ಬೆಂಗಳೂರು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಿರುದ್ಧ ಟೀಕೆ ಮಾಡಿ ನೀಡಿದ್ದ ಹೇಳಿಕೆಗೆ ಬಿಜೆಪಿ ನಾಯಕರು (BJP) ಭಾರೀ ವಿರೋಧ ಮಾಡಿದ್ದು, ಹೆಚ್ಡಿಕೆ ಹೇಳಿಕೆಯನ್ನು ಖಂಡಿಸಿದ್ದಾರೆ. ಇದೇ ವೇಳೆ ಬಿಜೆಪಿಯಿಂದ ಬ್ರಾಹ್ಮಣ ಸಿಎಂ (Brahmin CM Controversy) ಹಾಗೂ ಲಿಂಗಾಯತ ಕಡೆಗಣನೆ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಡಿಎಸ್ ಅಧ್ಯಕ್ಷ, ಯಲಹಂಕ ಶಾಸಕ ವಿಶ್ವನಾಥ್ (SR Vishwanath), ಕುಮಾರಸ್ವಾಮಿ ಸ್ವಭಾವ ಏನು ಅನ್ನೋದು ಗೊತ್ತು. ಚುನಾವಣೆ ಸಂಧರ್ಭದಲ್ಲಿ ಜನ ಚರ್ಚೆ ಮಾಡೋಕೆ ಏನಾದರೂ ಬಿಡುತ್ತಾರೆ. ಅದರಲ್ಲಿ ಯಾವ ಉರುಳು ಇರೋದಿಲ್ಲ ಎಂದು ಹೇಳಿದ್ದಾರೆ.
ಜಾತ್ಯಾತೀತ ಪಕ್ಷ, ಜಾತಿಗಳ ಬಗ್ಗೆ ಅವರೆಲ್ಲಾ ಮಾತನಾಡಬಾರದು
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ವಿಶ್ವನಾಥ್, ಬ್ರಾಹ್ಮಣರನ್ನು ಸಿಎಂ ಮಾಡುತ್ತಾರೆ ಅನ್ನುವ ವಿಚಾರ ನಮಗೆ ಗೊತ್ತಿಲ್ಲ. ಇವರಿಗೆ ಹೇಗೆ ಗೊತ್ತಾಯ್ತು? ಇವರ ಮನೆಯಲ್ಲಿ ಒಳ್ಳೆಯದು ಆಗಬೇಕು ಎಂದು ನಿತ್ಯ ಪೂಜೆ ಮಾಡಿಸುತ್ತಾರೆ, ಹೋಮಗಳನ್ನು ಮಾಡಿಸುತ್ತಾರೆ. ದೇವಸ್ಥಾನಗಳಿಗೆ ಹೋಗುತ್ತಾರೆ. ಯಾರ ಕಡೆಯಿಂದ ಹೋಗುತ್ತಾರೆ. ಈ ಬಗ್ಗೆ ಎಲ್ಲಾ ಏಕೆ ಮಾತನಾಡಬೇಕು. ಅದು ಜಾತ್ಯಾತೀತ ಪಕ್ಷ, ಜಾತಿಗಳ ಬಗ್ಗೆ ಅವರೆಲ್ಲಾ ಮಾತನಾಡಬಾರದು. ಹಿರಿಯ ನಾಯಕರು ಚುನಾವಣೆಯಲ್ಲಿ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ.
ಇದನ್ನೂ ಓದಿ: HD Kumaraswamy: ‘ಪ್ರಹ್ಲಾದ್ ಜೋಶಿಯವರನ್ನ ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!
ಬ್ರಾಹ್ಮರಣನ್ನು ಮುಖ್ಯಮಂತ್ರಿ ಮಾಡಿದರೆ ಲಿಂಗಾಯತರು ತಿರುಗಿ ಬೀಳಲಿ ಅಂತ ಹೇಳಿಕೆ ನೀಡಿರಬೇಕು. ಯಾರೋ ಒಬ್ಬರು ಹೇಳಿದರೆ ಜನ ಕೇಳುವಷ್ಟು ಮೂರ್ಖರಲ್ಲ. ಚುನಾವಣೆ ಸಂದರ್ಭದಲ್ಲಿ ಏನೇ ಮಾತಾಡಿದರೂ ನಗಣ್ಯ ಆಗುತ್ತೆ. ಪಂಚರತ್ನ ರಥ ಯಾತ್ರೆ ಮಾಡಿ ಸಂಘಟನೆ ಮಾಡಲಿ. ಅದಕ್ಕೆ ಯಾರ ತಕರಾರಿಲ್ಲ. ಅದನ್ನ ಬಿಟ್ಟು ಬಿಜೆಪಿ ಬಗ್ಗೆ, ರಾಷ್ಟ್ರೀಯ ನಾಯಕರ ಬಗ್ಗೆ ಕೀಳು ಹೇಳಿಕೆ ಕೊಡಬಾರದು ಅನ್ನೋದು ನನ್ನ ಭಾವನೆ ಎಂದರು.
ಮುಂದಿನ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಬಿಎಸ್ವೈಗೆ
ಲಿಂಗಾಯತ ಪಕ್ಷ ನೂರಕ್ಕೆ ನೂರರಷ್ಟು ಭಾಗ ಬಿಜೆಪಿ ಜೊತೆ ಇರುತ್ತೆ. ಇವರು ಏನೇ ಒಡಕು ತಂದರೂ ಆಗೋದಿಲ್ಲ. ಬಿಎಸ್ ಯಡಿಯೂರಪ್ಪ ಅವರು ನಲವತ್ತು ವರ್ಷದಿಂದ ರಾಜಕಾರಣ ಮಾಡಿದ್ದಾರೆ. ಹೈಕಮಾಂಡ್ ಅವರಿಗೆ ಇವತ್ತು ಸಹ ಉನ್ನತ ಸ್ಥಾನ ಕೊಟ್ಟಿರುವುದು ನೋಡಿದ್ದೀರಿ. ಮುಂದಿನ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಯಡಿಯೂರಪ್ಪ ಅವರದ್ದೆ ಎಂದರು.
ಬಿಎಸ್ ಯಡಿಯೂರಪ್ಪ ಒಂದು ಬಾರಿ ಕಣ್ಣೀರು ಹಾಕಿದ್ದರು. ಆದರೆ ಕುಮಾರಸ್ವಾಮಿ ಪ್ರತಿದಿನ ಕಣ್ಣೀರು ಹಾಕ್ತಾರೆ ಅಲ್ವಾ? ಇಡೀ ಕುಟುಂಬ ಕಣ್ಣೀರು ಹಾಕುತ್ತಾರೆ ಅಲ್ವಾ? ಅಧಿಕಾರ ಇಲ್ಲದೆ 30 ವರ್ಷ ಪಕ್ಷ ಕಟ್ಟಿದವರು. ನೋಡಿ ಈಗ ನಾವು ದೇವೇಗೌಡರ ಬಗ್ಗೆ ಮಾತನಾಡುತ್ತಿದ್ದೇವೆ. ಜನ ಸಹ ಇದನ್ನೂ ಸಹಿಸುವುದಿಲ್ಲ. ಇವು ಎಲ್ಲಾ ಏಕೆ ಮಾತನಾಡಬೇಕಿತ್ತು ಅಂತ ಈಗ ಜನರೇ ಬೈತಿದ್ದಾರೆ ಎಂದಿದ್ದಾರೆ.
ಮಂತ್ರಿಗಳಾಗಿದ್ದವರು ಬಿಜೆಪಿಯಿಂದ ಕಾಂಗ್ರೆಸ್ ಮುಖ ಮಾಡ್ತಿದ್ದಾರೆ ಎಂವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಅವರ ಮುಖಗಳಗನ್ನೇ ಅವರುಗಳು ನೋಡುತ್ತಿಲ್ಲ. ಅವರೆಲ್ಲ ಚತುರ್ಮುಖ ಬ್ರಹ್ಮರಾಗಿದ್ದಾರೆ. ವೇದಿಕೆ ಮೇಲೆ ಸಿದ್ದರಾಮಯ್ಯ ನಿದ್ದೆ ಮಾಡ್ತಾರೆ. ಡಿಕೆ ಶಿವಕುಮಾರ್ ಮಾತನಾಡುತ್ತಿರುತ್ತಾರೆ. ಸೀಟ್ ಹಂಚಿಕೆ ವೇಳೆ ಕಾಂಗ್ರೆಸ್‌ನಲ್ಲಿ ಪ್ರಳಯ ಆಗಿ ಹೋಗುತ್ತೆ. ಹೊಡೆದಾಟ ಆಗುತ್ತೆ, ಅದರಿಂದ ಕಾಂಗ್ರೆಸ್ ಮೂರು ಗುಂಪಾಗುತ್ತೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: HDK-Brahmin CM Controversy: ಬ್ರಾಹ್ಮಣರನ್ನು ಅಪಮಾನಿಸಿದರಾ ಎಚ್‌ಡಿಕೆ? ಏನಿದು 'ಬ್ರಾಹ್ಮಣ ಸಿಎಂ' ವಿವಾದ?
ಕಮಲ ಚಿಹ್ನೆಯಲ್ಲಿ ಬಣ್ಣ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಗಮನಸೆಳೆಯುವ ಕಾರಣ ಬಣ್ಣ ಬದಲಾಯಿಸಿದ್ದಾರೆ ಅಷ್ಟೇ. ಬಿಳಿ, ಕೇಸರಿ ಎಲ್ಲಾ ಬಣ್ಣ ಇರುತ್ತೆ. ಆಕರ್ಷಣೆಗೆ ಮಾಡುತ್ತೇವೆ ಹೊರತು ಹಸ್ತ ರೇಖೆ ಬದಲಾಯಿಸುವುದಿಲ್ಲ. ಡಿಕೆ ಶಿವಕುಮಾರ್ ಹಸ್ತ ರೇಖೆ ಹೇಳಿದರೂ ಚುನಾವಣೆ ಆಯೋಗ ನೋಂದಾಣಿ ಆಗಿರುವುದನ್ನೇ ಬಳಸೋದು. ಇದರಲ್ಲಿ ಅದೃಷ್ಟ ಪರೀಕ್ಷೆ ಏನಿಲ್ಲ, ನಾವು ಅದೃಷ್ಟವಂತರು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ