• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪ. ಬಂ. ಚುನಾವಣೆ ಬಳಿಕ ಹರಿಯಾಣ ಮತ್ತು ಕರ್ನಾಟಕ ಸಿಎಂ ಬದಲಾವಣೆ; ಶಾಸಕ ಯತ್ನಾಳ್ ಹೊಸ ಬಾಂಬ್

ಪ. ಬಂ. ಚುನಾವಣೆ ಬಳಿಕ ಹರಿಯಾಣ ಮತ್ತು ಕರ್ನಾಟಕ ಸಿಎಂ ಬದಲಾವಣೆ; ಶಾಸಕ ಯತ್ನಾಳ್ ಹೊಸ ಬಾಂಬ್

ಬಸನಗಗೌಡ ಪಾಟೀಲ್ ಯತ್ನಾಳ

ಬಸನಗಗೌಡ ಪಾಟೀಲ್ ಯತ್ನಾಳ

ಪಶ್ಚಿಮ ಬಂಗಾಳ ಚುನಾವಣೆ ಮುಗಿದ ಮೇಲೆ ಕರ್ನಾಟಕದಲ್ಲಿ ನೂರಕ್ಕೆ ನೂರು ಬದಲಾವಣೆ ಖಚಿತ.  ಯಾರೋ ಎಲ್ಲಿಂದಲೋ ಬಂದು ಏನೇ ಹೇಳಿದರೂ ಸಿಎಂ ಬದಲಾಗುತ್ತಾರೆ ಎಂದು ಮತ್ತೆ ಯತ್ನಾಳ ಭವಿಷ್ಯ ನುಡಿದರು.

  • Share this:

ವಿಜಯಪುರ(ಮಾ.20): ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಕರ್ನಾಟಕವಷ್ಟೇ ಅಲ್ಲ, ಹರಿಯಾಣದಲ್ಲೂ ಬಿಜೆಪಿ ಸಿಎಂ ಬದಲಾಗಲಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಗೌಡ ಪಾಟೀಲ ಯತ್ನಾಳ ಹೊಸ ಬಾಂಬ್​ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಧ್ವನಿಯನ್ನು ಅಡಗಿಸಲು ಯಾರಿಂದಲೂ ಆಗುವುದಿಲ್ಲ. ಕಾಲ ಎಲ್ಲದಕ್ಕೂ ಉತ್ತರ ಹೇಳಲಿದೆ.  ಕೆಲವೊಂದು ದಿನ ಇರುತ್ತೆ.  ಐದೂ ರಾಜ್ಯಗಳ ಚುನಾವಣೆ ಮುಗಿಯಲಿ.  ಯಾರ ಧ್ವನಿ ಎತ್ತರವಾಗುತ್ತೆ ನೋಡೋಣ.  ಸಿಎಂ ಬದಲಾವಣೆ ನೂರಕ್ಕೆ ನೂರು ಖಚಿತ.  ಈ ಮುಖ್ಯಮಂತ್ರಿಯನ್ನು ತೆಗೆದುಕೊಂಡು ಮುಂದಿನ ಚುನಾವಣೆಗೆ ಹೋಗುವುದು ಕಷ್ಟ.  ಇದೆಲ್ಲ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ಅವರಿಗೆ ಗೊತ್ತಿದೆ.  ಆದರೆ, ಅವರು ಸುಮ್ಮನೆ ಹಾಗೇ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.


ಸಿಎಂ ಬದಲಾವಣೆ ಮಾಡಲೇಬೇಕು.  ಬಿಜೆಪಿ ಉಳಿಯಬೇಕಾದರೆ ಮುಖ್ಯಮಂತ್ರಿ ಬದಲಾವಣೆ ಅವಶ್ಯವಿದೆ.  ಯಾವ ರೀತಿ ಉತ್ತರಾಖಂಡದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾಯಿಸಿದೆಯೋ, ಹರಿಯಾಣ ಮತ್ತು ಕರ್ನಾಟಕ ಮುಂದಿನ ಸಾಲಿನಲ್ಲಿವೆ.  ಪಶ್ಚಿಮ ಬಂಗಾಳ ಚುನಾವಣೆ ಮುಗಿದ ಮೇಲೆ ಕರ್ನಾಟಕದಲ್ಲಿ ನೂರಕ್ಕೆ ನೂರು ಬದಲಾವಣೆ ಖಚಿತ.  ಯಾರೋ ಎಲ್ಲಿಂದಲೋ ಬಂದು ಏನೇ ಹೇಳಿದರೂ ಸಿಎಂ ಬದಲಾಗುತ್ತಾರೆ ಎಂದು ಮತ್ತೆ ಯತ್ನಾಳ ಭವಿಷ್ಯ ನುಡಿದರು.


Coronavirus: ಕೊರೊನಾ ಎರಡನೇ ಅಲೆ ಭೀತಿ; ಅತ್ತಿಬೆಲೆ ಗಡಿಯಲ್ಲಿಲ್ಲ ಹೊರ ರಾಜ್ಯದವರಿಗೆ ತಪಾಸಣೆ..!


ನಾನು ಭ್ರಷ್ಟಾಚಾರ ಮತ್ತು ವಂಶ ರಾಜಕಾರಣದ ವಿರುದ್ಧ ಮಾತನಾಡಿದ್ದೇನೆ.  ತಾವು ಬರೀ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸುತ್ತೇನೆ ಎಂದು ಶಾಸಕರೊಬ್ಬರು ಹೇಳಿದ್ದಾರೆ.  ಈ ಇಬ್ಬರೂ ನಾಯಕರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ.   ಕುಟುಂಬ ರಾಜಕಾರಣ ಮಾಡಿಲ್ಲ.  ಇವರು ನನಗೆ ಆದರ್ಶರಾಗಿದ್ದಾರೆ.  ಭ್ರಷ್ಟರನ್ನು, ಕುಟುಂಬ ರಾಜಕಾರಣ ಮಾಡುವವರ ಹೆಸರನ್ನು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಶಾಸಕಾಂಗ ಪಕ್ಷದ ಸಭೆ ಕರೆಯುವುದು ಸಿಎಂ ಉದ್ದೇಶವಿಲ್ಲ.  ಈಶ್ವರಪ್ಪ ಅವರನ್ನು ಟಾರ್ಗೆಟ್ ಮಾಡಲು ಕರೆಯುತ್ತಾರೆ.  ಇಂದು ಶಾಸಕರಿಗೆ ಸರಿಯಾಗಿ ಅಭಿವೃದ್ಧಿ ಹಣ ಹಂಚಿಲ್ಲ.  ಸಿಎಂ ಬೇಕಾಬಿಟ್ಟಿಯಾಗಿ ಮುಖ್ಯಮಂತ್ರಿಗಳು ನೇರವಾಗಿ ಅನುದಾನ ಹಂಚಿದ್ದಾರೆ.  ಬಿಜೆಪಿಯ ಕೇವಲ 38 ಶಾಸಕರಿಗೆ ಕಾಂಗ್ರೆಸ್ಸಿನ 40 ಜನ ಶಾಸಕರಿಗೆ ಮತ್ತು ಜೆಡಿಎಸ್ ಶಾಸಕರಿಗೆ ಹೆಚ್ಚಿಗೆ ಹಣ ನೀಡುತ್ತಾರೆ ಎಂದು ಅವರು ಆರೋಪಿಸಿದರು.


ಯಡಿಯೂರಪ್ಪ ಸಿಎಂ ಆಗಲು ಕಾರಣರಾದ ಶಾಸಕರನ್ನು ಸಿಎಂ ಈಗ ಸರಿಯಾಗಿ ನೋಡುತ್ತಿಲ್ಲ.  ವಿಮಾನ ನಿಲ್ದಾಣದ ವಿಚಾರದಲ್ಲಿ ವಿಜಯಪುರಕ್ಕೆ ರೂ. 220 ಕೋ. ನೀಡಿದ್ದರೆ, ಶಿವಮೊಗ್ಗಕ್ಕೆ ರೂ. 380 ಕೋ. ನೀಡಿದ್ದಾರೆ.  ಅದರಲ್ಲೂ ತಾರತಮ್ಯವಾಗಿದೆ.  ಸಿಎಂ ಆದ ಮೇಲೆ ನೀರಾವರಿಗೆ ರೂ. 25000  ಪ್ರತಿವರ್ಷ ನೀಡುವುದಾಗಿ ಹೇಳಿದ್ದರು.  ಈ ಬಾರಿ ಬಜೆಟ್ ನಲ್ಲಿ ಕೇವಲ ರೂ. 5600 ಕೋ. ಮೀಸಲಿಟ್ಟಿದ್ದಾರೆ.  ಈ ರೀತಿ ಅನ್ಯಾಯವಾದಾಗ ಧ್ವನಿ ಎತ್ತಲೇಬೇಕಲ್ವ.  ನಾವು ಜನಪ್ರತಿನಿಧಿ ಇದ್ದೇವೆ.  ಬಿಜೆಪಿ ಮುಂದಿನ ಭವಿಷ್ಯದ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ.  ದಕ್ಷಿಣ ಭಾರತದ ಕೊನೆಯ ಮುಖ್ಯಮಂತ್ರಿ ಯಡಿಯೂರಪ್ಪ ಆಗಬಾರದು.  ಇನ್ನು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಬೇಕು.  ಆ ಹೋರಾಟ ನಮ್ಮದಿದೆ.  ನರೇಂದ್ರ ಮೋದಿ ಅವರ ಆದರ್ಶದಂತೆ ಕರ್ನಾಟಕದಲ್ಲಿಯೂ ಅಂಥವರೇ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದು ವಿಜಯಪುರದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Published by:Latha CG
First published: