ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಸರಿ; ಕಾಂಗ್ರೆಸ್​ ನಾಯಕರಿಗೆ ಎಚ್ಚರಿಕೆ ನೀಡಿದ ಶಾಸಕ ಯತ್ನಾಳ

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಬ್ರೇಕ್ ಹಾಕುತ್ತಿದೆಯಾ? ಎಂಬ ಪ್ರಶ್ನೆಗೆ, ಹೈಕಮಾಂಡ್ ಅಂದ್ಮೇಲೆ ಹಾದಿ ತಪ್ಪಿದಾಗ ಬ್ರೇಕ್ ಹಾಕುವುದು ಸಹಜ. ಗೊತ್ತಿಲ್ಲದೇ  ತಪ್ಪು ಮಾಡಿದಾಗ ಸಹಜವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ಎಂದರು.

Latha CG | news18-kannada
Updated:November 14, 2019, 10:33 PM IST
ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಸರಿ; ಕಾಂಗ್ರೆಸ್​ ನಾಯಕರಿಗೆ ಎಚ್ಚರಿಕೆ ನೀಡಿದ ಶಾಸಕ ಯತ್ನಾಳ
ಬಸನಗೌಡ ಪಾಟೀಲ್ ಯತ್ನಾಳ.
  • Share this:
ಕೊಪ್ಪಳ(ನ.14): 17 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.  ಸಿಎಂ ಬಿ.ಎಸ್​.ಯಡಿಯೂರಪ್ಪ ಅನರ್ಹ ಶಾಸಕರಿಗೆ ಟಿಕೆಟ್ ಕೊಡಲು  ಆದ್ಯತೆ ನೀಡಿದ್ದಾರೆ.  ಬಿಎಸ್​ವೈ ರಾಜೀನಾಮೆ ಕೊಟ್ಟವರಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದರು. ಆ ಕಾರಣಕ್ಕೆ  ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಉಳಿಸಿಕೊಳ್ಳಬೇಕು ಎಂಬುದು ಜನತೆಯ ಅಭಿಪ್ರಾಯ. ಬಿಎಸ್ ವೈ ಸಿಎಂ ಆಗಿ ಉಳಿಯಬೇಕು ಎಂಬುದು ಉ-ಕ ಜನರ ಭಾವನೆ ಎಂದು ಶಾಸಕ ಬಸನಗೌಡ ಪಾಟೀಲ್​​​ ಯತ್ನಾಳ ಹೇಳಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ನಾಲಾಯಕ್ ರಾಜಕಾರಣಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. "ಅಮಿತ್​ ಶಾ ಬಹಳ ಹಿರಿಯ ರಾಜಕಾರಣಿ, ಅವರ ಬಗ್ಗೆ ನಮಗೆ ಗೌರವವಿದೆ. ಪ್ರಧಾನಿ, ರಾಷ್ಟ್ರೀಯ ನಾಯಕರಿಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಟೀಕೆಗಳು ಗೌರವಯುತವಾಗಿ ಇರಬೇಕು. ಬಾಯಿ ಬಿಡಲು ನಮ್ಮಲ್ಲಿ ಕೂಡ ಸಾಕಷ್ಟು ಶಬ್ದ ಭಂಡಾರ ಇದೆ," ಎಂದು ತಿರುಗೇಟು ನೀಡಿದರು.

ಮಹಾರಾಷ್ಟ್ರ ಬಿಕ್ಕಟ್ಟು: ಸೇನೆ ಜತೆ ಸರ್ಕಾರ ರಚನೆ ಕುರಿತಂತೆ ನ.17ಕ್ಕೆ ಸೋನಿಯಾ-ಶರದ್ ಮಹತ್ವದ​​​ ಮಾತುಕತೆ

ಮೋದಿ, ಅಮಿತ್​​ ಶಾ ಬಿಜೆಪಿ ನಾಯಕರನ್ನು ಸ್ಮಶಾನಕ್ಕೆ ಕಳುಹಿಸಿದರು ಎಂಬ ಮಾಜಿ ಶಾಸಕ‌ ಅನ್ಸಾರಿ ಹೇಳಿಕೆಗೆ, "ಇಂತಹ ಹೇಳಿಕೆಯಿಂದ ಕಾಂಗ್ರೆಸ್ ನಾಶ ಆಗುತ್ತಿದೆ. ಇಂತಹ ಕಾಂಗ್ರೆಸ್​ನ ಅಯೋಗ್ಯರು ಏನೇನೋ ಮಾತನಾಡಿ ಕಾಂಗ್ರೆಸ್​​ನ್ನು ನಾಶ ಮಾಡುತ್ತಿದ್ದಾರೆ. ಬಹಳ ಹಗುರವಾಗಿ ಮಾತನಾಡಿದರೆ ನಾವು ಕೆಟ್ಟ ಶಬ್ದಗಳನ್ನು ಬಳಸಬೇಕಾಗುತ್ತದೆ. ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಸರಿ ಎಂದು ನಾನು ಹೇಳುವುದಕ್ಕೆ ಬಯಸುತ್ತೇನೆ," ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ, ಇನ್ನು ಮೂರುವರೆ ವರ್ಷ ಯಾವ ಪಕ್ಷದ ಶಾಸಕರಿಗೂ ಚುನಾವಣೆ ಬೇಕಿಲ್ಲ ಎಂದು ಯತ್ನಾಳ್​ ಭವಿಷ್ಯ ನುಡಿದರು.

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಬ್ರೇಕ್ ಹಾಕುತ್ತಿದೆಯಾ? ಎಂಬ ಪ್ರಶ್ನೆಗೆ, "ಹೈಕಮಾಂಡ್ ಅಂದ್ಮೇಲೆ ಹಾದಿ ತಪ್ಪಿದಾಗ ಬ್ರೇಕ್ ಹಾಕುವುದು ಸಹಜ. ಗೊತ್ತಿಲ್ಲದೇ  ತಪ್ಪು ಮಾಡಿದಾಗ ಸಹಜವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ," ಎಂದರು.

ಕೆಜಿಎಫ್​​ನಲ್ಲಿ ಮತ್ತೆ ಝಳಪಿಸಿದ ಲಾಂಗ್​; ಯುವತಿ ಚುಡಾಯಿಸಿದ್ದಕ್ಕೆ ಕೈ ಕಟ್​ರೋಷನ್ ಬೇಗ್ ಗೆ ಟಿಕೆಟ್ ನೀಡದ ವಿಚಾರವಾಗಿ, ಅದು ಹೈಕಮಾಂಡ್ ತೀರ್ಮಾನ ನಾವು ಹೇಳುವುದಕ್ಕೆ ಆಗಲ್ಲ ಎಂದರು. ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ, ಇದರಿಂದ ಬಿಜೆಪಿಗೆ ಹಿನ್ನಡೆ ಆಗುವುದಿಲ್ಲ ಎಂದರು.

First published: November 14, 2019, 10:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading