• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ‘ಬಿಎಸ್​ಎನ್​​ಎಲ್​​ ಸಂಸ್ಥೆಯ ನೌಕರರು ದೇಶದ್ರೋಹಿಗಳು‘ - ಸಂಸದ ಅನಂತಕುಮಾರ್​​ ಹೆಗಡೆ

‘ಬಿಎಸ್​ಎನ್​​ಎಲ್​​ ಸಂಸ್ಥೆಯ ನೌಕರರು ದೇಶದ್ರೋಹಿಗಳು‘ - ಸಂಸದ ಅನಂತಕುಮಾರ್​​ ಹೆಗಡೆ

ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ

ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಟರ್​ನೆಟ್​ ಸೇವೆ ಸರಿಯಾಗಿ ಒದಗಿಸುವಂತೆ ಬಿಎಸ್​ಎನ್​ಎಲ್​ ಸಂಸ್ಥೆ ಅಧಿಕಾರಿಗಳಿಗೆ ಸಂಸದ ಅನಂತಕುಮಾರ್ ಹೆಗಡೆ ಹೋದ ತಿಂಗಳೇ ಸೂಚನೆ ನೀಡಿದ್ದರು. ಏನು ಮಾಡದ ಬಿಎಸ್​ಎನ್​ಎಲ್​ ಅಧಿಕಾರಿಗಳು ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ಸರಿಪಡಿಸಿದ್ದೇವೆ. ಪಂಚಾಯಿತಿಗಳಿಗೆ ಇಂಟರ್​ನೆಟ್​ ವ್ಯವಸ್ಥೆ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದರು.

ಮುಂದೆ ಓದಿ ...
  • Share this:

ಕಾರವಾರ(ಆ.11): ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಕೇಂದ್ರದ ಮಾಜಿ ಸಚಿವ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವ ಎಲ್ಲರೂ ದೇಶದ್ರೋಹಿಗಳು. ದೇಶದ್ರೋಹಿಗಳಿಂದಲೇ ಬಿಎಸ್​ಎನ್​​ಎಲ್​​ ಸಂಸ್ಥೆ ತುಂಬಿ ತುಳುಕುತ್ತಿದೆ ಎನ್ನುವ ಮೂಲಕ ಅನಂತಕುಮಾರ್​ ಹೆಗಡೆ ವಿವಾದಿತ ಹೇಳಿಕೆ ನೀಡಿದ್ದಾರೆ. 


ಸೋಮವಾರ ಕುಮಟಾದಲ್ಲಿ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಸದ ಅನಂತಕುಮಾರ್​ ಹೆಗಡೆ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬಿಎಸ್‍ಎನ್‍ಎಲ್ ಸಂಸ್ಥೆ ಸರಿಪಡಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ಇದು ನಮ್ಮಿಂದ ಸಾಧ್ಯವಾಗಿಲ್ಲ. ಎಷ್ಟೇ ಹೇಳಿದರೂ ಸಮರ್ಪಕ ಸೇವೆ ನೀಡಲು ಬಿಎಸ್‍ಎನ್‍ಎಲ್ ಸಂಸ್ಥೆಯ ನೌಕರರಿಂದ ಆಗುತ್ತಿಲ್ಲ ಎಂದರು.


ಇನ್ನು, ಕೇಂದ್ರ ಸರ್ಕಾರ ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಬಿಎಸ್​ಎನ್​​ಎಲ್​​ ಸಂಸ್ಥೆಯಿಂದ ಮನೆಗೆ ಕಳುಹಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಸರ್ಕಾರ ಎಲ್ಲಾ ರೀತಿ ಸೌಕರ್ಯ ನೀಡಿದರೂ ಸಂಸ್ಥೆಯ ನೌಕರರು ಕೆಲಸ ಮಾಡುತ್ತಿಲ್ಲ. ಸದ್ಯದಲ್ಲೇ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಿಎಸ್‍ಎನ್‍ಎಲ್ ಎಂಬ ಸಂಸ್ಥೆಯನ್ನು ಖಾಸಗೀಕರಣ ಮಾಡುತ್ತೇವೆ ಎಂದರು.


ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಟರ್​ನೆಟ್​ ಸೇವೆ ಸರಿಯಾಗಿ ಒದಗಿಸುವಂತೆ ಬಿಎಸ್​ಎನ್​ಎಲ್​ ಸಂಸ್ಥೆ ಅಧಿಕಾರಿಗಳಿಗೆ ಸಂಸದ ಅನಂತಕುಮಾರ್ ಹೆಗಡೆ ಹೋದ ತಿಂಗಳೇ ಸೂಚನೆ ನೀಡಿದ್ದರು. ಏನು ಮಾಡದ ಬಿಎಸ್​ಎನ್​ಎಲ್​ ಅಧಿಕಾರಿಗಳು ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ಸರಿಪಡಿಸಿದ್ದೇವೆ. ಪಂಚಾಯಿತಿಗಳಿಗೆ ಇಂಟರ್​ನೆಟ್​ ವ್ಯವಸ್ಥೆ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಅನಂತಕುಮಾರ್ ಹೆಗಡೆ​​​ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುವ ವೇಳೆ ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: ‘ಬೆಂಗಳೂರಿನಲ್ಲಿ ಈ ಬಾರಿ ಗಣೇಶನ ಹಬ್ಬ ವಿಜೃಂಭಣೆಯಿಂದ ಆಚರಿಸುವಂತಿಲ್ಲ‘ - ಬಿಬಿಎಂಪಿ ಕಮೀಷನರ್​​​​ ಮಂಜುನಾಥ್​​

top videos
    First published: