ಬೈಕ್ಗೆ ಬಿಜೆಪಿ ಎಂಎಲ್ಸಿ ರವಿಕುಮಾರ್ (BJP MLC Ravikumar) ಕಾರ್ ಡಿಕ್ಕಿಯಾಗಿರುವ ಘಟನೆ ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರ (National Highway 75) ರಸ್ತೆಯಲ್ಲಿನ ಲಕ್ಷ್ಮೀಸಾಗರ ಗೇಟ್ ಬಳಿ ಈ ಅಪಘಾತ (Accident) ಸಂಭವಿಸಿದೆ. ಅಪಘಾತದ ಬಳಿಕ ರವಿಕುಮಾರ್ ತಮ್ಮ ಕಾರ್ನ್ನು (Car) ಅಪಘಾತದ ಸ್ಥಳದಿಂದ 300 ಮೀಟರ್ ದೂರ ನಿಲ್ಲಿಸಿದ್ದಕ್ಕೆ ಸ್ಥಳೀಯರು (Public) ರವಿಕುಮಾರ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.
ಬೈಕ್ ಸವಾರ ಗೋಪಾಲ್ ಎಂಬವರು ಲಕ್ಷ್ಮೀಸಾಗರ ಗೇಟ್ ಬಳಿ ಯೂಟರ್ನ್ ತೆಗೆದುಕೊಳ್ತಿದ್ದರು. ಈ ವೇಳೆ ಗೋಪಾಲ್ ಬೈಕ್, MLC ರವಿಕುಮಾರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಆಗುತ್ತಿದ್ದಂತೆ ಗೋಪಾಲ್ ಕೆಳಗೆ ಬಿದ್ದಿದ್ದಾರೆ.
ಅಪಘಾತ ನಂತರ 300 ಮೀಟರ್ ಮುಂದಕ್ಕೆ ಹೋಗಿ MLC ರವಿಕುಮಾರ್ ಕಾರ್ ನಿಲ್ಲಿಸಿದ್ದಾರೆ. ಅಪಘಾತ ಆಗಿದ್ದರೂ ಕಾರು ನಿಲ್ಲಿಸದೇ ಹೋಗಿದ್ದಕ್ಕೆ ಇತರೆ ವಾಹನ ಸವಾರರ ಆಕ್ರೋಶ ಹೊರ ಹಾಕಿದರು.
ನೀವು ಯಾವ ಸೀಮೆ ಎಂಎಲ್ಸಿ?
ರವಿಕುಮಾರ್ ಕಾರ್ನಿಂದ ಕೆಳಗೆ ಇಳಿಯುತ್ತಿದ್ದಂತೆ ಅವರನ್ನು ಸುತ್ತವರಿದ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಯಾವ ಸೀಮೆ, ಎಂಲ್ಸಿ, ಮಾನವೀಯತೆ ಇಲ್ವಾ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಅವಾಚ್ಯ ಪದ ಸಹ ಬಳಕೆ ಮಾಡಿದ್ದಾರೆ. ಎಂಎಲ್ಸಿ ರವಿ ಕುಮಾರ್ಗೆ ಛೀಮಾರಿ ಹಾಕಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಸೌಜನ್ಯಕ್ಕೂ ಗಾಯಾಳುವನ್ನ ಮಾತನಾಡಿಸಿ, ಆಸ್ಪತ್ರೆಗೆ ಕರೆದೊಯ್ಯುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಜನರ ಆಕ್ರೋಶದ ನಂತರ ರವಿಕುಮಾರ್ ಅವರು ಗಾಯಾಳು ಯೋಗಕ್ಷೇಮ ವಿಚಾರಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೇಮಗಲ್ ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿದ ನಂತರವೇ ರವಿಕುಮಾರ್ ಅಲ್ಲಿಂದ ತೆರಳಿದರು. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಯಾವುದೇ ಕೇಸ್ ಬೇಡ ಎಂದಿರುವ ಬೈಕ್ ಸವಾರ
ಅಪಘಾತದ ಸಂಬಂಧ ನ್ಯೂಸ್ 18 ಕನ್ನಡಕ್ಕೆ ವೇಮಗಲ್ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮಾಹಿತಿ ನೀಡಿದ್ದಾರೆ. ಬೈಕ್ ಸವಾರ ಗೋಪಾಲ್ ಅವರಿಗೆ ತರಚಿದ ಗಾಯಗಳಾಗಿವೆ. ಕೋಲಾರದ ಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಗೋಪಾಲ್ ಮನೆಗೆ ವಾಪಾಸ್ ಹೋಗಿದ್ದಾರೆ. ಯಾವುದೇ ಕೇಸ್ ಬೇಡ ಎಂದು ಖುದ್ದು ಹೇಳಿ ವಾಪಾಸ್ ಹೋಗಿದ್ದಾರೆ. ಮೇಲ್ನೋಟಕ್ಕೆ ಅಪಘಾತಕ್ಕೆ ಬೈಕ್ ಸವಾರನ ನಿರ್ಲಕ್ಷ್ಯ ಎಂದು ತಿಳಿದು ಬಂದಿದೆ ಎಂದರು.
ಇದನ್ನೂ ಓದಿ: Vachananda Swamiji: ಬಿಎಸ್ವೈಯಿಂದ 10 ಕೋಟಿ ವಸೂಲಿ; ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್ ಆರೋಪ
ಶಾಸಕರ ವಿಚಾರಕ್ಕೆ ಕಾರ್ಯಕರ್ತೆಯರ ಜಡೆ ಜಗಳ
ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (BJP MLA SR Vishwanath) ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಕಾರ್ಯಕರ್ತೆಯರು (Activist) ಕೈ ಕೈ ಮಿಲಾಯಿಸಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾಂಗ್ರೆಸ್ ಕಾರ್ಯಕರ್ತೆ ಭಾಗ್ಯ ಎಂಬವರು ಮಾಡಿದ ಮೆಸೇಜ್ನಿಂದ (Whatsapp Message) ಜಗಳ ಆರಂಭವಾಗಿದೆ.
ಇದೀಗ ಬಿಜೆಪಿ ಕಾರ್ಯಕರ್ತೆಯರು ದೂರು ದಾಖಲಿಸಿದ್ದಾರೆ. ಎಸ್.ಆರ್.ವಿಶ್ವನಾಥ್ ಅವರಿಗೆ ಕುರಿತು ಸಂದೇಶವನ್ನು ಭಾಗ್ಯ ಎಂಬವರು ಬಿಜೆಪಿ ಕಾರ್ಯಕರ್ತರ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಿದ್ದರು. ಇದೇ ವಿಷಯ ಜಡೆ ಜಗಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Basanagowda Patil Yatnal: ಜೋಕರ್ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಿ; ಯತ್ನಾಳ್ಗೆ ವಚನಾನಂದ ಸ್ವಾಮೀಜಿ ತಿರುಗೇಟು
ಪೋಸ್ಟರ್ ಫೋಟೋ ವೈರಲ್
ಎಸ್.ಆರ್.ವಿಶ್ವನಾಥ್ ಪವರ್ ಏನಿದ್ರೂ ಅಭಿಮಾನಿಗಳ ಮುಂದೆ ಮಾತ್ರ. ಆದರೆ ವಿಶ್ವನಾಥ್ನಿಂದ ನೊಂದಿರುವ ಭಾಗ್ಯಳ ಮುಂದೆ ಪವರ್ ಆಫ್. ಪವರ್ ಇಲ್ಲದಿರುವ ವಿಶ್ವನಾಥ್, ಈ ಭೂಮಿ ಮೇಲೆ ಇರೋದಕ್ಕೆ ನಾನೇ ಕಾರಣ ಎಂದು ಬರೆದಿರುವ ಪೋಸ್ಟರ್ನ್ನು ವಾಟ್ಸಪ್ನಲ್ಲಿ ಶೇರ್ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ