• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Chalavadi Narayanaswamy: ಹೊಸ ಸರ್ಕಾರ ರಚನೆಯಾದಾಗಲೇ ಬಿಜೆಪಿ ನಾಯಕರ ಟಾರ್ಗೆಟ್ ಶುರುವಾಗಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಹೊಸ ಸರ್ಕಾರ ರಚನೆಯಾದಾಗಲೇ ಬಿಜೆಪಿ ನಾಯಕರ ಟಾರ್ಗೆಟ್ ಶುರುವಾಗಿದೆ: ಛಲವಾದಿ ನಾರಾಯಣಸ್ವಾಮಿ

ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವಿಧಾನ ಪರಿಷತ್ ಸದಸ್ಯ

ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವಿಧಾನ ಪರಿಷತ್ ಸದಸ್ಯ

ಪೊಲೀಸ್ ಇಲಾಖೆಯಲ್ಲಿ ಕೇಸರೀಕರಣ ಅಂತಿದ್ದೀರಿ. ಅವರು ಎಂದಾದ್ರೂ ಕೇಸರಿ ಡ್ರೆಸ್ ಹಾಕೋದನ್ನ ನೋಡಿದ್ರಾ.? ಈ ರೀತಿ ಅವರ ಮೇಲೆ‌ ಹಗೆತನ ತೋರುವುದು ಸರಿಯಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

 • News18 Kannada
 • 4-MIN READ
 • Last Updated :
 • Bangalore, India
 • Share this:

ಬೆಂಗಳೂರು: ಹೊಸ ಸರ್ಕಾರ ರಚನೆಯಾಗಿದೆ ಅಷ್ಟೇ, ಆಗಲೇ ಬಿಜೆಪಿ ನಾಯಕರ ಟಾರ್ಗೆಟ್ ಪ್ರಾರಂಭವಾಗಿದೆ. ಅಶ್ವಥ್ ನಾರಾಯಣ್ ಮೇಲೆ ಹಿಂದಿನ ವಿಚಾರಕ್ಕೆ FIR ಹಾಕ್ತಿದ್ದಾರೆ. ಹರೀಶ್ ಪೂಂಜಾ ಮೇಲೂ FIR ಹಾಕ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಹರೀಶ್ ಪೂಂಜಾ ಮೇಲೆ FIR ಹಾಕುವ ಕೆಲಸ ಮಾಡಲಾಗ್ತಿದೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಾ? ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, ಕಾರ್ಯಕರ್ತರನ್ನ, ಮುಖಂಡರನ್ನ ಧಮಕಿ ಹಾಕಿ ಬಾಯಿ ಮುಚ್ಚಿಸ್ತೀರಾ. ಇಷ್ಟಕ್ಕೆ ಹೆದರಿಸಲು ಸಾಧ್ಯವಾ? ಕೆಲ ರೌಡಿಗಳು ಪೊಲೀಸರಿಗೆ ಧಮಕಿ ಹಾಕೋದನ್ನ ನೋಡಿದ್ದೇವೆ. ಎಕ್ಸ್ ಪೀರಿಯನ್ಸ್ ಇರೋ ಅಧಿಕಾರಿಗಳಿಗೆ ಧಮಿಕಿ ಹಾಕುವ ಕೆಲಸ ಮಾಡಲಾಗ್ತಿದೆ. ಈ ಮೂಲಕ ಅವರ ಬಾಯಿ ಮುಚ್ಚಿಸೋ ಕೆಲಸ‌ ಮಾಡಲಾಗ್ತಿದೆ. ಕೇಸರೀಕರಣ ಅಂತಿದ್ದೀರಿ. ಅವರು ಎಂದಾದ್ರೂ ಕೇಸರಿ ಡ್ರೆಸ್ ಹಾಕೋದನ್ನ ನೋಡಿದ್ರಾ.? ಈ ರೀತಿ ಅವರ ಮೇಲೆ‌ ಹಗೆತನ ತೋರುವುದು ಸರಿಯಲ್ಲ ಎಂದು ಹೇಳಿದರು.


ಇದನ್ನೂ ಓದಿ: Harish Poonja: ಸಿಎಂ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜಾ! ಪ್ರಕರಣ ದಾಖಲು


ಇನ್ನು, ಇಂದು ಕೆಲವು ಮಂತ್ರಿಗಳ ಹೇಳಿಕೆ ನೋಡಿದೆ. ಎಂ.ಬಿ ಪಾಟೀಲ್ ಹೇಳಿಕೆ ಏನಂದ್ರೆ. ನೀರಾವರಿ ಇಲಾಖೆಯಲ್ಲಿ 40% ಮಾಡಿದ್ದೀರಿ ಅವರನ್ನೆಲ್ಲಾ ಜೈಲಿಗೆ ಕಳಿಸ್ತೀನಿ ಅಂತ. ಅವರೇನು ನೀರಾವರಿ ಮಂತ್ರಿನಾ? ಅದರ ಅರ್ಥ ಅವರಿಗೆ ನೀರಾವರಿ ಮಂತ್ರಿ ಬೇಕು ಅಂತ. ಇದರ ಕಥೆ ಮುಂದೆ ಗೊತ್ತಾಗುತ್ತೆ. ಮತ್ತೊಬ್ಬ ಸಚಿವರು RSS, ಭಜರಂಗದಳ ಬ್ಯಾನ್ ಮಾಡ್ತೀನಿ ಅಂತ ಹೇಳ್ತಾರೆ. ಅದರ ಅರ್ಥ ಅವರಿಗೆ ಹೋಮ್ ಮಿನಿಸ್ಟರ್ ಬೇಕು ಅಂತ. ಖಾತೆಗಳ ಹಂಚಿಕೆಯೇ ಆಗಿಲ್ಲ, ಆದ್ರೆ ನಾನೇ ಅದರ ವಾರಸುದಾರ ಅಂತ ಈಗಲೇ ಹೇಳಿಕೊಳ್ಳುತ್ತಿದ್ದಾರೆ ಎಂದರು.


ಇದನ್ನೂ ಓದಿ: Ashok Rai: ಅಶೋಕ್ ರೈಗೆ ವೋಟ್ ಹಾಕಿ ಹೀಗಾಯ್ತು ಅಂತಾ ಜನ ಹೇಳ್ಬಾರ್ದು; ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ


ಇನ್ನು ನಿಮ್ಮ ಈ ಬೆದರಿಕೆಗೆ ಬಿಜೆಪಿ ಸೊಪ್ಪು ಹಾಕಲ್ಲ ಎಂದ ಛಲವಾದಿ ನಾರಾಯಣಸ್ವಾಮಿ, ನೀವು ಅಧಿಕಾರಕ್ಕೆ ಬಂದಿದ್ದೀರಿ. ವಾಮ ಮಾರ್ಗವನ್ನ ಜನರಿಗೆ ತೋರಿಸಿದ್ದೀರಿ. ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅಂತ ಜನಕ್ಕೆ ತೋರಿಸಿದ್ದೀರಿ. ನೀವು ಮಾಡುವ ಮಾಡುವ ತಪ್ಪಿಗೆ ಲೈನ್ ಮ್ಯಾನ್, ಕಂಡಕ್ಟರ್ ಗಳಿಗೆ ಸಮಸ್ಯೆ ಮಾಡಬೇಕಾ.? ಎಂದು ಪ್ರಶ್ನಿಸಿದರು.
ಇನ್ನು ಜನರಿಗೆ ಮನವಿ ಮಾಡ್ತೀನಿ. ಜನರು ಕೆಲಸ ಮಾಡಲು ಬರುವವರಿಗೆ ತೊಂದರೆ ಕೊಡಬೇಡಿ ಎಂದ ಛಲವಾದಿ ನಾರಾಯಣಸ್ವಾಮಿ, ನೀವು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಪ್ರಶ್ನೆ ಮಾಡಿ. ಬಿಲ್ ಕಲೆಕ್ಟರ್, ಕಂಡಕ್ಟರ್‌ಗಳಿಗೆ ಸಮಸ್ಯೆ ಮಾಡಬೇಡಿ ಎಂದರು.

top videos
  First published: