Bharathi Shetty: ಸರ್ಕಾರಕ್ಕೆ ನಮ್ಮ ನೋವು ಅರ್ಥ ಆಗುವವರೆಗೆ ಮಾತನಾಡ್ತೇನೆ; ಅತ್ಯಾಚಾರ ಪ್ರಕರಣ ಚರ್ಚೆ ವೇಳೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಕ್ರೋಶ

ಸರ್ಕಾರಕ್ಜೆ ನಮ್ಮ ನೋವು, ಕೂಗು ಅರ್ಥ ಆಗುವವರೆಗೆ ಮಾತನಾಡ್ತೇನೆ ಎಂದಾಗ,  ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ ಎಂದು  ಎಸ್ ಆರ್ ಪಾಟೀಲ್ ಹೇಳಿದರು. ಅದಕ್ಕೆ ಭಾರತಿ ಶೆಟ್ಟಿ ಅವರು, ಸರ್ಕಾರಕ್ಕೆ ಪಂಚೇಂದ್ರಿಯ ಇದೆ ಅದಕ್ಕೆ ಬಡಿದೆಬ್ಬಿಸ್ತಿದ್ದೇನೆ ಎಂದರು.

ಭಾರತಿ ಶೆಟ್ಟಿ

ಭಾರತಿ ಶೆಟ್ಟಿ

 • Share this:
  ಬೆಂಗಳೂರು: ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ (Rape Case) ಸಂಬಂಧ ನಿಯಮ 68 ರ ಮೇರೆಗೆ ವಿಧಾನ ಪರಿಷತ್​ನಲ್ಲಿ ಚರ್ಚೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ (BJP Member Bharathi Shetty) ಅವರು, ದೇಶದಲ್ಲಿ ಹರಿಯುವ ಎಲ್ಲಾ ಪವಿತ್ರ ನದಿಗಳಿಗೆ ಮಹಿಳೆಯರ ಹೆಸರನ್ನ ಇಟ್ಟಿದ್ದಾರೆ. ದೊಡ್ಡ ದೊಡ್ಡ ಭಾಷಣಗಳಲ್ಲಿ ಮಹಿಳೆಯರನ್ನು ಹಾಡಿ ಹೊಗಳುತ್ತಾರೆ. ಆದರೆ ಆಗುತ್ತಿರುವ ಶೋಷಣೆ, ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಅತ್ಯಾಚಾರ ಕೇವಲ ಅತ್ಯಾಚಾರ ಅಲ್ಲ. ಸಂತ್ರಸ್ತರ ಕುಟುಂಬ ದೀರ್ಘ ಕಾಲದವರೆಗೂ ನೋವು ಅನುಭವಿಸಬೇಕಾಗುತ್ತದೆ. ಅತ್ಯಾಚಾರ ನಡೆಯುವುದು ಕಡಿಮೆ ಆಗಿಲ್ಲ, ಜಾಸ್ತಿ ಆಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

  2013-14 ರಲ್ಲಿ ಫೋಕ್ಸೋ ಕಾನೂನು ತಂದ್ರು. ಅತೀ ಹೆಚ್ಚು ಮಕ್ಕಳ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಕರ್ನಾಟಕದಲ್ಲಿ. ಈ ರೀತಿ ಅಪರಾಧ ಆದಾಗ ಕಾನೂನು ವ್ಯವಸ್ಥೆ ಸರಿ ಇಲ್ಲ ಅಂತ ಆರೋಪ ಮಾಡುತ್ತೇವೆ. ಅಪರಾಧಿಗಳಿಗೆ ಶಿಕ್ಷೆ ಕಡಿಮೆ ಆಗುತ್ತಿದೆ. 2018 ರಲ್ಲಿ 459 ಪ್ರಕರಣಗಳು ವರದಿಯಾಗುತ್ತದೆ. 2019 ರಲ್ಲಿ 497 ಪ್ರಕರಣ ವರದಿಯಾಗಿದೆ. 2020 ರಲ್ಲಿ 472 ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಮಾಹಿತಿ ಇಲ್ಲ. ಪ್ರಗತಿಯಲ್ಲಿ ಇದೆಯಂತೆ ಯಾವ ರೀತಿಯಲ್ಲಿ ಪ್ರಗತಿಯಲ್ಲಿ ಇದೆಯೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಕೇರಳ , ಅಸ್ಸಾಂ, ರಾಜಸ್ಥಾನ ರಾಜ್ಯಗಳಲ್ಲೂ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಒಂಟಿ ಮಹಿಳೆಯ ಮೇಲೆ ಅತ್ಯಾಚಾರಗಳು ಹೆಚ್ಚಾಗಿವೆ. ಸಮುದ್ರದಲ್ಲಿ ಶೌಚಕ್ಕೆ ಹೋದಾಗ ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಭಾರತೀ ಶೆಟ್ಟಿ ಅವರು ಹೇಳುವಾಗ  ಮಧ್ಯ ಪ್ರವೇಶಿಸಿದ ಪರಿಷತ್ ಪ್ರತಿಪಕ್ಷ ಎಸ್ ಆರ್ ಪಾಟೀಲ್ ಅವರು, ನಿಮ್ಮ ಮಾತನ್ನು ಕೇಳಲು ಗೃಹ ಮಂತ್ರಿಗಳೇ ಇಲ್ಲ ಎಂದರು.

  ಮೈಸೂರಿನಲ್ಲಿ ಅತ್ಯಾಚಾರ ನಡೆದ ಅದೇ ದಿನ ತುಮಕೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಯಿತು. ಬಂಧಿಸಿದವರ ಮೊಬೈಲ್ ನಲ್ಲಿ ಸಾವಿರಾರು ನಗ್ನ ಚಿತ್ರಗಳು ಇದ್ದವು. ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನ ಪ್ರಕರಣ ಮರೆಯಾಗುವ ಮುನ್ನವೇ ಆಗಲೇ ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಯಿತು. ನಿರ್ಭಯಾ ಪ್ರಕರಣಕ್ಕಿಂತ ಇನ್ನೂ ಆತಂಕಗೊಳಿಸಿದ್ದು ಮುಂಬೈ ಅತ್ಯಾಚಾರ ಪ್ರಕರಣ. ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕ್ತಾರೆ, ಬಾಟಲ್ ಹಾಕ್ತಾರೆ ಅಂದ್ರೆ ಎಷ್ಟು ವಿಕೃತಿ ಇರಬಹುದು ಎಂದು ಭಾರತೀ ಶೆಟ್ಟಿ ಅವರು ನೋವು ತೋಡಿಕೊಂಡರು. ಆಗ ಸಭಾಪತಿ ಪ್ರಾಣೇಶ್ ಅವರು, ಎಷ್ಟರವರೆಗೆ ಮಾತಾಡ್ತೀರಿ ಭಾರತಿ ಶೆಟ್ಟಿಯವರೇ ಎಂದರು. ಎಲ್ಲಿಯವರೆಗೆ ನ್ಯಾಯ ಸಿಗೋದಿಲ್ವೋ ಅಲ್ಲಿಯವರೆಗೆ ಮಾತನಾಡ್ತೇನೆ ಎಂದು ಭಾರತಿ ಶೆಟ್ಟಿ ಪ್ರತಿಕ್ರಿಯಿಸಿದಾಗ ಸದಸ್ಯರು ಟೇಬಲ್ ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು. ಸರ್ಕಾರಕ್ಜೆ ನಮ್ಮ ನೋವು, ಕೂಗು ಅರ್ಥ ಆಗುವವರೆಗೆ ಮಾತನಾಡ್ತೇನೆ ಎಂದಾಗ,  ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ ಎಂದು  ಎಸ್ ಆರ್ ಪಾಟೀಲ್ ಹೇಳಿದರು. ಅದಕ್ಕೆ ಭಾರತಿ ಶೆಟ್ಟಿ ಅವರು, ಸರ್ಕಾರಕ್ಕೆ ಪಂಚೇಂದ್ರಿಯ ಇದೆ ಅದಕ್ಕೆ ಬಡಿದೆಬ್ಬಿಸ್ತಿದ್ದೇನೆ ಎಂದರು.

  ಇದನ್ನು ಓದಿ: Assembly Session- ಸಿದ್ದರಾಮಯ್ಯ ಪಂಚೆ ಕಳಚಿಕೊಂಡಿದ್ದು, ಸುಧಾಕರ್, ಅರಗ ಜ್ಞಾನೇಂದ್ರ ಪೇಚಿಗೀಡಾಗಿದ್ದು…

  ಇನ್ನು ವಿಧಾನಸಭೆಯಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅತ್ಯಾಚಾರ ಪ್ರಕರಣ ಚರ್ಚೆ ಮುಂದುವರಿಸಿದರು ಅತ್ಯಾಚಾರಗಳು ಈಗ ಆಗ್ತಿಲ್ಲ. ಮೊದಲಿನಿಂದಲೂ ನಡೆಯುತ್ತಿವೆ. ಈಗ ಆಗಿರೋದಕ್ಕೆ ನೀವು ಜವಾಬ್ದಾರರಲ್ವೇ ಎಂದು ಹೇಳಿ ಪೊಲೀಸ್ ವರ್ಗಾವಣೆ ಬಗ್ಗೆ ಪ್ರಸ್ತಾಪ ಮಾಡಿದರು. ವರ್ಗಾವಣೆಗೆ ಹಣ ಕೊಟ್ಟು ಬರ್ತಾರೆ. ಉಪ್ಪಾರಪೇಟೆ ಠಾಣೆಗೆ ಹಾಗೇ ಬಾರ್ತಾರಾ. ಕೊಟ್ಟ ಮೇಲೆ ಅದನ್ನ ದುಡಿದುಕೊಳ್ಬೇಕಲ್ಲ. ಅದಕ್ಕೆ ಇನ್ಸೆಸ್ಟಿಗೇಶನ್ ಬಿಟ್ಟುಬಿಡ್ತಾರೆ. ಹಣ ಮಾಡೋಕೆ ಗಮನ ಕೊಡ್ತಾರೆ. ಹಾಗಾಗಿಯೇ ಇಂತ ಪ್ರಕರಣಗಳು ನಡೆಯೋದು ಎಂದರು.
  Published by:HR Ramesh
  First published: