ಗಾಂಧೀಜಿಯದ್ದು ಬ್ರಿಟೀಷರ ಜತೆ ಒಪ್ಪಂದದ ಹೋರಾಟ: ರಾಷ್ಟ್ರಪಿತನ ವಿರುದ್ಧ ಹೆಗಡೆ ಹುಚ್ಚು ಹೇಳಿಕೆ

ಯಾರು ದೇಶಕ್ಕಾಗಿ ಶಸ್ತ್ರ ಹಿಡಿದು ಹೋರಾಟಕ್ಕೆ ಇಳಿದರೋ ಅವರೆಲ್ಲಾ ನೇಣಿನ ಉರುಳಿಗೆ ಕೊರಳೊಡ್ಡಿದರು. ಯಾರು ತಮ್ಮ ಪ್ರಖರ ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಯತ್ನಿಸಿದರೋ ಅವರೆಲ್ಲಾ ಕತ್ತಲೆ ಕೋಣೆಯಲ್ಲಿ ತಮ್ಮ ಬದುಕನ್ನು ಸವೆಸಿದರು. ಯಾರು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟಗಾರ ಎಂಬ ಸರ್ಟಿಫಿಕೇಟ್​ ತೆಗೆದುಕೊಂಡರೋ ಅವರೆಲ್ಲಾ ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ.

ಸಂಸದ ಅನಂತಕುಮಾರ್ ಹೆಗಡೆ

ಸಂಸದ ಅನಂತಕುಮಾರ್ ಹೆಗಡೆ

 • Share this:
  ಬೆಂಗಳೂರು(ಫೆ.01): ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗುವ ಸಂಸದ ಅನಂತಕುಮಾರ್​​ ಹೆಗಡೆ, ಇಂದು ಮಹಾತ್ಮ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. "ಸತ್ಯಾಗ್ರಹ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರಂತೆ, ಇಂತಹವರು ಈ ದೇಶದ ಮಹಾಪುರುಷರಾದರು" ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಉಡಾಫೆಯಾಗಿ ಮಾತನಾಡುವ ಮೂಲಕ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ.

  ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಯಾರು ದೇಶಕ್ಕಾಗಿ ಶಸ್ತ್ರ ಹಿಡಿದು ಹೋರಾಟಕ್ಕೆ ಇಳಿದರೋ ಅವರೆಲ್ಲಾ ನೇಣಿನ ಉರುಳಿಗೆ ಕೊರಳೊಡ್ಡಿದರು. ಯಾರು ತಮ್ಮ ಪ್ರಖರ ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಯತ್ನಿಸಿದರೋ ಅವರೆಲ್ಲಾ ಕತ್ತಲೆ ಕೋಣೆಯಲ್ಲಿ ತಮ್ಮ ಬದುಕನ್ನು ಸವೆಸಿದರು. ಯಾರು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟಗಾರ ಎಂಬ ಸರ್ಟಿಫಿಕೇಟ್​ ತೆಗೆದುಕೊಂಡರೋ ಅವರೆಲ್ಲಾ ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಇದೆಲ್ಲಾ ಈ ದೇಶದ ವಿಡಂಬನೆ ಎಂದು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಸೋಗಲಾಡಿತನದ ಹೋರಾಟ" ಎಂದು ವ್ಯಂಗ್ಯ ಮಾಡಿದರು.

  "ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ತೆರನಾದ ಗುಂಪು ಇತ್ತು. ಒಂದು ಕ್ರಾಂತಿಕಾರಿಗಳು- ಇವರು ಶಸ್ತ್ರ ಹಿಡಿದು ಬಂದರು.  ಇನ್ನೊಬ್ಬರು ಪ್ರಖರ ರಾಷ್ಟ್ರೀಯವಾದಿಗಳು-ಇವರು ತಮ್ಮ ಪ್ರಖರ ವಿಚಾರಗಳ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಕೊನೆಯಲ್ಲಿ, ಮತ್ತೊಬ್ಬ ಗುಂಪಿನವರು ಇದ್ದಾರೆ. ಅವರೇ ಸೋಗಲಾಡಿ ಬುದ್ದಿಜೀವಿಗಳು- ಇವರು ಬ್ರಿಟಿಷರ ಜೊತೆ ರಾಜಿ ಮಾತುಕತೆ ಮಾಡಿಕೊಂಡಿದ್ದರು. ಇವರು ಪ್ರಾಮಾಣಿಕವಾಗಿ ಸ್ವಾತಂತ್ರ್ಯ ಹೋರಾಟವನ್ನೂ ಮಾಡಿಲ್ಲ, ಬ್ರಿಟೀಷರ ಲಾಠಿ ಏಟಿನ ರುಚಿಯನ್ನೂ ನೋಡಿಲ್ಲ. ಇವರೆಲ್ಲಾ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು" ಎಂದು ಪರೋಕ್ಷವಾಗಿ ಗಾಂಧೀಜಿ ಬಗ್ಗೆ ಲೇವಡಿ ಮಾಡಿದರು.

  Budget 2020 Highlights: ಮಧ್ಯಮ ವರ್ಗಕ್ಕೆ ಸಿಹಿ ಉದ್ಯಮಿಗಳಿಗೆ ಕಹಿ, ಖಾಸಗೀಕರಣದತ್ತ ಸಾರ್ವಜನಿಕ ವಲಯ, ಷೇರುಪೇಟೆ ಕುಸಿತ; ಇಲ್ಲಿದೆ ಬಜೆಟ್ ಹೈಲೆಟ್ಸ್​

  ವಿಚಾರವಾದಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಬೆಂಗಳೂರು ಹಿಂದುತ್ವದ ರಾಜಧಾನಿ ಆಗಬೇಕು. ಜಗತ್ತನ್ನೇ ಹಿಂದುತ್ವದ ರಾಜಧಾನಿ  ಮಾಡಬೇಕು. ಈ ಬಗ್ಗೆ ನಾವು ಯೋಜನೆ ರೂಪಿಸಬೇಕು. ಅರ್ಥವಿಲ್ಲದ ಗೂಬೆಗಳು ಏನಾದ್ರೂ ಮಾಡಲಿ. ಆ ಎಡಬಿಡಂಗಿಗಳಿಗೆ ಉದ್ಯೋಗವಿಲ್ಲ," ಎಂದು ಜರಿದರು.

  ಮುಂದುವರೆದ ಅವರು, "ಹಿಂದುತ್ವ ಅಂದರೆ ವಿರೋಧದ ವಿಚಾರ ಅಂತಾರೆ. ಸರಿಯಾಗಿ ಅರ್ಥ ಮಾಡಿಕೊಳ್ಳಲು ಯೋಗ್ಯತೆ ಇಲ್ಲದವರಿಗೆ ಮಾತ್ರ ಹಿಂದುತ್ವ ಅರ್ಥವಾಗಲ್ಲ.  ಇತಿಹಾಸ ಗೊತ್ತಿಲ್ಲದ ಮೂರ್ಖರು ದೇಶದಲ್ಲಿದ್ದಾರೆ. ಇವರು ವೇದಗಳಿಗೆ ಚೌಕಟ್ಟು ಹಾಕೋಕೆ ಹೊರಟಿದ್ದಾರೆ.  ನಾನು ಅವರನ್ನು ಅಜ್ಞಾನಿಗಳು ಎಂದು ಕರೆಯಲ್ಲ. ಸತ್ಯ ಅರ್ಥ ಆಗಿದ್ದರೂ ಒಪ್ಪಿಕೊಳ್ಳುವ  ಶಕ್ತಿ ಅವರಲ್ಲಿ ಇಲ್ಲ. ಅದಕ್ಕಾಗಿ ಆರ್ಯರು ಮಧ್ಯ ಏಷ್ಯಾದಿಂದ ಬಂದವರು ಅಂತಾರೆ.  ಪೂರ್ವಾಗ್ರಹ ಪೀಡಿತ ಪಿಂಡಗಳು ಅದನ್ನೇ ಹೇಳ್ತಾರೆ. ನನ್ನ ಭಾಷೆ ಕಠೋರವಾಗಿದ್ದರೆ ಕ್ಷಮಿಸಿಬಿಡಿ. ಅಂತಹ ಮೂಢರಿಗೆ ನಾನು ಹೀಗೆ ಹೇಳೋದು" ಎಂದು ಕಿಡಿಕಾರಿದರು.

  ಇದೇ ವೇಳೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅನಂತಕುಮಾರ್​, "ಕೆಲವರು ಭ್ರಮೆಯಲ್ಲಿಯೇ ಬದುಕುತ್ತಿದ್ದಾರೆ.  ಅಂತವರಿಗೆ ಅನಂತ್ ಹೆಗಡೆ ವಿರೋಧವಾಗಿ ಕಾಣಬಹುದು. ಸಿಎಎ ಬಗ್ಗೆ ಯಾವುದೇ ವಿವಾದವಿಲ್ಲ. ಇದು ವಿರೋಧಿಸಿದವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ಪೂರ್ವಾಗ್ರಹದಿಂದ ವಿರೋಧಿಸುತ್ತಿದ್ದಾರೆ. ಕೆಲವರಿಗೆ ಬ್ರಾಹ್ಮಣರನ್ನು ಕಂಡರೆ ಬೈಯ್ಯುವುದೇ ಗೀಳಾಗಿದೆ. ಹಿಂದುತ್ವವನ್ನ ವಿರೋಧಿಸುವುದೇ ಅವರ ಕೆಲಸವಾಗಿದೆ" ಎಂದು ವಿಚಾರವಾದಿಗಳ ವಿರುದ್ದ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.

  ಇದು ಜುಮ್ಲಾ; ಸುಳ್ಳಿನ ಕಂತೆ; ಬೆಟ್ಟ ಅಗೆದು ಇಲಿ ಹಿಡಿದಂತೆ: ಕೇಂದ್ರ ಬಜೆಟ್ ಬಗ್ಗೆ ರಾಜ್ಯ ವಿಪಕ್ಷ ನಾಯಕರ ಪ್ರತಿಕ್ರಿಯೆ

  "ದೇಶದ ರಾಷ್ಟ್ರೀಯತೆಯ ಬಗ್ಗೆಯೇ ಇಲ್ಲಿ ಚರ್ಚೆಯಾಗುತ್ತದೆ. ಆದರೆ, ಇವರು ಅಮೆರಿಕಾದಲ್ಲಿ ಹೋಗಿ ಮಾತನಾಡಲಿ, ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಲಿ ಅಂತವರನ್ನ ನಾನು ಎಡಬಿಡಂಗಿಗಳು ಎನ್ನುತ್ತೇನೆ .ವಿತಂಡವಾದಕ್ಕೆ ನಾವು ಅವಕಾಶ ಕೊಡಬೇಕಾ? ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಎಲ್ಲವನ್ನೂ ಒಪ್ಪಬೇಕಾ? ಚರ್ಚೆ ದೇಶಕ್ಕೆ ಪೂರಕವಾಗಿರಬೇಕು. ಒಂದು ಅಸ್ತಿತ್ವದ ಬುಡಕ್ಕೆ ಬಾಂಬ್ ಇಡುವ ದುರಂತ ಇನ್ನೆಲ್ಲೂ ಇಲ್ಲ.

  ಸಿಎಎ ಬಂದ ನಂತರ ತುಂಬ ಒಳ್ಳೆಯದಾಗಿದೆ.  ಯಾವ್ಯಾವ ಹುತ್ತದಲ್ಲಿ ಯಾವ್ಯಾವ ಹಾವು ಇವೆ ಗೊತ್ತಾಗಿದೆ. ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಬುದ್ಧಿ ಜೀವಿಗಳಿದ್ದಾರೆ ಎಂಬುದೂ ಈಗ ಜಗಜ್ಜಾಹೀರಾಗಿದೆ. ಇಂತವರು ಇನ್ನಷ್ಟು ಬರಲಿ, ಬಿಲದ ಕೊನೆಯ ಇಲಿಯೂ ಹೊರಬರಲಿ. ನಮಗೂ ಟಾರ್ಗೆಟ್ ಮಾಡೋಕೆ ಅವಕಾಶ ಸಿಗುತ್ತದೆ. ಸರ್ಕಾರಕ್ಕೂ ಇದರ ಬಗ್ಗೆ ಇಚ್ಚಾಶಕ್ತಿಯಿದೆ. ಇಂತವರನ್ನು ಟಾರ್ಗೆಟ್ ಮಾಡುವುದೇ ನಮ್ಮ ಕೆಲಸ" ಎಂದು ಆಕ್ರೋಶ ವ್ಯಕ್ತಪಡಿಸಿದರು.

   
  First published: