ನಿಂಬೆಕಾಯಿ ರೇವಣ್ಣ ಸನ್ಯಾಸತ್ವ ಪಡೆಯಲು ತಯಾರಾಗಲಿ; ಶಾಸಕ ಶ್ರೀರಾಮುಲು ವ್ಯಂಗ್ಯ

ಶುಕ್ರವಾರ ರಾತ್ರಿ ಸಂಡೂರಿನಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದ ಅವರು ಈ ಹೇಳಿಕೆ ನೀಡಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ನಿಂಬೇಕಾಯಿ ರೇವಣ್ಣ ಹೇಳಿದ್ದಾರೆ. ಅವರು ಸನ್ಯಾಸತ್ವ ಪಡೆಯಲು ಸಿದ್ಧರಾಗಬೇಕು ಎಂದರು.

Rajesh Duggumane | news18
Updated:April 20, 2019, 10:03 AM IST
ನಿಂಬೆಕಾಯಿ ರೇವಣ್ಣ ಸನ್ಯಾಸತ್ವ ಪಡೆಯಲು ತಯಾರಾಗಲಿ; ಶಾಸಕ ಶ್ರೀರಾಮುಲು ವ್ಯಂಗ್ಯ
ಶ್ರೀರಾಮುಲು
  • News18
  • Last Updated: April 20, 2019, 10:03 AM IST
  • Share this:
ಶರಣು ಹಂಪಿ

ಬಳ್ಳಾರಿ (ಏ.20): ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದ ಸಚಿವ ಎಚ್​ಡಿ ರೇವಣ್ಣ ಅವರಿಗೆ ಬಿಜೆಪಿ ಶಾಸಕ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ನಿಂಬೆಕಾಯಿ ರೇವಣ್ಣ ಸನ್ಯಾಸತ್ವ ಪಡೆಯಲು ತಯಾರಾಗಲಿ ಎನ್ನುವ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಶುಕ್ರವಾರ ರಾತ್ರಿ ಸಂಡೂರಿನಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದ ಅವರು ಈ ಹೇಳಿಕೆ ನೀಡಿದ್ದಾರೆ. “ಮೋದಿ ಮತ್ತೆ ಪ್ರಧಾನಿ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ನಿಂಬೆಕಾಯಿ ರೇವಣ್ಣ ಹೇಳಿದ್ದಾರೆ. ಅವರು ಸನ್ಯಾಸತ್ವ ಪಡೆಯಲು ಸಿದ್ಧರಾಗಬೇಕು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಹಳಷ್ಟು ದಿನ‌ ಉಳಿಯುವುದಿಲ್ಲ. ಚುನಾವಣೆ ನಂತರ ಸರ್ಕಾರ ಬೀಳಲಿದೆ,” ಎಂದು ಭವಿಷ್ಯ ನುಡಿದರು.

ಸರ್ಕಾರ ಉರುಳಿದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. “ಮೈತ್ರಿ ಸರ್ಕಾರ ಬಿದ್ದ ಬಳಿಕ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಯಡಿಯೂರಪ್ಪ ಸಿಎಂ ಆದ ನಂತರ ಶ್ರೀರಾಮುಲು ಕೂಡಾ ಉನ್ನತ ಸ್ಥಾನದಲ್ಲಿರುತ್ತಾರೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಂತ್ರಿಗಳ ಕೆಂಪು ಲೈಟ್ ವಾಹನ ವಾಪಾಸು ಪಡೆಯಲಾಗಿದೆ. ಆದರೆ, ಈಗ ಮುಖ್ಯಮಂತ್ರಿ ಹಾಗೂ ಮಂತ್ರಿಗಳಿಗೆ ಮತ್ತೆ ಕೆಂಪು ದೀಪದ ವಾಹನ ವಾಪಸ್ ಬರತ್ತದೆಯೋ ಅಥವಾ ಇಲ್ಲವೋ ಅನ್ನುವ ಅನುಮಾನ‌ ಕಾಡುತ್ತಿದೆ,” ಎಂದರು ಶ್ರೀರಾಮುಲು.

ಇದನ್ನೂ ಓದಿ: ಮೊದಲ ಹಂತದಲ್ಲಿ ನಿಖಿಲ್ ಎಲ್ಲಿದೀಯಪ್ಪಾ, 2ನೇ ಹಂತದಲ್ಲಿ ಮುಖ್ಯಮಂತ್ರಿ ಎಲ್ಲಿದೀಯಪ್ಪಾ ಎಂದು ಕೇಳುತ್ತಾರೆ; ಶ್ರೀರಾಮುಲು ವ್ಯಂಗ್ಯ

ಇತ್ತೀಚೆಗೆ ಮಾತನಾಡಿದ್ದ ರೇವಣ್ಣ, ‘ನಮಗೆ 22,6,8 ಸಂಖ್ಯೆ ಲಕ್ಕಿ, ನಾವು ರಾಜ್ಯದಲ್ಲಿ 22 ಲೋಕಸಭೆ ಸೀಟುಗಳನ್ನು ಗೆಲ್ಲುತ್ತೇವೆ. ಆ 22 ನಂಬರ್ ನಮಗೆ ಅದೃಷ್ಟ. ಅದು ಯಡಿಯೂರಪ್ಪನವರಿಗೆ ಲಕ್ಕಿ ಆಗುವುದಿಲ್ಲ. 18 ಸಂಖ್ಯೆ ಕೂಡ ನಮಗೆ ಲಕ್ಕಿಯೇ. ಒಂದೊಮ್ಮೆ ಮೋದಿ ಮತ್ತೆ ಪ್ರಧಾನಿ ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ,” ಎಂದಿದ್ದರು.

ಮನಮೋಹನ್​ ಸಿಂಗ್​ ವಿರುದ್ಧ ಹರಿಹಾಯ್ದ ಶಾಸಕ:ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ವಿರುದ್ಧ ಶ್ರೀರಾಮುಲು ಹರಿಹಾಯ್ದಿದ್ದಾರೆ. “ಮನಮೋಹನ್ ಸಿಂಗ್ ಅವರಂಥ ಪ್ರಧಾನಿ ಇದ್ದಿದ್ದರೆ ವಿಂಗ್​ ಕಮಾಂಡರ್​ ಅಭಿನಂದನ್‌ ಅವರನ್ನು ಪಾಕಿಸ್ತಾನದಿಂದ ವಾಪಸು ಕರೆತರಲು ಸಾಧ್ಯವಾಗುತ್ತಿರಲಿಲ್ಲ. ಮನಮೋಹನ್‌ ಸಿಂಗ್ ಪ್ರಧಾನಿ ಆಗಿದ್ದರೆ ನಮ್ಮ ಸೈನಿಕರು ಅಲ್ಲೇ ಸತ್ತು ಹೋಗುತ್ತಿದ್ದರು. ಗಂಡು ಮೆಟ್ಟಿದ ನಾಯಕ ಮೋದಿ ಪ್ರಧಾನಿ ಆಗಿರುವುದಕ್ಕೆ ಪಾಕ್ ಹೆದರಿ ಒಂದೇ‌ದಿನದಲ್ಲಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಿದೆ,” ಎಂದರು ಅವರು.

ಇದನ್ನೂ ಓದಿ: ಮಗನನ್ನು ಗೆಲ್ಲಿಸಲು ಸಿಎಂ ಗುತ್ತಿಗೆದಾರರಿಂದ ನೂರಾರು ಕೋಟಿ ಕಮಿಷನ್​ ಪಡೆದಿದ್ದಾರೆ; ಶ್ರೀರಾಮುಲು ಆರೋಪ

ಮನಮೋಹನ್ ಸಿಂಗ್ ಪ್ರಧಾನಿಯಾದಗ ನಮ್ಮ ಮೀನುಗಾರರು ಪಾಕ್​ಗೆ ಅಕಸ್ಮಾತ್ ಆಗಿ ಹೋದಾಗ, ಪಾಕ್ ಅವರ ಕಿಡ್ನಿ, ಹೃದಯವನ್ನು‌ ಕಿತ್ತು ಶವಗಳನ್ನ ಭಾರತಕ್ಕೆ ಕಳುಹಿಸಿತ್ತು. ಪಾಕ್ ಅಭಿನಂದನ್ ಸೆರೆ ಹಿಡಿದಾಗ ಇಡೀ ವಿಶ್ವ ಭಾರತದ ಜೊತೆ ಇತ್ತು. ಅದು ಮೋದಿಗಿರುವ ಶಕ್ತಿ. ಅಭಿನಂದನ್‌ ಅವರನ್ನು ಸುರಕ್ಷಿತವಾಗಿ ಕರೆತಂದ ಕೀರ್ತಿ ಮೋದಿಗೆ ಸಲ್ಲುತ್ತದೆ,” ಎಂದು ಪ್ರಚಾರದ ವೇಳೆ‌ ಶ್ರೀರಾಮುಲು ಹೇಳಿದ್ದಾರೆ.

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ