ರಾಹುಲ್ ಗಾಂಧಿಯಂತೆ ನನಗೂ ಪ್ರಧಾನಿಯಾಗುವ ಚಟ ಇದೆ: ಬಿಜೆಪಿ ಸಂಸದ ಜಿ.ಎಸ್​. ಬಸವರಾಜು

ರಾಹುಲ್ ಗಾಂಧಿ ಚಿನ್ನದ ಚಮಚದಲ್ಲಿ ಊಟ ಮಾಡಿ ಬೆಳೆದರು. ಟೀ ಮಾಡುತ್ತಿದ್ದ ನರೇಂದ್ರ ಮೋದಿ ಈಗ ಪ್ರಧಾನಿ ಆಗಿದ್ದಾರೆ. ಅದು ಸಾರ್ವಭೌಮತ್ವದ ಮಹತ್ವ ಎಂದು ತುಮಕೂರು ಬಿಜೆಪಿ ಸಂಸದರು ಪ್ರಧಾನಿಯನ್ನು ಹೊಗಳಿದರು.

news18-kannada
Updated:February 14, 2020, 4:05 PM IST
ರಾಹುಲ್ ಗಾಂಧಿಯಂತೆ ನನಗೂ ಪ್ರಧಾನಿಯಾಗುವ ಚಟ ಇದೆ: ಬಿಜೆಪಿ ಸಂಸದ ಜಿ.ಎಸ್​. ಬಸವರಾಜು
ಜಿ.ಎಸ್. ಬಸವರಾಜು
  • Share this:
ತುಮಕೂರು(ಫೆ. 14): ರಾಹುಲ್​ ಗಾಂಧಿಯಂತೆ ನನಗೂ ಪ್ರಧಾನಿಯಾಗುವ ಚಟವಿದೆ. ಆದರೆ ಭಾರತದ ಸಂವಿಧಾನದ ಪ್ರಕಾರ, ಪ್ರಧಾನಿಯಾಗುವವರು ಭಾರತೀಯ ಪ್ರಜೆಯಾಗಿರಬೇಕು. ಹುಚ್ಚನಾಗಿರಬಾರದು ಎಂದು ಸಂಸದ ಜಿ.ಎಸ್.ಬಸವರಾಜು ಲೇವಡಿ ಮಾಡಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪುಲ್ವಾಮಾ ಉಗ್ರರ ದಾಳಿ ವಿಚಾರವಾಗಿ ರಾಹುಲ್​ ಗಾಂಧಿ ಮಾಡಿರುವ ಟ್ವೀಟ್​​ ವಿಚಾರವಾಗಿ ಸಂಸದ ಬಸವರಾಜು ಕಿಡಿಕಾರಿದರು. ರಾಹುಲ್ ಗಾಂಧಿ ಸಿಎಎ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

"ರಾಹುಲ್ ಗಾಂಧಿಯವರೇ ದೇಶದಲ್ಲಿ ದಾಳಿ ನಡೆಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮುಸ್ಲಿಂರನ್ನು ಎತ್ತಿಕಟ್ಟುತ್ತಿದ್ದಾರೆ. ರಾಹುಲ್ ಗಾಂಧಿ ಸೈನಿಕರ ಬಗ್ಗೆ ಹೇಳಿರುವುದನ್ನು ನಾನು ಖಂಡಿಸುತ್ತೇನೆ. ಭಾರತೀಯರು ಪ್ರಬುದ್ಧರಿದ್ದಾರೆ ಎಂದರು.

ಉಮೇಶ್​ ಕತ್ತಿಗೂ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಗ್ರಹ; ಸಚಿವ ರಮೇಶ್​ ಜಾರಕಿಹೊಳಿ

ರಾಹುಲ್ ಗಾಂಧಿಯಂತೆ ನಾನಗೂ ಪ್ರಧಾನಿಯಾಗಬೇಕೆಂಬ ಚಟ ಇದೆ‌. ಆದರೆ  ಪ್ರಧಾನಿಯಾಗುವವರು ಭಾರತೀಯ ಪ್ರಜೆಯಾಗಿರಬೇಕು. ಹುಚ್ಚನಾಗಿರಬಾರದು‌‌.  ರಾಹುಲ್ ಗಾಂಧಿ ಚಿನ್ನದ ಚಮಚದಲ್ಲಿ ಊಟ ಮಾಡಿ ಬೆಳೆದರು. ಟೀ ಮಾಡುತ್ತಿದ್ದ ನರೇಂದ್ರ ಮೋದಿ ಈಗ ಪ್ರಧಾನಿ ಆಗಿದ್ದಾರೆ. ಅದು ಸಾರ್ವಭೌಮತ್ವದ ಮಹತ್ವ ಎಂದು ತುಮಕೂರು ಬಿಜೆಪಿ ಸಂಸದರು ಪ್ರಧಾನಿಯನ್ನು ಹೊಗಳಿದರು.

ರಾಹುಲ್ ಗಾಂಧಿಗೆ ಮೊದಲು ತಿರುಗೇಟು ಕೊಟ್ಟು, ಬಳಿಕ ಸಾವರಿಸಿಕೊಂಡ ಸಂಸದ ಬಸವರಾಜು, ಕಾಂಗ್ರೆಸ್ ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸುಷ್ಮಾ ಸ್ವರಾಜ್ 68ನೇ ಜನ್ಮದಿನ: ‘ಆಕೆ ದೇಶಕ್ಕಾಗಿ ಪ್ರಾಣತೆತ್ತ ಮಹೋನ್ನತ ಮಂತ್ರಿ‘ ಎಂದ ಪ್ರಧಾನಿ ಮೋದಿ
First published: February 14, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading