ಯಾವುದೇ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ - ಇಂತಹುದೇ ಖಾತೆ ಬೇಕಂತ ಬೇಡಿಕೆಯಿಟ್ಟಿಲ್ಲ ; ಉಮೇಶ್ ಕತ್ತಿ

ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ಮುಖ್ಯಮಂತ್ರಿಗಳ ವಿಚಾರವಿದೆ. ಹಳಬರನ್ನೂ ಒಳಗೊಂಡಂತೆ ಹೊಸಬರನ್ನೂ ಸಹ ಕರೆದುಕೊಂಡು ಈಗ ಮಂತ್ರಿ ಮಂಡಲ ವಿಸ್ತರಣೆ ಆಗುತ್ತೆ.

ಶಾಸಕ ಉಮೇಶ್​ ಕತ್ತಿ

ಶಾಸಕ ಉಮೇಶ್​ ಕತ್ತಿ

  • Share this:
ಬೆಳಗಾವಿ(ಜ.29) : ನಾನು ಯಾವುದೆ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ. ಇಂತಹುದೇ ಖಾತೆ ಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಬೇಡಿಕೆ ಇಟ್ಟಿಲ್ಲಾ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನನ್ನು ಸಂಪುಟಕ್ಕೆ ಸೇರಿಕೊಳ್ಳಲು ನಿರ್ಧರಿಸಿದ್ದು ತುಂಬಾ ಸಂತೋಷ ತಂದಿದೆ. ಮಾಧ್ಯಮಗಳ ಮುಂದೆಯೇ ನನ್ನನ್ನ ಸಂಪುಟಕ್ಕೆ ಸೇರಿಸುವ ವಿಚಾರ ಹೇಳಿದ್ದಾರೆ. ನನಗೂ ಮುಖ್ಯಮಂತ್ರಿಗಳ ನಡುವೆ ಯಾವುದೇ ವೈಯಕ್ತಿಕ ಮಾತುಕತೆಗಳು ಆಗಿಲ್ಲ ಎಂದರು

ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿಯವರ ಹೇಳಿಕೆ ಪ್ರಕಾರ ಇನ್ನೊಂದು ಡಿಸಿಎಂ ಸ್ಥಾನ ಸೃಷ್ಠಿ ಇಲ್ಲ. ಉಪ ಚುನಾವಣೆಯಲ್ಲಿ 11 ಜನ ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ಮುಖ್ಯಮಂತ್ರಿಗಳ ವಿಚಾರವಿದೆ. ಹಳಬರನ್ನೂ ಒಳಗೊಂಡಂತೆ ಹೊಸಬರನ್ನೂ ಸಹ ಕರೆದುಕೊಂಡು ಈಗ ಮಂತ್ರಿ ಮಂಡಲ ವಿಸ್ತರಣೆ ಆಗುತ್ತೆ. ಜೊತೆಗೆ ಬಜೆಟ್ ಅಧಿವೇಶನದ ಬಳಿಕ ಮತ್ತೆ ಸಂಪುಟ ವಿಸ್ತರಣೆ ಆಗುತ್ತೆ ಎಂದು ಉಮೇಶ್ ಕತ್ತಿ ಹೇಳಿದರು.

ಹೊಸಬರರಿಗೆ ಸಚಿವ ಸ್ಥಾನ ಕೊಡಲು ಹಳಬರ ಪದತ್ಯಾಗ ವಿಚಾರವಾಗಿ ಮಾತನಾಡಿದ ಉಮೇಶ್ ಕತ್ತಿ ಅದೆಲ್ಲವೂ ನನಗೆ ಗೊತ್ತಿಲ್ಲ ಒಟ್ಟಿನಲ್ಲಿ ನನಗೆ ಮಂತ್ರಿಸ್ಥಾನ ಸಿಗುತ್ತಿದೆ. ಅಷ್ಟು ಸಾಕು, ಅದೆಲ್ಲವೂ ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದಿದ್ದಾರೆ.

ಇದನ್ನೂ ಓದಿ :  ಮೂಲ ಮತ್ತು ವಲಸಿಗರು ಅಂತೇನು ಇಲ್ಲ- ನಮ್ಮ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಕಾಂಗ್ರೆಸ್ಸಿಗರೇ ; ಎಸ್ ಆರ್​ ಪಾಟೀಲ್

ಇನ್ನು ಸೋತವರರಿಗೆ ಸಚಿವ ಸ್ಥಾನ ಕೊಡೋಕೆ ಬರೊಲ್ಲ ಶಾಸಕರಾಗಿ ಆಯ್ಕೆ ಆದ ಮೇಲೆ ಅವರನ್ನು ಮಂತ್ರಿ ಮಾಡೋದು ಪರಿಪಾಟ, ಗೆದ್ದವರಿಗೂ ಕೊಡಿ, ಮನೆಯಲ್ಲಿದ್ದವರಿಗೂ ಕೊಡಿ ಎಂದರೆ ಹೇಗೆ ಸಾಧ್ಯ ಎಂದು ಶಾಸಕ ಉಮೇಶ್ ಕತ್ತಿ ಪ್ರಶ್ನೆ ಮಾಡಿದ್ದಾರೆ.
First published: