲ್ಲಿ ಬದಲಾವಣೆ ಆಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಉಡಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಕಿಡಿಕಾರಿದರು. "ಭಾರತದ ಅನ್ನ ತಿಂದು, ಸಬ್ಸಿಡಿ ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇದರ ಹಿಂದೆ ಇರುವ ವ್ಯಕ್ತಿಗಳ ತನಿಖೆ ಆಗಬೇಕು. ಆಯೋಜಕರ ತನಿಖೆಯೂ ಆಗಬೇಕು. ಘೋಷಣೆ ಕೂಗಿದ ಅಮೂಲ್ಯ ತಂದೆ ಬಗ್ಗೆ ತನಿಖೆಯಾಗಬೇಕು.

ಏಕೆಂದರೆ ಅವರು  ಕೊಪ್ಪದವರು, ಹಿಂದೆ ನಕ್ಸಲರ ಜೊತೆ ಸಂಪರ್ಕ ಇತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಸಿರಿಮನೆ ನಾಗರಾಜು  ಮತ್ತು ನಕ್ಸಲ್ ಬೆಂಬಲಿಗರ ಒಡನಾಟ ಇದೆ. ಹೀಗಾಗಿ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ  ಇದೆ ಎಂದು ಶೋಭಾ ಆರೋಪಿಸಿದರು.

ಫೆ.27ಕ್ಕೆ ಬಿಎಸ್​ವೈಗೆ ಹುಟ್ಟುಹಬ್ಬದ ಸಂಭ್ರಮ; ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿ

ಇಂದು ಘೋಷಣೆ ಕೂಗಿದ ಹುಡುಗಿ ಯಾರು? ಅವಳ ಹಿನ್ನೆಲೆ ಏನು? ಈಕೆಗೆ ಯಾವ ಸಂಘಟನೆಯ ಜೊತೆ ಸಂಬಂಧ ಇದೆ? ಈ ಬಗ್ಗೆ ತನಿಖೆಯಾಗಬೇಕು ಎಲ್ಲರನ್ನೂ ದೇಶ ದ್ರೋಹದ ಕೇಸಿನ ಮೇಲೆ ಜೈಲಿಗೆ ಹಾಕಬೇಕು. ಯಾವುದೇ ವಕೀಲರು ಕೇಸು ನಡೆಸಬಾರದು. ಹುಬ್ಬಳ್ಳಿ ಪ್ರಕರಣದಲ್ಲಿ ಬೆಂಗಳೂರಿನ ವಕೀಲರು ವಾದ ಮಾಡಲು ಹೋಗಿದ್ದಾರೆ. ರಾಷ್ಟ್ರಪ್ರೇಮದ ವಿಚಾರದಲ್ಲಿ ಯಾರು ರಾಜಿ ಆಗಬೇಡಿ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಆದರೆ ಭಾರತ ಮಾತೆಯ ಬಗ್ಗೆ ಅವಹೇಳನ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಅಮೂಲ್ಯಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂಬ ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಶೋಭಾ ಕರಂದ್ಲಾಜೆ, "ಡಿಕೆಶಿ ಒರಿಜಿನಲ್​​  ಕಾಂಗ್ರೆಸ್ಸಿಗ ಅಲ್ಲ. ನಿಜವಾದ ಕಾಂಗ್ರೆಸ್ಸಿಗರಾಗಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್ ಅಂತಾರೆ. ಹೇಳಿಕೆ ನೀಡಿದ ಡಿಕೆಶಿ ಬಗ್ಗೆಯೂ ತನಿಖೆಯಾಗಬೇಕು. ಯುವಕರನ್ನು ಬ್ರೈನ್ ವಾಶ್​​ ಮಾಡುವವರು ಕುಮ್ಮಕ್ಕು ನೀಡುವವರು. ಹಣಕಾಸು ನೆರವು ನೀಡುವವರು ಇನ್ನೂ ಇದ್ದಾರೆ. ಅಂತಹ ಶಕ್ತಿ ಸಂಘಟನೆಯ ಬಗ್ಗೆ ತನಿಖೆಯಾಗಲಿ," ಎಂದಿದ್ದಾರೆ.

ನಿರ್ಭಯಾ ಪ್ರಕರಣ: ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆಹೋದ ಅಪರಾಧಿ
First published: February 21, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories