ಆಡಿಯೋ ಪ್ರಕರಣ; ಎಸ್​ಐಟಿಗೆ ಆಕ್ಷೇಪ, ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಪಟ್ಟು

ಎಸ್​ಐಟಿಗೆ ಕೊಡಲು ತೀರ್ಮಾನಿಸಲಾಗಿರುವ ಈ ಪ್ರಕರಣದಲ್ಲಿನ  ದೂರುದಾರ ಯಾರು? ದೂರದಾರನ ಕೈಲೇ ತನಿಖೆ ನೀಡುವುದು ಸರಿಯೇ. ಇದು ನ್ಯಾಯಸಮ್ಮತವೇ  ಎಂದು ಬಿಜೆಪಿ ನಾಯಕರು ಪ್ರಶ್ನಿಸಿದರು

Seema.R | news18
Updated:February 12, 2019, 1:00 PM IST
ಆಡಿಯೋ ಪ್ರಕರಣ; ಎಸ್​ಐಟಿಗೆ ಆಕ್ಷೇಪ, ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಪಟ್ಟು
ರಮೇಶ್​​ ಕುಮಾರ್​​
Seema.R | news18
Updated: February 12, 2019, 1:00 PM IST
ಬೆಂಗಳೂರು (ಫೆ.12): ಆಡಿಯೋ ಪ್ರಕರಣವನ್ನು ಎಸ್​ಐಟಿಗೆ ಒಪ್ಪಿಸುವ ನಿರ್ಧಾರದ ಕುರಿತು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಬಿಜೆಪಿ ಶಾಸಕರ ಸುರೇಶ್​ ಕುಮಾರ್​, ಹಕ್ಕು ಬಾಧ್ಯತಾ ಸಮಿತಿ ಇರುವುದೇ ಈ ರೀತಿಯ ಪ್ರಕರಣಗಳನ್ನು ತೀರ್ಮಾನ ಮಾಡಲು. ನಾವು ಹಲವು ಎಸ್​ಐಟಿ ತನಿಖೆಗಳನ್ನು ನಾವು ನೋಡಿದ್ದೇವೆ. ಸದನಕ್ಕೆ ಸಂಬಂಧಿಸಿದ ವಿಚಾರ ಎಸ್​ಐಟಿಗೆ ವಹಿಸುವುದು ಸೂಕ್ತವಲ್ಲ. ನಿಮ್ಮಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ ಎಂದರು.

ಸದನ ಜನತಾ ನ್ಯಾಯಾಲಯ. ಇಲ್ಲಿ ನಿಮ್ಮ ಮೇಲಿನ ಆರೋಪಗಳನ್ನು ಮುಕ್ತಗೊಳಿಸಿದೆ. ಹಕ್ಕುಬಾಧ್ಯತಾ ಸಮಿತಿ ರಚನೆ ಮಾಡಿ ಆಮೂಲಕ ತನಿಖೆ ನಡೆಸಿ. ಈ ಸಮಿತಿ ಯಾವುದೇ ಎಕ್ಸ್​ಪರ್ಟ್​ನ ಸಹಾಯ ಪಡೆಯಬಹುದು ಎಂದರು.
ಎಸ್​ಐಟಿಗೆ ಕೊಡಲು ತೀರ್ಮಾನಿಸಲಾಗಿರುವ ಈ ಪ್ರಕರಣದಲ್ಲಿನ  ದೂರುದಾರ ಯಾರು?

ದೂರದಾರನ ಕೈಲೇ ತನಿಖೆ ನೀಡುವುದು ಸರಿಯೇ. ಇದು ನ್ಯಾಯಸಮ್ಮತವೇ  ಎಂದು ಪ್ರಶ್ನಿಸಿದರು.Loading...ಬಜೆಟ್ ದಿನ  ಬಜೆಟ್ ಮೇಲೇ ನಿಗಾ ಇರುತ್ತೆ. ಆದರೆ, ಅಂದು ಸ್ಪೀಕರ್ ಹೆಸರನ್ನ ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದು ಯಾರು? ಆಡಿಯೋ ಪ್ರಕರಣದಲ್ಲಿ ಪ್ರಸ್ತಾಪಿಸಿದ್ದು ಯಾರು? ನಿಮ್ಮಲ್ಲಿ ವಿಶ್ವಾಸ ಇಲ್ವಾ ಅಂತ ಪ್ರಶ್ನಿಸಬೇಕಿದೆ. ಸ್ಪೀಕರ್ ಗೌರವಕ್ಕೆ ಧಕ್ಕೆಯಾಗಿದೆ
ಸ್ಪೀಕರ್ ಪರ ಇಡೀ ಸದನ ನಿಂತಿದೆ. ಆದರೂ ಮತ್ತೆ ಎಸ್​ಐಟಿಗೆ ಒಪ್ಪಿಸುವ ಅವಶ್ಯಕತೆ ಏನಿದೆ ಎಂದು ಕೆಜಿ ಬೋಪಯ್ಯ ಪ್ರಶ್ನಿಸಿದರು


ಹಣ ಕೊಡುತ್ತೇವೆ ಎಂದು ಬರೀ ಮಾತನಾಡಿದ್ದಾರೆ. ಎಲ್ಲೂ ಹಣ ಕೊಟ್ಟಿಲ್ಲ, ಮನಿ ಟ್ರಾನ್ಸ್ಯಾಕ್ಷನ್ ಕೂಡ ಆಗಿಲ್ಲ. ಇದನ್ನ ಹೊರಗಡೆ ತಂದವರು ಮುಖ್ಯಮಂತ್ರಿಗಳು.
ಸ್ಟಿಂಗ್ ಆಪರೇಷನ್ ಸಾಕ್ಷ್ಯ ಆಗಲ್ಲ ಎಂದರುಸದನದ ಎಲ್ಲಾ 225 ಸದಸ್ಯರು ನಿನ್ನೆಯೇ ನಿಮ್ಮ ಮೇಲಿನ ಕಳಂಕ ತೆಗೆದುಹಾಕಿದ್ದೇವೆ
ತನಿಖೆ ಆಗಲೇಬೇಕು ಅನ್ನೊದಾದ್ರೆ ಸದನಸಮಿತಿ ರಚನೆಯಾಗಲಿ. ಎಸ್​ಐಟಿ ಬೇಡ. ಎಸ್​ಐಟಿ ಸಿಎಂ ಮಾತೇ ಕೇಳುತ್ತದೆ. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕು. ನಿವೃತ್ತ ನ್ಯಾಯಾಧೀಶರ ಬದಲು ಬೇಕಾದರೆ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆಗೆ ಮುಂದಾಗಲಿ  ಎಂದು ಕೆಜಿ ಬೋಪಯ್ಯ ಒತ್ತಾಯಿಸಿದರು.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...