ಇಬ್ಬರು ಜೆಡಿಎಸ್​ ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ; ಶಾಸಕ ಯತ್ನಾಳ್​

ಸಿದ್ದರಾಮಯ್ಯ, ಕುಮಾರಸ್ವಾಮಿ ನಮಗೆ  ಬೆಂಬಲಿಸುವುದಿಲ್ಲ ಅಂದರು. ಅವರ ಎಲ್ಲಾ ಶಾಸಕರು ನಮ್ಮೊಂದಿಗಿದ್ದಾರೆ. ಎಲ್ಲ ಶಾಸಕರು ನಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುತ್ತಾರೆ. ಯಡಿಯೂರಪ್ಪ ಸರ್ಕಾರ ಅಧಿಕಾರಾವಧಿ ಪೂರ್ಣ ಮಾಡಲಿದೆ.

Latha CG | news18-kannada
Updated:November 24, 2019, 5:50 PM IST
ಇಬ್ಬರು ಜೆಡಿಎಸ್​ ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ; ಶಾಸಕ ಯತ್ನಾಳ್​
ಬಸನಗೌಡ ರಾ. ಪಾಟೀಲ್ ಯತ್ನಾಳ್
  • Share this:
ಬಾಗಲಕೋಟೆ(ನ.24): ಇಬ್ಬರು ಜೆಡಿಎಸ್​ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಅವರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಆ ಶಾಸಕರು ಯಾರೆಂದು ನಾನು ಈಗ ಹೇಳಲ್ಲ. ಮುಂದೆ ನಿಮಗೆ ಗೊತ್ತಾಗುತ್ತದೆ ಎಂದು ವಿಯಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್​ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಆದಿಯಾಗಿ ಯಾವ ಶಾಸಕರಿಗೂ ಮಧ್ಯಂತರ ಚುನಾವಣೆ ಬೇಡವಾಗಿದೆ.‌ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾತನ್ನು ಯಾರೂ ಕೇಳುವುದಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ನಮಗೆ  ಬೆಂಬಲಿಸುವುದಿಲ್ಲ ಅಂದರು. ಅವರ ಎಲ್ಲಾ ಶಾಸಕರು ನಮ್ಮೊಂದಿಗಿದ್ದಾರೆ. ಎಲ್ಲ ಶಾಸಕರು ನಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುತ್ತಾರೆ. ಯಡಿಯೂರಪ್ಪ ಸರ್ಕಾರ ಅಧಿಕಾರಾವಧಿ ಪೂರ್ಣ ಮಾಡಲಿದೆ ಎಂದು ಹೇಳಿದರು.

ಎಂಟಿಬಿ ದೊಡ್ಡ ಮನುಷ್ಯ ಇರಬಹುದು, ಆದರೆ ಇನ್ನೂ ಸಣ್ಣತನ ಹೋಗಿಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಯತ್ನಾಳ್​ಗೆ ಮಂತ್ರಿ ಸ್ಥಾನ ಸಿಗದೇ ಇರುವ ವಿಚಾರವಾಗಿ, ನಾನೇನು ಅಪೇಕ್ಷೆ ಮಾಡಿದವನಲ್ಲ‌. ಮಂತ್ರಿ ಪದವಿ ಕೇಳಿದವನೂ ಅಲ್ಲ. ಲಾಬಿನೂ ಮಾಡಿಲ್ಲ. ಒಟ್ಟಿನಲ್ಲಿ ಆಡಳಿತ  ಸರ್ಕಾರದ ಶಾಸಕ ಎಂಬ ಹೆಮ್ಮೆ ಇದೆ. ಸ್ಥಿರ ಸರ್ಕಾರ ಉಳಿಯಲಿ ಎನ್ನುವುದೊಂದೇ ಆಸೆ. ಪ್ರತಿಯೊಂದು ಸಮುದಾಯಕ್ಕೆ ಮಂತ್ರಿ ಸ್ಥಾನ ಸಿಗಲಿ ಎನ್ನುವ ಆಸೆ ಇರುತ್ತದೆ. ಹಿಂದೆ ವಾಜಪೇಯಿ ಅವರು ನನ್ನನ್ನು ಕೇಂದ್ರದ ಮಂತ್ರಿ ಮಾಡಿದ್ರು. ಈಗ ಯಡಿಯೂರಪ್ಪನವರಿಗೆ ಸರ್ಕಾರ ನಡೆಸಲು ಸಂಪೂರ್ಣ ಅಧಿಕಾರವಿದೆ. ಅವರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಯಡಿಯೂರಪ್ಪನವರ ಜೊತೆ ಎಲ್ಲ ಶಾಸಕರು ಗಟ್ಟಿಯಾಗಿ ಇದ್ದೇವೆ. ಯಾವುದೇ ಪಕ್ಷ ಇರಲಿ ಯಡಿಯೂರಪ್ಪನವರನ್ನ ಏನು ಮಾಡಿಕೊಳ್ಳೋಕೆ ಆಗುವುದಿಲ್ಲ.  ಭ್ರಮಾಲೋಕದಲ್ಲಿರುವ ಸಿದ್ದರಾಮಯ್ಯರಾದಿಯಾಗಿ ಏನು ಮಾಡಿಕೊಳ್ಳೋಕೆ‌ ಆಗುವುದಿಲ್ಲ.  ಪಕ್ಷದಲ್ಲಿ ಯಾವುದೇ ಬದಲಾವಣೆಗಳು ಆಗಲ್ಲ. ಚುನಾವಣೆ ಬಳಿಕ ಬದಲಾವಣೆ ನಡೆದರೂ ಯಡಿಯೂರಪ್ಪನವರ ಪರವಾಗಿ ಬದಲಾವಣೆ ಆಗುತ್ತವೆ ಎಂದು ಬಿಎಸ್​ವೈ ಪರ ಬ್ಯಾಟಿಂಗ್​ ಮಾಡಿದರು.

ನಿಗೂಢ ಬೆಳವಣಿಗೆಗಳು: ಅಜಿತ್ ಪವಾರ್​ಗೆ ಎನ್​ಸಿಪಿ ಶಾಸಕರ ಬೆಂಬಲ ಪತ್ರ ಸಿಕ್ಕಿದ್ದು ಹೇಗೆ? ಶರದ್ ಪವಾರ್ ನಂಬಿಕಸ್ಥ ಶಿವಾಜಿರಾವ್ ಪಾತ್ರ ಏನು?

ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟ ಕುದುರೆ ಏರದವರು ಶೂರರು ಅಲ್ಲ, ಧೀರರು ಅಲ್ಲ , ಬೆಳಗಾವಿ ರಾಜಕಾರಣ ಬದಲಿಸುತ್ತೇನೆ ಎಂದಿರುವ ವಿಚಾರಕ್ಕೆ, ಅವರೊಬ್ಬ ದೊಡ್ಡ ಮಹಿಳಾ ನಾಯಕಿ. ಅವರ ಕೈಯಲ್ಲಿ ಅಧಿಕಾರ ಇದೆ ಅಂತ ಮಾತನಾಡುತ್ತಾರೆ. ಮಹೇಶ ಕುಮಟಳ್ಳಿ  ಅವರ ಬಗ್ಗೆ ಅಷ್ಟು ಹಗುರವಾಗಿ ಮಾತನಾಡೋದು ಸರಿಯಲ್ಲ. ನಮ್ಮ ಸಹೋದರಿ ರೀತಿ ಅವರು. ಅವರಿಗೊಂದು ಸಲಹೆ ಕೊಡ್ತೀನಿ. ಆ ರೀತಿ ನಾನು 12 ಕೋಟಿ ಹಣ ತಂದಿದ್ದೀನಿ. ನೀನು ಏನು ತಂದಿದ್ದಿಯಾ ಅಂತ ಕೇಳಬಾರದು. ನಾಳೆ ಅಥಣಿಗೆ ಹೊರಟಿದ್ದೇನೆ. ಅಲ್ಲೇ ಹೆಬ್ಬಾಳ್ಕರಗೆ ಉತ್ತರ ಕೊಡುತ್ತೇನೆ ಎಂದರು.ಬೈ ಎಲೆಕ್ಷನ್ ಪ್ರಚಾರಕ್ಕೆ ಬಿಎಸ್​ವೈ ಸೂಚಿಸಿರುವ ವಿಚಾರವಾಗಿ, ಈ ಉಪ ಚುನಾವಣೆಯಲ್ಲಿ  ಮಂಗಳವಾರದಿಂದ ಪ್ರಚಾರ ಮಾಡುತ್ತೇನೆ. 15ರಲ್ಲಿ 12 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

First published: November 24, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading