• Home
  • »
  • News
  • »
  • state
  • »
  • Voters Data Steal: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಜೊತೆ ಬಿಜೆಪಿ ಮಾಜಿ ಶಾಸಕನ ಲೇವಾದೇವಿ

Voters Data Steal: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಜೊತೆ ಬಿಜೆಪಿ ಮಾಜಿ ಶಾಸಕನ ಲೇವಾದೇವಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ದಾಖಲೆ ಬೆಳಕಿಗೆ ಬಂದ ಬೆನ್ನಲ್ಲೇ ಚಿಲುಮೆ ಸಂಸ್ಥೆ ರಾಜಕೀಯ ನಾಯಕರ ಖಾಸಗಿ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಯಾಗಿತ್ತಾ ಎನ್ನುವ ಅನುಮಾನ ಮೂಡಿದೆ. ಚಿಲುಮೆ ಸಂಸ್ಥೆ ಮತದಾರರ ಮಾಹಿತಿಯನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡಿತ್ತಾ ಅನ್ನೋ ಪ್ರಶ್ನೆ ಸಹ ಮೂಡಿದೆ.

  • News18 Kannada
  • Last Updated :
  • Bangalore, India
  • Share this:

ಮತದಾರರ ಮಾಹಿತಿಗೆ (Voter Data Steal) ಕನ್ನ ಹಾಕಿರುವ ಚಿಲುಮೆ ಸಂಸ್ಥೆಯ (Chilume Organization) ಕರಾಳ ಮುಖ ಒಂದೊಂದೇ ಬೆಳಕಿಗೆ ಬರುತ್ತಿವೆ. ಶುಕ್ರವಾರ ದಾಳಿ ನಡೆಸಿದ್ದ ಪೊಲೀಸರು (Police) ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಿಂದ ವಶಕ್ಕೆ ಪಡೆದುಕೊಂಡಿರುವ ಮೊಬೈಲ್​ಗಳ ಆಧಾರದ ಮೇಲೆ ಪೊಲೀಸರು ತನಿಖೆ (Police Investigation) ಮುಂದುವರಿಸಿದ್ದಾರೆ. ಪೊಲೀಸರ ದಾಳಿಗೂ ಮೊದಲೇ ಚಿಲುಮೆ ಸಂಸ್ಥೆಯಲ್ಲಿದ್ದ ದಾಖಲೆಗಳನ್ನು ಸ್ಥಳಾಂತರಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದೀಗ ಬಿಜೆಪಿ ಮಾಜಿ ಶಾಸಕರೊಬ್ಬರು ಚಿಲುಮೆ ಸಂಸ್ಥೆಗೆ ದೇಣಿಗೆ ರೂಪದಲ್ಲಿ ಹಣ ನೀಡಿರುವ ಮಾಹಿತಿ ನ್ಯೂಸ್​ 18ಗೆ ಲಭ್ಯವಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರು ಅಫಿಡವಿಟ್​ನಲ್ಲಿ ಬಿಜೆಪಿ ಮಾಜಿ ಶಾಸಕ (BJP MLA) ಈ ಮಾಹಿತಿ ನೀಡಿದ್ದಾರೆ.


ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ (BJP MLA Nandish Reddy) ಎರಡು ಬಾರಿ ಚಿಲುಮೆ ಸಂಸ್ಥೆಗೆ ಹಣ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಅಫಿಡವಿಟ್ಟಿನಲ್ಲಿ 2 ಬಾರಿ ಹಣ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಚಿಲುಮೆ ಗ್ರೂಪ್ ಹೆಸರಲ್ಲಿ 50,000 ರೂಪಾಯಿ ಮತ್ತು ಚಿಲುಮೆ ಟ್ರಸ್ಟ್ ಹೆಸರಲ್ಲಿ 17,50,000 ಸಂದಾಯ ಮಾಡಲಾಗಿದೆ.


ಖಾಸಗಿ ಸಂಸ್ಥೆಗೆ ಮಾರಾಟ ಮಾಡಿತ್ತಾ?


ಈ ದಾಖಲೆ ಬೆಳಕಿಗೆ ಬಂದ ಬೆನ್ನಲ್ಲೇ ಚಿಲುಮೆ ಸಂಸ್ಥೆ ರಾಜಕೀಯ ನಾಯಕರ ಖಾಸಗಿ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಯಾಗಿತ್ತಾ ಎನ್ನುವ ಅನುಮಾನ ಮೂಡಿದೆ. ಚಿಲುಮೆ ಸಂಸ್ಥೆ ಮತದಾರರ ಮಾಹಿತಿಯನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡಿತ್ತಾ ಅನ್ನೋ ಪ್ರಶ್ನೆ ಸಹ ಮೂಡಿದೆ.


ರಾಜಕೀಯ ಮುಖಂಡರಿಗೆ ಚುನಾವಣಾ ಸಮೀಕ್ಷೆ


ಆಯಾಯ ವಿಧಾನಸಭಾ ಕ್ಷೇತ್ರದ ಮತದಾರರ ದತ್ತಾಂಶ ಸಂಗ್ರಹಿಸಿ ರಾಜಕೀಯ ಮುಖಂಡರಿಗೆ ರವಾನೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಅಧಿಕೃತವಾಗಿಯೇ ಕೆಲ ರಾಜಕೀಯ ಮುಖಂಡರಿಗೆ ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಮಾಹಿತಿ ಸಹ ತಿಳಿದು ಬಂದಿದೆ.


BJP MLA Sandish reddy fund donate to chilume trust and group mrq
ಹಣ ನೀಡಿರುವ ದಾಖಲೆ


ಸಮೀಕ್ಷೆಗೆ ಜಾಹೀರಾತು


ಇನ್ನು ಚಿಲುಮೆ ಸಂಸ್ಥೆ ಸಮೀಕ್ಷೆ ನಡೆಸಲು ಜನರು ಬೇಕಾಗಿದ್ದಾರೆ ಎಂದು ಜಾಹೀರಾತು ಸಹ ನೀಡಿತ್ತು. ಆಧಾರ್​ ಜೋಡಣೆ, ಹೊಸಬರ ಸೇರ್ಪಡೆ, ಜಾಗೃತಿ ಕೆಲಸ ಎಂದು ಹೇಳಿ ಬಿಬಿಎಂಪಿ ಸಮೀಕ್ಷೆ ನಡೆಸಲು ಸೂಚನೆ ನೀಡಿತ್ತು. ಆದ್ರೆ ಚಿಲುಮೆ ಸಂಸ್ಥೆ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿರುವ ಆರೋಪಗಳು ಕೇಳಿ ಬಂದಿವೆ.


ಇದನ್ನೂ ಓದಿ:  Voter ID Controversy: ಮತದಾರರ ಮಾಹಿತಿ ಕಳವು; ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯೆ


ಚಿಲುಮೆ ಸರ್ವೇ ಮಾಡಿದ್ದು ಹೇಗೆ? ಯಾವ ಮಾಹಿತಿ ಸಂಗ್ರಹಿಸಿದೆ?


ಸಮೀಕ್ಷೆ ವೇಳೆ ಚಿಲುಮೆ ಸಂಸ್ಥೆ ಏಜೆಂಟ್​ಗಳು ಮತದಾರರ ವೋಟರ್ ಐಡಿ ಕಾರ್ಡ್​ ನಂಬರ್, ಮನೆ ವಿಳಾಸ, ಫೋನ್ ನಂಬರ್, ಜಾತಿ, ಆಧಾರ್ ಕಾರ್ಡ್​ ನಂಬರ್, ಉದ್ಯೋಗ, ನೀವು ಯಾರಿಗೆ ವೋಟ್ ಹಾಕ್ತಿರಾ? ನಿಮ್ಮ ಮಾತೃ ಭಾಷೆ ಯಾವುದು? ವೈವಾಹಿಕ ಸ್ಥಿತಿಗತಿ, ಶೈಕ್ಷಣಿಕ ವಿವರ ಮತ್ತು ಇಮೇಲ್ ವಿಳಾಸ ಪಡೆದುಕೊಂಡಿದೆ ಎನ್ನಲಾಗಿದೆ.


BJP MLA Sandish reddy fund donate to chilume trust and group mrq
ಹಣ ನೀಡಿರುವ ದಾಖಲೆ


ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ಮಾಹಿತಿ ಕದ್ದಿದೆ ಅನ್ನೋ ಆರೋಪ ಇದೆ. ಹಾಗಿದ್ರೆ ಹೇಗೆಲ್ಲಾ ಮಾಹಿತಿ ಕದ್ದಿದೆ ಅನ್ನೋ ಮಾಹಿತಿ ಇಲ್ಲಿದೆ


ಇದನ್ನೂ ಓದಿ:  Voter Data Steal: ಮತದಾರರ ಮಾಹಿತಿಗೆ ಕನ್ನ, ತನಿಖೆಗೆ ಇಳಿದ ಖಾಕಿಗೆ ಶಾಕ್; ಬಗೆದಷ್ಟು ತೆರೆದುಕೊಳ್ಳುತ್ತಿದೆ ಚಿಲುಮೆಯ ಕರಾಳ ಮುಖ


ಸಮೀಕ್ಷೆ ವೇಳೆ ನೂರಾರು ಏಜೆಂಟ್​ಗಳಿಗೆ ನಕಲಿ ಐಟಿ ಕಾರ್ಡ್​​​ ವಿತರಣೆ ಆಗಿದೆ. ಪಿಯುಸಿ ಫೇಲ್​ ಆದವನಿಗೂ ಅಧಿಕಾರಿ ಅಂತ ಐಡಿಕಾರ್ಡ್​ ಕೊಟ್ಟಿದ್ದಾರೆ. ಮತದಾರರ ಬಳಿ ಜಾತಿ, ಧರ್ಮ, ಭಾಷೆ, ವೈವಾಹಿಕ ಮಾಹಿತಿ, ವಯಸ್ಸು, ಉದ್ಯೋಗ, ಶಿಕ್ಷಣದ ಬಗ್ಗೆ ಅಕ್ರಮವಾಗಿ ಸಂಗ್ರಹ, ಆಧಾರ್​ ಸಂಖ್ಯೆ, ಫೋನ್​​ ನಂಬರ್​, ಖಾಸಗಿ ಇಮೇಲ್​​ ಸಂಗ್ರಹ, ಆಯಾ ಕ್ಷೇತ್ರದಲ್ಲಿ ಯಾರು ಬೆಸ್ಟ್​ ರಾಜಕಾರಣಿ, ಚುನಾಯಿತ ಪ್ರತಿನಿಧಿ ಯಾರು ಬೆಸ್ಟ್​ ಅಂತಾನೂ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ.

Published by:Mahmadrafik K
First published: