ಚುನಾವಣಾ ಪ್ರಚಾರದ ವೇಳೆ ಅಭಿನಂದನ್ ಹೆಸರು ಬಳಕೆ; ಶಾಸಕ ಶ್ರೀರಾಮುಲು ವಿರುದ್ಧ ಶಿಸ್ತು ಕ್ರಮ?

ಅವರ ಭಾಷಣದಲ್ಲಿ ಎರಡು-ಮೂರು ಬಾರಿ ಅಭಿನಂದನ್ ಹೆಸರು ಬಳಕೆ ಮಾಡಿದ್ದರು. ಈ ಮೊದಲು ಅಭಿನಂದನ್ ಹೆಸರು, ಭಾವಚಿತ್ರ ಬಳಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಸಿತ್ತು.

Rajesh Duggumane | news18
Updated:April 21, 2019, 8:56 AM IST
ಚುನಾವಣಾ ಪ್ರಚಾರದ ವೇಳೆ ಅಭಿನಂದನ್ ಹೆಸರು ಬಳಕೆ; ಶಾಸಕ ಶ್ರೀರಾಮುಲು ವಿರುದ್ಧ ಶಿಸ್ತು ಕ್ರಮ?
ಶ್ರೀರಾಮುಲು
  • News18
  • Last Updated: April 21, 2019, 8:56 AM IST
  • Share this:
ಕೊಪ್ಪಳ (ಏ.21): ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ವಿಂಗ್​ ಕಮಾಂಡರ್​ ಅಭಿನಂದನ್ ಹೆಸರು ಬಳಕೆ ಮಾಡಿಕೊಂಡಿದ್ದಾರೆ. ಅಭಿನಂದನ್​ ಹೆಸರನ್ನು ಬಳಕೆ ಮಾಡದಂತೆ ಚುನಾವಣಾ ಆಯೋಗ ಈ ಮೊದಲು ಆದೇಶ ಹೊರಡಿಸಿತ್ತು. ಆದಾಗ್ಯೂ, ಶ್ರೀರಾಮುಲು ಪ್ರಚಾರದ ವೇಳೆ ಅಭಿನಂದನ್​ ಹೆಸರು ಉಲ್ಲೇಖಿಸಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಡಾದಲ್ಲಿ‌ ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಶ್ರೀರಾಮುಲು‌ ಭಾಷಣ ಮಾಡುತ್ತಿದ್ದರು. ಈ ವೇಳೆ ಅಭಿನಂದನ್​ ಅವರನ್ನು ತಾಯ್ನಾಡಿಗೆ ಮರಳಿ ತಂದಿದ್ದಕ್ಕೆ ಅವರು ಭಾರತ ಸರ್ಕಾರವನ್ನು ಹೊಗಳಿದ್ದಾರೆ.

“ಸರ್ಜಿಕಲ್ ಸ್ಟ್ರೈಕ್ ನಂತರ ವಿಂಗ್​ ಕಮಾಂಡರ್​ ಅಭಿನಂದನ್ ಪಾಕಿಸ್ತಾನದ ವಶವಾದರು. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಬಂದರು. ಇಲ್ಲದಿದ್ದರೆ ಪಾಕಿಸ್ತಾನ ನಮ್ಮ ಸೈನಿಕರ ರುಂಡವನ್ನ‌‌ ಕಟ್ ಮಾಡುತ್ತಿತ್ತು. ಹಲವು ರಾಷ್ಟ್ರಗಳಿಗೆ ಭಾರತ ಎಂದರೆ ಭಯ ಶುರುವಾಗಿದೆ. ಪಾಕಿಸ್ತಾನಕ್ಕೆ ಸಿಕ್ಕ ಭಾರತೀಯ ಯೋಧರು ಸುರಕ್ಷಿತವಾಗಿ ದೇಶಕ್ಕೆ ಮರಳುತ್ತಿದ್ದಾರೆ,” ಎಂದಿದ್ದರು ಶ್ರೀರಾಮುಲು.

ಇದನ್ನೂ ಓದಿ: ನಿಂಬೆಕಾಯಿ ರೇವಣ್ಣ ಸನ್ಯಾಸತ್ವ ಪಡೆಯಲು ತಯಾರಾಗಲಿ; ಶಾಸಕ ಶ್ರೀರಾಮುಲು ವ್ಯಂಗ್ಯ

ಅವರ ಭಾಷಣದಲ್ಲಿ ಎರಡು-ಮೂರು ಬಾರಿ ಅಭಿನಂದನ್ ಹೆಸರು ಬಳಕೆ ಮಾಡಿದ್ದರು. ಈ ಮೊದಲು ಅಭಿನಂದನ್ ಹೆಸರು, ಭಾವಚಿತ್ರ ಬಳಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಸಿತ್ತು. ಈಗ ಶ್ರೀರಾಮುಲು ಈ ನಿಯಮ  ಮೀರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಆಗ್ರಹಿಸಿವೆ.

ಈ ಬಗ್ಗೆ ಆಯೋಗಕ್ಕೆ ದಾಖಲೆ ಕಳುಹಿಸಿ ಕ್ರಮ ಕೈಗೊಳ್ಳುವುದಾಗಿ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಶ್ರೀರಾಮುಲು ಸಂಡೂರಿನ ಪ್ರಚಾರದಲ್ಲೂ ಅಭಿನಂದನ್​ ಹೆಸರು ಬಳಕೆ ಮಾಡಿದ್ದರು. “ಮನಮೋಹನ್ ಸಿಂಗ್ ಅವರಂಥ ಪ್ರಧಾನಿ ಇದ್ದಿದ್ದರೆ ವಿಂಗ್​ ಕಮಾಂಡರ್​ ಅಭಿನಂದನ್‌ ಅವರನ್ನು ಪಾಕಿಸ್ತಾನದಿಂದ ವಾಪಸು ಕರೆತರಲು ಸಾಧ್ಯವಾಗುತ್ತಿರಲಿಲ್ಲ. ಮನಮೋಹನ್‌ ಸಿಂಗ್ ಪ್ರಧಾನಿ ಆಗಿದ್ದರೆ ನಮ್ಮ ಸೈನಿಕರು ಅಲ್ಲೇ ಸತ್ತು ಹೋಗುತ್ತಿದ್ದರು. ಗಂಡು ಮೆಟ್ಟಿದ ನಾಯಕ ಮೋದಿ ಪ್ರಧಾನಿ ಆಗಿರುವುದಕ್ಕೆ ಪಾಕ್ ಹೆದರಿ ಒಂದೇ‌ದಿನದಲ್ಲಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಿದೆ,” ಎಂದಿದ್ದರು.ಇದನ್ನೂ ಓದಿ: ಮೊದಲ ಹಂತದಲ್ಲಿ ನಿಖಿಲ್ ಎಲ್ಲಿದೀಯಪ್ಪಾ, 2ನೇ ಹಂತದಲ್ಲಿ ಮುಖ್ಯಮಂತ್ರಿ ಎಲ್ಲಿದೀಯಪ್ಪಾ ಎಂದು ಕೇಳುತ್ತಾರೆ; ಶ್ರೀರಾಮುಲು ವ್ಯಂಗ್ಯ

First published:April 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ