ಬಿಜೆಪಿಗೆ ಮತ ಹಾಕದಿದ್ದರೆ ತಾಯಿಗೆ ಮೋಸ ಮಾಡಿದಂತೆ; ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ. ರವಿ ಕೂಡ ಇದೇ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಬಿಜೆಪಿಗೆ ಮತ ಹಾಕದವರು ತಾಯಿಗಂಡರು ಎಂದು ಹೇಳಿದ್ದ ಸಿ.ಟಿ. ರವಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Sushma Chakre | news18
Updated:April 16, 2019, 8:49 PM IST
ಬಿಜೆಪಿಗೆ ಮತ ಹಾಕದಿದ್ದರೆ ತಾಯಿಗೆ ಮೋಸ ಮಾಡಿದಂತೆ; ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ
ರೇಣುಕಾಚಾರ್ಯ
Sushma Chakre | news18
Updated: April 16, 2019, 8:49 PM IST
ದಾವಣಗೆರೆ (ಏ. 16): ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ತಾಯಿಗೆ ನೀವೇ ಮೋಸ ಮಾಡಿದಂತೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಇಂದು ಮಾತನಾಡಿದ ರೇಣುಕಾಚಾರ್ಯ, ಪ್ರತಿಯೊಬ್ಬರೂ ಜಿ.ಎಂ. ಸಿದ್ದೇಶ್ವರ ಅವರಿಗೆ ಮತ ನೀಡಬೇಕು. ಬಿಜೆಪಿಗೆ ಮತ ನೀಡದಿದ್ದರೆ ನಿಮ್ಮ ತಾಯಿಗೆ ಮೋಸ ಮಾಡಿದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ನನ್ನಂಥ ಕಚಡಾ ನನ್ಮಗ ಇನ್ನೊಬ್ಬರಿಲ್ಲ, ನನಗೆ ಎರಡು ಮುಖ ಇದೆ'; ಚಾಲೆಂಜಿಂಗ್ ಸ್ಟಾರ್ ದರ್ಶನ್

ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ. ರವಿ ಕೂಡ ಇದೇ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಬಿಜೆಪಿಗೆ ಮತ ಹಾಕದವರು ತಾಯಿಗಂಡರು ಎಂದು ಹೇಳಿದ್ದ ಸಿ.ಟಿ. ರವಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್​- ಜೆಡಿಎಸ್​ ನಾಯಕರು ಸಿ.ಟಿ. ರವಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರು ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಾಗದೆ ಪರದಾಡಿದ್ದರು.

ನಾಲ್ಕು ವಾರದಲ್ಲಿ ಮಂಡ್ಯ ಜನರಲ್ಲಿ ದೇವರ ಕಂಡೆ, ಜೊತೆ ನಿಂತ ಕೈ ಕಾರ್ಯಕರ್ತರಿಗೆ ಥ್ಯಾಂಕ್ಸ್​ ಹೇಳಿದ ಸುಮಲತಾ

ಇದೀಗ, ರೇಣುಕಾಚಾರ್ಯ ಮತ್ತೆ ತಾಯಿಯನ್ನು ಎಳೆದುತಂದಿದ್ದಾರೆ. ಲೋಕ ಸಭೆ ಚುನಾವಣೆಯ ಫಲಿತಾಂಶ ಬಂದ ತಕ್ಷಣ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಫಲಿತಾಂಶ ಬಂದ ಮಧ್ಯರಾತ್ರಿ ಸರ್ಕಾರ ಪತನವಾಗಲಿದೆ. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಹಾಗಾಗಿ, ಬಿಜೆಪಿಗೆ ಮತ ನೀಡಿದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.
Loading...

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626