ದೇಶದ ವಿರುದ್ಧ ಮಾತನಾಡುವವರಿಗೆ ಗುಂಡೇಟೇ ಗತಿ; ರೋಹಿಂಗ್ಯಾ, ಅಕ್ರಮ ಬಾಂಗ್ಲಾದೇಶಿಗರನ್ನು ಒದ್ದೋಡಿಸುತ್ತೇವೆ; ಶಾಸಕ ಯತ್ನಾಳ

ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು.  ಅವರಿಗೆ ಹೇಗೆ ವಿಡಿಯೋ ಎಡಿಟ್ ಮಾಡೋದು, ಕಟ್ ಆಂಡ್ ಪೇಸ್ಟ್ ಮಾಡೋದು ಚೆನ್ನಾಗಿ ಗೊತ್ತಿದೆ.  ಯಾವುದೋ ಗಲಭೆಯದ್ದು ತಂದು ಇಲ್ಲಿ ಜೋಡಿಸೋದು.  ಹಾಡಿನ ಮಧ್ಯೆ ಸೇರಿಸೋದು ಗೊತ್ತಿರದವರು ಹೀಗೆ ಮಾಡ್ತಾರೆ. ಎಚ್​​ಡಿಕೆಯದ್ದು ನಾಟಕ ಕಂಪನಿ. 

news18-kannada
Updated:January 13, 2020, 10:02 AM IST
ದೇಶದ ವಿರುದ್ಧ ಮಾತನಾಡುವವರಿಗೆ ಗುಂಡೇಟೇ ಗತಿ; ರೋಹಿಂಗ್ಯಾ, ಅಕ್ರಮ ಬಾಂಗ್ಲಾದೇಶಿಗರನ್ನು ಒದ್ದೋಡಿಸುತ್ತೇವೆ; ಶಾಸಕ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ,(ಜ. 12): ಇನ್ನು ಮುಂದೆ ದೇಶದಲ್ಲಿ ಯಾರಾದರೂ ದೇಶದ ವಿರುದ್ಧ ಮಾತನಾಡಿದರೆ ಅವರಿಗೆ ಗುಂಡಿನೇಟೇ ಗತಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಪೌರತ್ವ ಕಾಯಿದೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮಣ್ಣಿನ ಮಗ ದೇವೇಗೌಡ, ಕಣ್ಣೀರಿನ ಮಗ ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ ಇಂದು ಎಲ್ಲರೂ ಭಾರತ ಮಾತಾ ಕಿ ಜೈ ಎನ್ನುತ್ತಿದ್ದಾರೆ. ನೀವು ಒಪ್ಪಿಕೊಳ್ಳಿ ಬಿಡಿ, ಕಾಯ್ದೆ ಜಾರಿ ಆಗಿದೆ.  ಕಾಶ್ಮೀರದಲ್ಲಿ 370 ನೇ ವಿಧಿ ತೆಗೆದಿದ್ದೇವೆ  ಇದೇನು ದೊಡ್ಡದು? ಪೌರತ್ವ ಕಾಯ್ದೆ ಬಂತು ಇನ್ನು ಮುಂದೆ ನಾವಿಬ್ಬರು-ನಮಗಿಬ್ಬರು ಕಾಯ್ದೆ ಬರುತ್ತೆ," ಎಂದು ಜನಸಂಖ್ಯೆ ನಿಯಂತ್ರಣ ಕಾಯಿದೆ ಜಾರಿಯಾಗುವ ಬಗ್ಗೆ ಸುಳಿವು ನೀಡಿದರು.

ಹಮ್ ಪಾಂಚ್ ಹಮಾರೆ ಪಚ್ಚೀಸ್(ನಾವು 5 ಮಂದಿ ನಮಗೆ 25 ಮಂದಿ) ಅಂದ್ರೆ ದೇಶ ಎಲ್ಲಿ ಉಳಿಯತ್ತೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವರ ಸಂವಿಧಾನವನ್ನು ನಾವು ಗೌರವಿಸಲೇಬೇಕು.  ನೀವು ಎಷ್ಟೇ ಜಿಗಿದಾಡಿದರೂ ಇನ್ನು 25 ವರ್ಷ ಪ್ರಧಾನಿ ಮೋದಿ ಹಾಗೂ ಅಮಿತಾ ಶಾ ಅವರನ್ನು ಕೆಳಗಿಳಿಸಲು ಆಗಲ್ಲ ಎಂದು ಭವಿಷ್ಯ ನುಡಿದರು.

ಜೆಎನ್​​​ಯು ಹಿಂಸಾಚಾರ ಕೇಸ್​: ಮುಸುಕುಧಾರಿ ಮಹಿಳೆ ಸೇರಿದಂತೆ 49 ಮಂದಿಗೆ ಪೊಲೀಸ್​​ ನೋಟಿಸ್‌

ಮಂಗಳೂರು ಗಲಭೆ, ಪೊಲೀಸರಿಂದ ಗೋಲಿಬಾರ್ ಕುರಿತು ಪ್ರಸ್ತಾಪಿಸಿ, ಕಲ್ಲು ಎಸೆಯಲು ಬಂದವರಿಗೆ ಪರಿಹಾರ ಯಾಕೆ ಕೊಡ್ತೀರಾ ಎಂದು ನಾನು ಮುಖ್ಯಮಂತ್ರಿಗಳಿಗೆ ಕೇಳಿದೆ.  ಮನೆಯಲ್ಲಿ ಐದೈದು ಜನ ಇರುತ್ತಾರೆ, ಒಬ್ಬ ಸತ್ತರೆ ರೂ. 5 ಲಕ್ಷ ಬಂತು ಅಂತಾರೆ.  ಇಬ್ಬರು ಸತ್ತರೆ ರೂ. 10 ಲಕ್ಷ ಬಂತು ಅಂತಾರೆ. ಅಂತವರಿಗೆ ಯಾಕೆ ಪರಿಹಾರ ಕೊಡಬೇಕು? ಎಂದು ಪ್ರಶ್ನಿಸಿದರು.

ಪೌರತ್ವ ಕಾಯಿದೆ ವಿರೋಧಿಸುತ್ತಿರುವವರ ವಿರುದ್ಧ ಹರಿಹಾಯ್ದ ಅವರು, ಈ ತುಕಡೆ ಗ್ಯಾಂಗ್​​​ನವರು, ಅವರಿಗೆ ಹುಟ್ಟಿದ ಹಾಗೆ ಮಾತನಾಡುತ್ತಾರೆ. ಈಶ್ವರ ಖಂಡ್ರೆ ಅವರಿಗೇನು ಬಸವ ತತ್ವದವರ ಟೆಂಡರ್ ಕೊಟ್ಟಿಲ್ಲ. ಒರಿಜನಲ್ ಬಸವಣ್ಣ ನಾವು ಇದ್ದೀವಿ. ಅಖಿಲ ಭಾರತೀಯ ವೀರಶೈವ, ಲಿಂಗಾಯತರ ಒಂದಾದರೂ ಲಕ್ಷಣ ನಿಮ್ಮಿಲ್ಲಿವೆಯಾ?  ಯಾವ ಯಾವ ಕಡೆ ದಾಡಿ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಧರ್ಮ, ನಮ್ಮ ದೇಶ ಉಳಿಬೇಕು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅತೀ ಶೀಘ್ರದಲ್ಲೇ ನಮಗೆ ಸೇರುತ್ತದೆ.  ಮುಂದೆ ಪಾಕಿಸ್ತಾನದ ಬಳಿಕ ಆಪ್ಘಾನಿಸ್ತಾನ ಭಾರತದ ಒಳಗೆ ಸೇರುತ್ತದೆ.  ಆಗ ಬೇಕಾದರೆ ಮೋದಿ ಅವರು ನಿವೃತ್ತಿ ಹೊಂದಲಿ. ಪಾಕಿಸ್ತಾನದಿಂದ ಬರುವ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ನೀಡುವುದಿಲ್ಲ.  ಅಕ್ರಮ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗರನ್ನು ಒದ್ದು ಹೊರ ಹಾಕುತ್ತೇವೆ.  ನೀವು ಬೇಕಿದ್ದರೆ ನಾಲಿಗೆ ಹರಿಬಿಟ್ಟ ಯತ್ನಾಳ ಎಂದು ಬರೆಯಿರಿ ಎಂದು ಯತ್ನಾಳ ಹೇಳಿದರು.ಇನ್ನೆರಡು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ; ದೆಹಲಿಯತ್ತ ಸಿದ್ದರಾಮಯ್ಯ

ಮಂಗಳೂರು ಗಲಭೆ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿ ಬಿಡುಗಡೆ ವಿಚಾರ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.  ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು.  ಅವರಿಗೆ ಹೇಗೆ ವಿಡಿಯೋ ಎಡಿಟ್ ಮಾಡೋದು, ಕಟ್ ಆಂಡ್ ಪೇಸ್ಟ್ ಮಾಡೋದು ಚೆನ್ನಾಗಿ ಗೊತ್ತಿದೆ.  ಯಾವುದೋ ಗಲಭೆಯದ್ದು ತಂದು ಇಲ್ಲಿ ಜೋಡಿಸೋದು.  ಹಾಡಿನ ಮಧ್ಯೆ ಸೇರಿಸೋದು ಗೊತ್ತಿರದವರು ಹೀಗೆ ಮಾಡ್ತಾರೆ. ಎಚ್. ಡಿ.ಕೆಯದ್ದು ನಾಟಕ ಕಂಪನಿ.  ಕುಮಾರಸ್ವಾಮಿ ಏನು ಹರಿಶ್ಚಂದ್ರನ 16ನೇ ಸಂತತಿ ಅಲ್ಲ.  ನಿಮ್ಮ ಮನೆಯಲ್ಲಿ ಏನಿದೆ ಅದನ್ನು ನೋಡಿಕೊಳ್ಳಿ.  ಬಿಜೆಪಿಯವರದ್ದು ಏನು ಬದನೆಕಾಯಿ ನೋಡ್ತೀರಾ? ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಬ್ಲಾಕ್ ಮೇಲರ್ ಎಂದು ಆರೋಪಿಸಿದ ಅವರು, ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡ್ತೀನಿ ಎಂದು ಬೇಕಾಬಿಟ್ಟಿ ಬ್ಲಾಕ್ ಮೇಲ್ ತಂತ್ರ ಮಾಡ್ತಿದ್ದಾರೆ.  ಕುಮಾರಸ್ವಾಮಿ ಸಿಡಿಗಳಿವೆ.  ಅವರ ಸಿಡಿ ಬಿಡುಗಡೆ ಮಾಡ್ತೀನಿ.  ಇವರ ಸಿಡಿ ಬಿಡುಗಡೆ ಮಾಡ್ತೀನಿ ಅಂತಾರೇ.  ಎಚ್ ಡಿ ಕೆ  ಅವರ ಸಿಡಿ, ವಿಡಿಯೋಗಳೇ ಬಹಳ ಇವೆ.  ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ.  ಬೇರೆಯವರ ತಟ್ಟೆಯಲ್ಲಿನ ನೋಣ ನೋಡ್ತಿದ್ದಾರೆ.  ಕುಮಾರಸ್ವಾಮಿ ಹತಾಶೆ ಮನೋಭಾವದ ಪರಮಾವಧಿ ಇದು ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಸಿಎಂ ಎಸ್. ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು.  ಪೊಲೀಸ್ ಆಡಳಿತದ ಬಗ್ಗೆ ಸಂಶಯದಿಂದ ನೋಡುವುದು.  ಅವರ ಬಗ್ಗೆ ಮಾತಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಗೆ ನಾಚಿಕೆ ಆಗಬೇಕು.  ಸಿಎಂ ಆಗಿ ಕೆಲಸ ಮಾಡಿದವರು ಹೀಗೆ ಮಾತನಾಡಬಾರದು ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ