HOME » NEWS » State » BJP MLA YATNAL HITS OUT AT BJP LEADERS INCLUDING MP RENUKACHARYA LG

30 ವರ್ಷ ರಾಜಕೀಯ ಮಾಡಿದ್ದೀನಿ, ಯಾರಿಗೂ ಹೆದರೋ ಮಗ ನಾನಲ್ಲ; ಗುಡುಗಿದ ಶಾಸಕ ಯತ್ನಾಳ್​

ಇನ್ನು, ಇದೇ ವೇಳೆ ಈ ವರ್ಷ ಶಾಲೆಯ ಫೀಸ್ ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟರು. ನಾನು ಸಹ ಶಿಕ್ಷಣ ಸಂಸ್ಥೆ ಹೊಂದಿದ್ದೇನೆ ಆದರೆ ಈ ವರ್ಷ ಅರ್ಧ ಫೀಸ್ ಮಾಡಿದರೆ ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

news18-kannada
Updated:January 6, 2021, 2:18 PM IST
30 ವರ್ಷ ರಾಜಕೀಯ ಮಾಡಿದ್ದೀನಿ, ಯಾರಿಗೂ ಹೆದರೋ ಮಗ ನಾನಲ್ಲ; ಗುಡುಗಿದ ಶಾಸಕ ಯತ್ನಾಳ್​
ಬಸನಗೌಡ ಪಾಟೀಲ್ ಯತ್ನಾಳ್.
  • Share this:
ಬೆಂಗಳೂರು(ಜ.06): ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಿದ್ದೇನೆ. ಅಭಿವೃದ್ದಿ ಬಗ್ಗೆ ಮಾತನಾಡಿದರೆ ಅದು ಪಕ್ಷ ವಿರೋಧಿ ಹೇಳಿಕೆ ಹೇಗಾಗುತ್ತೆ? ನಾನೇನು ಮಂತ್ರಿ ಮಾಡಿ ಅಂತ ಯಡಿಯೂರಪ್ಪನವರ ಮನೆಗೆ ಹೋಗಿಲ್ಲ. ಮೂವತ್ತು ವರ್ಷ ನಾನು ರಾಜಕೀಯ ಮಾಡಿದವನು. ಯಾರಿಗೂ ಹೆದರೋ ಮಗ ನಾನಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷೀಯರ ವಿರುದ್ಧ ತಿರುಗಿ ಬಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧವೂ ಕಿಡಿಕಾರಿದರು. ಗೋವಿಂದ ಕಾರಜೋಳ ಹೇಳಿದ್ದು ನಿಜ. ಸಭೆಯಲ್ಲಿ ಒಬ್ಬ ಶಾಸಕ ಮಾತ್ರ ಮಾತಾಡಿದ್ದು ನಿಜ. ಆ ಶಾಸಕ ಯಾರೆಂದರೆ ಹಾದಿ-ಬೀದಿಯಲ್ಲಿ ನಿಮಗೆ ಬೈಟ್​ ಕೊಡ್ತಾರಲ್ಲ ಅವರು ಎಂದು ರೇಣುಕಾಚಾರ್ಯರ ಹೆಸರೇಳದೆ ಯತ್ನಾಳ್​ ವಾಗ್ದಾಳಿ ನಡೆಸಿದರು.

ರೂರ್ಕೆಲಾ ಸ್ಟೀಲ್ ಪ್ಲಾಂಟ್​​ನಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಕಾರ್ಮಿಕರು ಸಾವು

ಮುಂದುವರೆದ ಅವರು, ಅಭಿವೃದ್ಧಿ ಬಗ್ಗೆ ಮಾತಾಡಿದ್ರೆ ಹೇಗೆ ಪಕ್ಷ ವಿರೋಧ ಆಗುತ್ತದೆ.  ನನ್ನ ಮೇಲೆ ಇನ್ನು ಶಿಸ್ತು ಸಮಿತಿಗೆ ಶಿಫಾರಸ್ಸು ಆಗಿಲ್ಲ ಎಂದರು. ಕಟೀಲ್ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ,  ಮಾಧ್ಯಮದವರು ನೀವು ಕೇಳುತ್ತೀರಿ. ಅವರು ಹಾಗೆ ಹೇಳಿರ್ತಾರೆ ಅಷ್ಟೇ ಎಂದ ಅವರು ಬಳಿಕ ಮಾಧ್ಯಮಗಳ ಮೇಲೆಯೇ ಹರಿಹಾಯ್ದರು. ಬೆಳಗ್ಗೆ ಸರಿಯಾಗಿ ತೋರಿಸುತ್ತೀರಿ. ಸಂಜೆ ಆದ್ರೆ ನಾಲಿಗೆ ಹರಿಬಿಟ್ಟ ಯತ್ನಾಳ್ ಅಂತ ಹಾಕುತ್ತೀರಿ. ಶಿವಾನಂದ ಸರ್ಕಲ್ ಅಕ್ಕ ಪಕ್ಕ ಇದ್ದವರು ಮಾಧ್ಯಮ ಕಂಟ್ರೋಲ್ ಮಾಡ್ತಾರೆ ಎಂದು ಯತ್ನಾಳ್ ಆರೋಪಿಸಿದರು.ಇನ್ನು, ಇದೇ ವೇಳೆ ಈ ವರ್ಷ ಶಾಲೆಯ ಫೀಸ್ ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟರು. ನಾನು ಸಹ ಶಿಕ್ಷಣ ಸಂಸ್ಥೆ ಹೊಂದಿದ್ದೇನೆ ಆದರೆ ಈ ವರ್ಷ ಅರ್ಧ ಫೀಸ್ ಮಾಡಿದರೆ ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
Published by: Latha CG
First published: January 6, 2021, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories