ಲಿಂಗಾಯತರಿಗೆ ಕ್ಯಾಬಿನೆಟ್​ ಸಚಿವ ಸ್ಥಾನ ನೀಡಬೇಕು; ಶಾಸಕ ಯತ್ನಾಳ್​ ಆಗ್ರಹ

ವಿಧಾನ ಸೌಧ, ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡಲಿ ಅದನ್ನು ಬಿಟ್ಟು ಪ್ರತಿ ದಿನ ರೂ‌ 1.50 ಲಕ್ಷ ಬಾಡಿಗೆ ಕೊಟ್ಟು ವಾಸ ನಡೆಸುತ್ತಿರುವುದು ಎಷ್ಟು ಸೂಕ್ತ? -ಯತ್ನಾಳ್​ ಪ್ರಶ್ನೆ

Latha CG | news18
Updated:June 8, 2019, 3:55 PM IST
ಲಿಂಗಾಯತರಿಗೆ ಕ್ಯಾಬಿನೆಟ್​ ಸಚಿವ ಸ್ಥಾನ ನೀಡಬೇಕು; ಶಾಸಕ ಯತ್ನಾಳ್​ ಆಗ್ರಹ
ಬಸವನಗೌಡ ರಾ. ಪಾಟೀಲ ಯತ್ನಾಳ
  • News18
  • Last Updated: June 8, 2019, 3:55 PM IST
  • Share this:
ವಿಜಯಪುರ,(ಜೂ.08): ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಸ್ಥಾನ ನೀಡಬೇಕು. ಲಿಂಗಾಯಿತರು ಕರ್ನಾಟಕದಲ್ಲಿ ಮಾತ್ರ ಹೆಚ್ಚಾಗಿದ್ದಾರೆ. ಲಿಂಗಾಯತರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಬೇಕು. ಉತ್ತರ ಕರ್ನಾಟಕದ ದಲಿತ ಸಂಸದರಿಗೂ ಸ್ಥಾನ ನೀಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಗ್ರಹ ಮಾಡಿದ್ದಾರೆ.

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟದಲ್ಲಿ  ಲಿಂಗಾಯತರ ಅನ್ಯಾವಾಗುತ್ತಿದೆ ಎಂದು ಆರೋಪಿಸಿದರು. ಗೃಹ ಸಚಿವ ಎಂ. ಬಿ. ಪಾಟೀಲ ಹೇಳಿಕೆಗೆ ಯತ್ನಾಳ ಬೆಂಬಲ ನೀಡಿದರು.

ಇದೇ ವೇಳೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್​ ವಿರುದ್ಧ ಆರೋಪ ಮಾಡಿದ ಯತ್ನಾಳ್​, "ಶಾಸಕರಾಗಿ ಒಂದು ವರ್ಷ ಪೂರ್ಣಗೊಳಿಸಿದ್ದೇನೆ. ರಾಜ್ಯದಲ್ಲಿಯೇ ವಿಜಯಪುರ ವಿಧಾನಸಭೆ ಮತಕ್ಷೇತ್ರ ಮಾದರಿ‌ ಕ್ಷೇತ್ರವಾಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ವಿಜಯಪುರದಲ್ಲಿ ಆರೋಗ್ಯ ಇಲಾಖೆಗೆ ಸೇರಿದ 20 ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿದೆ. ಇದನ್ನು ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ ನಿರ್ಲಕ್ಷಿಸಿದ್ದಾರೆ" ಎಂದು ಆರೋಪಿಸಿದರು.

ಇದನ್ನೂ ಓದಿ: ಭೂಸ್ವಾದೀನ ಕಾಯ್ದೆ ತಿದ್ದುಪಡಿ: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ರೈತರು; ಜೂ.10ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್‌

ಸಿಎಂ ಗ್ರಾಮ ವಾಸ್ತವ್ಯ ನಾಟಕ ಕಂಪನಿ:

ಸಿಎಂ ಗ್ರಾಮ ವಾಸ್ತವ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಇದೊಂದು ನಾಟಕ ಕಂಪನಿ. ಉತ್ತರ ಕರ್ನಾಟಕಕ್ಕೆ ಸಿಎಂ ಎಷ್ಟು ಸಲ ಭೇಟಿ ನೀಡಿದ್ದಾರೆ. ಸರಕಾರಿ ಶಾಲೆಯಲ್ಲಿ ಮಲಗಿದರೆ ಏನು ಪ್ರಯೋಜನ? ಈಗ ಪಂಚತಾರಾ ಹೋಟೆಲ್​​ನಲ್ಲಿ ಕಚೇರಿ ನಡೆಸುತ್ತಿದ್ದಾರೆ. ವಿಧಾನ ಸೌಧ, ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡಲಿ ಅದನ್ನು ಬಿಟ್ಟು ಪ್ರತಿ ದಿನ ರೂ‌ 1.50 ಲಕ್ಷ ಬಾಡಿಗೆ ಕೊಟ್ಟು ವಾಸ ನಡೆಸುತ್ತಿರುವುದು ಎಷ್ಟು ಸೂಕ್ತ? ಈ ಹಿಂದೆಯೂ ನಡೆಸಿದ ಗ್ರಾಮ ವಾಸ್ತವ್ಯದ ಕತೆ ಏನಾಗಿದೆ ಎಂಬುದನ್ನು ಅರಿತುಕೊಳ್ಳಲಿ ಎಂದು ವಾಗ್ಧಾಳಿ ನಡೆಸಿದರು.

ಜಿಂದಾಲ್​​ಗೆ ಭೂಮಿ ನೀಡಿರುವುದರ ಹಿಂದೆ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರವಾಗಿದೆ. ಸಿಎಂ ಕೂಡಲೇ ಜಿಂದಾಲ್​​ಗೆ ನೀಡಿರುವ ಭೂಮಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು  ಹೇಳಿದರು.
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ