ನಾನು ಉಫ್ ಅಂತ ಊದಿದ್ದಕ್ಕೆ ಜಮೀರ್​ ಬೆಂಗಳೂರಿಗೆ ವಿಮಾನ ಹತ್ತಿದ್ದು; ಸೋಮಶೇಖರ ರೆಡ್ಡಿ ವ್ಯಂಗ್ಯ

ಜಮೀರ್​ ಧರಣಿಗೆ ಬಂದಿದ್ರೆ ಚೆನ್ನಾಗಿತ್ತು. ಅವರು ಮನೆ ಮುಂದೆ ಧರಣಿಗೆ ಬರಬೇಕಿತ್ತು. ಆಗಿನ ಪರಿಸ್ಥಿತಿ ಆ ದೇವರಿಗೆ ಗೊತ್ತು. ನಾನು ಖಡ್ಗ ತೆಗೆದರೆ ಅವರು ಇರಲ್ಲ-ಸೋಮಶೇಖರ್​ ರೆಡ್ಡಿ

news18-kannada
Updated:January 13, 2020, 6:12 PM IST
ನಾನು ಉಫ್ ಅಂತ ಊದಿದ್ದಕ್ಕೆ ಜಮೀರ್​ ಬೆಂಗಳೂರಿಗೆ ವಿಮಾನ ಹತ್ತಿದ್ದು; ಸೋಮಶೇಖರ ರೆಡ್ಡಿ ವ್ಯಂಗ್ಯ
ಶಾಸಕ ಸೋಮಶೇಖರ್​ ರೆಡ್ಡಿ ಹಾಗೂ ಶಾಸಕ ಜಮೀರ್​ ಅಹ್ಮದ್​
  • Share this:
ಬಳ್ಳಾರಿ (ಜ.13): ನಾನು ಖಡ್ಗ ತೆಗೆದಿದ್ದರೆ ಜಮೀರ್​ ಇರುತ್ತಿರಲಿಲ್ಲ. ಆಗಿನ ಪರಿಸ್ಥಿತಿ ಆ ದೇವರಿಗೆ ಗೊತ್ತು. ನಾನು ಉಫ್​ ಎಂದು ಊದಿದ್ದಕ್ಕೆ ಜಮೀರ್​ ವಿಮಾನ ಹತ್ತಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಜಮೀರ್​ಗೆ ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ವ್ಯಂಗ್ಯವಾಡಿದ್ದಾರೆ. 

ಸಿಎಎ ಪ್ರತಿಭಟನೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸೋಮಶೇಖರ್​ ರೆಡ್ಡಿ, ನಾನು ಉಫ್​ ಎಂದಿದರೆ ಅಲ್ಪ ಸಂಖ್ಯಾತರೆಲ್ಲಾ ಹಾರಿ ಹೋಗುತ್ತಾರೆ ಎಂದು ಟೀಕಿಸಿದ್ದರು. ಇದನ್ನು ಸವಾಲ್​ ಆಗಿ ಸ್ವೀಕರಿಸಿದ ಜಮೀರ್​, ಸೋಮವಾರದೊಳಗೆ ಸೋಮಶೇಖರ್​ ರೆಡ್ಡಿ ಬಂಧನವಾಗದಿದ್ದರೆ, ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇನೆ. ಆಗ ಊಫ್​ ಎಂದು ಊದಲಿ ನೋಡೋಣ ಎಂದು ಸವಾಲ್​ ಹಾಕಿದ್ದರು.

ಅದರಂತೆ ಇಂದು ತಮ್ಮ ಬೆಂಬಲಿಗರೊಂದಿಗೆ ಜಮೀರ್​ ಬಳ್ಳಾರಿಗೆ ಆಗಮಿಸಿ, ರೆಡ್ಡಿ ಮನೆಗೆ ಲಗ್ಗೆ ಹಾಕುವ ಪ್ರಯತ್ನ ನಡೆಸಿದರು. ಆದರೆ, ಈ ವೇಳೆ ಅನುಮತಿ ಪಡೆಯದೇ ಅವರಿಗೆ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಅವರನ್ನು ಹಾಗೂ ಬೆಂಬಲಿಗರನ್ನು ಬಂಧಿಸಿ, ಬಿಡುಗಡೆ ಗೊಳಿಸಿದರು.

ಇದನ್ನು ಓದಿ: 10 ದಿನದಲ್ಲಿ ರೆಡ್ಡಿ ಬಂಧನವಾಗದಿದ್ದರೆ ಸಿದ್ದರಾಮಯ್ಯ ಸಮೇತರಾಗಿ ಪ್ರತಿಭಟನೆ: ಜಮೀರ್ ಎಚ್ಚರಿಕೆ

ಇದಾದ ಬಳಿಕ ಪ್ರತಿಕ್ರಿಯೆ ನೀಡಿರುವ ಸೋಮಶೇಖರ್​ ರೆಡ್ಡಿ, ಜಮೀರ್​ ಧರಣಿಗೆ ಬಂದಿದ್ರೆ ಚೆನ್ನಾಗಿತ್ತು. ಅವರು ಮನೆ ಮುಂದೆ ಧರಣಿಗೆ ಬರಬೇಕಿತ್ತು. ಆಗಿನ ಪರಿಸ್ಥಿತಿ ಆ ದೇವರಿಗೆ ಗೊತ್ತು. ನಾನು ಖಡ್ಗ ತೆಗೆದರೆ ಅವರು ಇರಲ್ಲ ಎಂದು ಎಚ್ಚರಿಸಿದರು.

ನಾನು ಉಫ್ ಅಂತ ಊದಿದೀನಿ. ಅದಕ್ಕೆ ಬೆಂಗಳೂರಿಗೆ ಫ್ಲೈಟಲ್ಲಿ ಹೋಗಿದ್ದಾರೆ.ದೇಶದ ಆಸ್ತಿ ಹಾಳು ಮಾಡೋರ ಬಗ್ಗೆ ಮಾತಾಡಿದ್ದು. ನೀನ್ಯಾವನಲೇ ನನಗೆ ಸವಾಲು ಹಾಕಲು ಎಂದು ಪ್ರಶ್ನಿಸಿದರು.

ರಾಜ್ಯದ ಶಾಸಕರ ವಿರುದ್ದ ಪ್ರತಿಭಟನೆ ಮಾಡಲು ಬರೆದುಕೊಟ್ಟಿಲ್ಲ. ಯಾರ ಯಾರ ಮನೆ ಹೋಗಿ ಧರಣಿ ಮಾಡುತ್ತೇನೆ ಎಂದರೆ ಸುಮ್ಮನೆ ಕೂರಲ್ಲ. ಹುಚ್ಚುನಾಯಿ ರೀತಿ ವರ್ತಿಸಬೇಡ. ನೀನು ಬೆಂಗಳೂರಿಗ, ನಾವು ಬಳ್ಳಾರಿಯವರು. ನಿನ್ನ ಹಿಂದೆ ಬಂದವರು ಬಳ್ಳಾರಿಯವರಲ್ಲ. ಜಮೀರ್ ನಿನ್ನ ಕ್ಷೇತ್ರಕ್ಕೆ ಸೀಮಿತವಾಗಿರು.  ನಿನಗೇನು ಇಡೀ ಕರ್ನಾಟಕ ಬರೆದುಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ