Police Complaint: ಸಿದ್ದರಾಮಯ್ಯರನ್ನು ತಕ್ಷಣ ಅರೆಸ್ಟ್​ ಮಾಡಿ; ಸಿದ್ದು ವಿರುದ್ಧ ಛಲವಾದಿ ನಾರಾಯಣಸ್ವಾಮಿ ದೂರು

‘ಸಿದ್ದರಾಮಯ್ಯ ನಮ್ಮನ್ನು ಗುಲಾಮರು, ಅಸ್ಪೃಶ್ಯರೆಂದು ಕರೆದು ನಿಂದಿಸಿದ್ದಾರೆ. ಇಂಥ ನಿಂದನೆಯ ಅಧಿಕಾರ ಅವರಿಗೆ ಇಲ್ಲ. ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ್ದೇನೆ. ಜಾತಿ ನಿಂದನೆ ಮಾಡಿದ್ದರಿಂದ ಅವರನ್ನು ಬಂಧಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ದೂರು

ಛಲವಾದಿ ನಾರಾಯಣಸ್ವಾಮಿ ದೂರು

  • Share this:
ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಸಿದ್ದರಾಮಯ್ಯ ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy)  ಪೊಲೀಸ್​ ಕಂಪ್ಲೇಂಟ್ (Police Complaint)​ ನೀಡಿದ್ದಾರೆ. ಸಿದ್ದರಾಮಯ್ಯ ಅವರು ನನ್ನನ್ನು ಸದಾ ಅಸ್ಪೃಶ್ಯ ಎಂದು ತಿಳಿಸಿ ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ, ನಗರದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ (High Grounds Police Station) ದೂರು ನೀಡಿದ್ರು. ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತಾಡಿದ ಅವರು ‘ಜಾತಿ ನಿಂದನೆ ಮಾಡಿರುವುದರಿಂದ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಸಿದ್ದರಾಮಯ್ಯ ಬಗ್ಗೆ ಗೌರವ ಇದೆ. ಆದರೆ, ಅವರ ರಾಜಕೀಯ ಜಿದ್ದಾಜಿದ್ದಿ ವಿಚಾರದಲ್ಲಿ ನಮಗೆ ಆಕ್ಷೇಪವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ರು. 

‘ಸಿದ್ದರಾಮಯ್ಯ ನಮ್ಮನ್ನು ಗುಲಾಮರು, ಅಸ್ಪೃಶ್ಯರೆಂದಿದ್ದಾರೆ‘

‘ಸಿದ್ದರಾಮಯ್ಯ ನಮ್ಮನ್ನು ಗುಲಾಮರು, ಅಸ್ಪೃಶ್ಯರೆಂದು ಕರೆದು ನಿಂದಿಸಿದ್ದಾರೆ. ಇಂಥ ನಿಂದನೆಯ ಅಧಿಕಾರ ಅವರಿಗೆ ಇಲ್ಲ. ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ್ದೇನೆ. ಜಾತಿ ನಿಂದನೆ ಮಾಡಿದ್ದರಿಂದ ಅವರನ್ನು ಬಂಧಿಸಬೇಕು. ಬಂಧಿಸುವಲ್ಲಿ ತಡ ಮಾಡಿದರೆ ಧರಣಿ ಮಾಡುತ್ತೇನೆ’ ಎಂದೂ ಹೇಳಿದ್ದಾರೆ. ಎಸ್ಸಿ, ಎಸ್ಟಿ, ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಈ ದೂರು ನೀಡಿದ್ದೇವೆ. ಅವರು ಜಾತಿ ನಿಂದನೆ ಮಾಡಿದ್ದು, ಎಫ್‍ಐಆರ್ ಮಾಡಿ ಬಂಧಿಸಲು ಒತ್ತಾಯಿಸಿದ್ದೇನೆ. ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಧರಣಿ ಮಾಡುವುದಾಗಿ," ನಾರಾಯಣಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಮನಸ್ಥಿತಿ ದಲಿತ ವಿರೋಧಿ

ಕಾಂಗ್ರೆಸ್ ದಲಿತ ವಿರೋಧಿ, ಸಿದ್ದರಾಮಯ್ಯರ ದಲಿತ ವಿರೋಧಿ ಧೋರಣೆಗೆ ಸಾಕ್ಷಿಗಳಿವೆ. ದಲಿತ ಮಹಿಳೆ ಮೋಟಮ್ಮನವರು ತಮ್ಮ ಆತ್ಮಕಥೆ ಪುಸ್ತಕದಲ್ಲಿ ಸಿದ್ದರಾಮಯ್ಯನವರು ನನ್ನ ಎಲ್ಲ ಬೆಳವಣಿಗೆಗೂ ಬಾಗಿಲು ಹಾಕಿದರು ಎಂದು ಹೇಳಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಮನಸ್ಥಿತಿ ದಲಿತ ವಿರೋಧಿ ಎಂಬುದು ಸಿದ್ದರಾಮಯ್ಯರ ಮೂಲಕ ವ್ಯಕ್ತವಾಗುತ್ತಿದೆ ಎಂದು ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: Agnipath: ಸೈನಿಕರ ಅನ್ನ ಕಸಿಯಲು ಹೊರಟಿದೆ ದೇಶದ್ರೋಹಿ ಬಿಜೆಪಿ ಸರ್ಕಾರ; ಸಿದ್ದರಾಮಯ್ಯ

ಸಿದ್ದರಾಮಯ್ಯರನ್ನು ತಕ್ಷಣ ಬಂಧಿಸುವಂತೆ ಆಗ್ರಹ

ಸರಕಾರ ಹಾಗೂ ಪೊಲೀಸರು ಇದರ ಬಗ್ಗೆ ತೀಕ್ಷ್ಣ ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯರನ್ನು ತಕ್ಷಣ ಬಂಧಿಸಿ ನನಗೆ ನ್ಯಾಯ ಕೊಡಬೇಕು ಎಂದು ಅವರು ಮನವಿ ಮಾಡಿದರು. ಇದು ಅಂಗೈ ಹುಣ್ಣು ಇದ್ದಂತೆ. ಇದಕ್ಕೆ ಕನ್ನಡಿ ಬೇಕಾಗಿಲ್ಲ. ಆದ್ದರಿಂದ ತಕ್ಷಣ ಅವರನ್ನು ಬಂಧಿಸಬೇಕಿದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ಸಂದರ್ಭದಲ್ಲಿ, ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಹಿಂದೆಯೂ ದೂರು ನೀಡಿದ್ದ ನಾರಾಯಣಸ್ವಾಮಿ:

'ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಸೇರಿದ್ದಾರೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಆದರೆ, ಈ ಬಗ್ಗೆ ಅವರು ಕ್ಷಮೆ ಕೋರದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಪರಾಧ ತಡೆ ಕಾಯ್ದೆ ಅಡಿ ಕೇಸು ದಾಖಲಿಸುವಂತೆ ಕೋರಿ ಈ ಹಿಂದೊಮ್ಮೆ ಛಲವಾದಿ ನಾರಾಯಣಸ್ವಾಮಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದರು.

Corona 4th Wave: ಕೊರೊನಾ ಬಾಹುಗಳಲ್ಲಿ ರಾಜಧಾನಿ; ಕೋವಿಡ್ ಪಾಸಿಟಿವಿಟಿ ರೇಟ್ ಶೇ.3.26ಕ್ಕೇರಿಕೆ

ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇಲ್ಲ

ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಮಾತಾಡಿದ್ದ ಛಲವಾದಿ ನಾರಾಯಣಸ್ವಾಮಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು.  ‘ಕಾಂಗ್ರೆಸ್ ಶಾಸಕರು ಪಕ್ಷ ನಿಷ್ಠೆಯಿಂದ ಮತ ಹಾಕಬೇಕು ಎನ್ನುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಶಾಸಕರು ಆತ್ಮಸಾಕ್ಷಿಗೆ ಅನುಗುಣವಾಗಿ ಅಡ್ಡ ಮತದಾನ ಮಾಡಿ ಎನ್ನುವುದು ಯಾವ ನ್ಯಾಯ?’ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕೇಳಿದರು.
Published by:Pavana HS
First published: