ಲಾಬಿ ನಡೆಸುತ್ತಿರುವವರು ತಮ್ಮ ಸಚಿವ ಸ್ಥಾನವನ್ನೇ ಬಿಟ್ಟುಕೊಡಲಿ; ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ತಿರುಗೇಟು

ಯಾರು ಲಾಬಿ ಮಾಡುತ್ತಿದ್ದಾರೋ ಅವರು ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿ ಬಿಟ್ಟುಕೊಡಲಿ ಎಂದು ರಮೇಶ್ ಜಾರಕಿಹೊಳಿ ಅವರ ಹೆಸರು ಹೇಳದೆ ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

  • Share this:
ದಾವಣಗೆರೆ (ನ. 29): ರಾಜ್ಯದ ಕೆಲ ಸಚಿವರು ಕೆಲವರಿಗಾಗಿ ಸಚಿವ ಸ್ಥಾನ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಯಾರು ಲಾಬಿ ಮಾಡುತ್ತಿದ್ದಾರೋ ಅವರು ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿ ಬಿಟ್ಟುಕೊಡಲಿ ಎಂದು ರಮೇಶ್ ಜಾರಕಿಹೊಳಿ ಅವರ ಹೆಸರು ಹೇಳದೆ ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯ ಹೊನ್ನಾಳಿಯಲ್ಲಿ ಮಾತನಾಡಿರುವ ಎಂಪಿ ರೇಣುಕಾಚಾರ್ಯ, ಸಿ.ಪಿ. ಯೋಗೇಶ್ವರ್ ಚುನಾವಣೆಯಲ್ಲಿ ಗೆದ್ದುಬಂದು ಸಚಿವ ಸ್ಥಾನ ಕೇಳಲಿ. ನಾವು ಹಲವು ಬಾರಿ ಜನರಿಂದ ಗೆದ್ದು ಶಾಸಕರಾಗಿದ್ದೇವೆ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಿಸುವ ಲಾಬಿ ಮಾಡುತ್ತಿರುವ ಸಚಿವರು ತಮ್ಮ ಮಂತ್ರಿಗಿರಿಯನ್ನೇ ಬಿಟ್ಟುಕೊಡಲಿ ಎಂದು ರಮೇಶ್ ಜಾರಕಿಹೊಳಿಯ ಹೆಸರು ಹೇಳದೆ ಟೀಕಿಸಿದ್ದಾರೆ.

ಬಿಜೆಪಿಯಲ್ಲಿ ಸಂಘಟನೆ ಆಧಾರದಲ್ಲಿ ಅಧಿಕಾರಕ್ಕೆ ಬಂದಿದೆ. ನಮ್ಮಲ್ಲಿ ಮೂಲ ವಲಸಿಗ ಎಂಬ ಭೇದ ಭಾವವಿಲ್ಲ. ಬಿಜೆಪಿಯಲ್ಲಿ ದೇಶ ಮೊದಲು, ಉತ್ತಮ ಅಡಳಿತ ನೀಡೊದೇ‌ ನಮ್ಮ ಗುರಿ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ವರಿಷ್ಠರು ಸಿಎಂ ಚರ್ಚೆ ಮಾಡುತ್ತಾರೆ. ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿದೆ ಎಂಬಂತೆ ಮಾಧ್ಯಮದಲ್ಲಿ ಬಿತ್ತರಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಮತ್ತೆ ನಿರಾಸೆ; ನಾಳೆಯೂ ಸಂಪುಟ ವಿಸ್ತರಣೆಯಿಲ್ಲ

ಸಿ.ಟಿ ರವಿ ಅವರ ದೆಹಲಿ ಕಚೇರಿ ಉದ್ಘಾಟನೆಗೆ ನನಗೂ ಅಹ್ವಾನ ನೀಡಿದ್ದರು. ರಮೇಶ್ ಜಾರಕಿಹೊಳಿ ರಾಜ್ಯದ ಸಚಿವರು. ನಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಅವರನ್ನು ಭೇಟಿ ಮಾಡಿದ್ದೆ. ಶಾಸಕರ ಭಾವನೆಯನ್ನ ಸಿಎಂ ಹಾಗೂ ರಾಜ್ಯದ ಅಧ್ಯಕ್ಷರ ಜೊತೆ ಚರ್ಚೆ ಮಾಡಿದ್ದೇವೆ. ಯಾರೂ ಪಕ್ಷದಲ್ಲಿ ಭಿನ್ನಮತ ಹುಟ್ಟು ಹಾಕುವಂತಹ ಮಾತುಗಳನ್ನಾಡಿಲ್ಲ. ಯಾರೂ ಪಕ್ಷ ವಿರೋಧ ಚಟುವಟಿಕೆ ಮಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪನವರ ಬದಲಾವಣೆ ಕೇವಲ ಭ್ರಮೆ. ರಾಜ್ಯಾಧ್ಯಕ್ಷರು ಆಗಲಿ ಕೇಂದ್ರದ ವರಿಷ್ಠರು ಯಾರೂ ಸಿಎಂ ಬದಲಾವಣೆ ಎಂದು ಎಲ್ಲೂ ಹೇಳಿಲ್ಲ. ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by:Sushma Chakre
First published: