HOME » NEWS » State » BJP MLA RENUKACHARYA ANGRY ON BASANAGOUDA PATIL YATNAL OVER HIS COMMENT ON CM BS YEDIYURAPPA SCT

ಯಡಿಯೂರಪ್ಪನವರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಿದರೆ ಇನ್ನು ಸಹಿಸೋದಿಲ್ಲ; ಯತ್ನಾಳ್​ಗೆ ರೇಣುಕಾಚಾರ್ಯ ಎಚ್ಚರಿಕೆ

ತಾಕತ್ತಿದ್ದರೆ ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ. ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲು ನಾನು ಆಗ್ರಹಿಸುತ್ತೇನೆ ಎಂದು ರೇಣುಕಾಚಾರ್ಯ ಯತ್ನಾಳ್​ಗೆ ಎಚ್ಚರಿಕೆ ನೀಡಿದ್ದಾರೆ.

news18-kannada
Updated:March 16, 2021, 3:42 PM IST
ಯಡಿಯೂರಪ್ಪನವರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಿದರೆ ಇನ್ನು ಸಹಿಸೋದಿಲ್ಲ; ಯತ್ನಾಳ್​ಗೆ ರೇಣುಕಾಚಾರ್ಯ ಎಚ್ಚರಿಕೆ
ಎಂಪಿ ರೇಣುಕಾಚಾರ್ಯ
  • Share this:
ಬೆಂಗಳೂರು (ಮಾ. 16): ಪದೇಪದೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಲೇ ಇದೆ. ಹೈಕಮಾಂಡ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಯತ್ನಾಳ್ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಹರಿಹಾಯ್ದಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ತಾಕತ್ತಿದ್ದರೆ ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ. ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಯತ್ನಾಳ್ ಅವರೇ ಯಡಿಯೂರಪ್ಪನವರ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಿದ್ದೀರಿ. ಅದಕ್ಕೆ ನಿಮ್ಮ ಬಳಿ ಏನು ದಾಖಲೆಯಿದೆ? ಯತ್ನಾಳ್ ಅವರೇ, ನಾಟಕ‌ ಮಾಡೋದು ಬಿಡಿ. ನಿಮಗೆ ತಾಕತ್ತಿದ್ದರೆ ಯಡಿಯೂರಪ್ಪನವರ ಕುಟುಂಬದ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಸೆಕ್ಸ್​ ಸಿಡಿ ಪ್ರಕರಣ; ರಮೇಶ್ ಜಾರಕಿಹೊಳಿಯ ವಿಚಾರಣೆ; ತನಿಖೆ ಚುರುಕುಗೊಳಿಸಿದ ಎಸ್​ಐಟಿ

ಮಾಧ್ಯಮದ ಮುಂದೆ ಮಾತನಾಡೋದನ್ನೇ ನಮ್ಮ ಬಿಜೆಪಿ ಪಕ್ಷ ಕಲಿಸಿಕೊಟ್ಟಿದೆಯಾ? ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಯತ್ನಾಳ್ ಮಾತಿನಿಂದ ನೋವಾಗುತ್ತಿದೆ. ಯಡಿಯೂರಪ್ಪ ಬಿಜೆಪಿಯ ಪಕ್ಷ ಕಟ್ಟಿ ಬೆಳೆಸಿದವರು. ಯಡಿಯೂರಪ್ಪ ಯತ್ನಾಳ್ ಅವರಿಂದ ಹೇಳಿಸಿಕೊಂಡು ಕಲಿಯೋದು ಬೇಕಾಗಿಲ್ಲ. ಅವರಿಗೆ ಬುದ್ಧಿ ಹೇಳಲು ನಿಮಗೇನು ನೈತಿಕ ಹಕ್ಕಿದೆ? ಹೊನ್ನಾಳಿ ಸಮಾಜದ ಜನ ನನಗೆ ಓಟು ಕೊಟ್ಟಿದ್ದಾರೆ. ಪಂಚಮಸಾಲಿ ಸಮಾಜ ಸೇರಿ ಎಲ್ಲ ಪಂಗಡದವರೂ ನನಗೆ ಓಟು ಹಾಕಿದ್ದಾರೆ. ನಾನೂ ಬಿಜಾಪುರಕ್ಕೆ ಬರುತ್ತೇನೆ. ನಿಮಗೆ ತಾಕತ್ತಿದ್ದರೆ ಹೊನ್ನಾಳಿಗೆ ಬಂದು ಪ್ರಚಾರ ಮಾಡಿ. ಇನ್ನು ಮುಂದೆ ಯಡಿಯೂರಪ್ಪ ಬಗ್ಗೆ ಆರೋಪ ಮಾಡಿದರೆ ಸಹಿಸೋದಿಲ್ಲ ಎಂದಿದ್ದಾರೆ.

ಶಾಸಕಾಂಗ ಸಭೆ ಕರೆದು ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ನಾನು ಆಗ್ರಹಿಸುತ್ತೇನೆ. ಮಾತೆತ್ತಿದರೆ ವಾಜಪೇಯಿ ಹೆಸರು ಹೇಳಿ ಕಪಟ ನಾಟಕ ಮಾಡ್ತಿದ್ದೀರಾ? ಇನ್ನುಮುಂದೆ ಹಾದಿ ಬೀದಿಯಲ್ಲಿ ಮಾತನಾಡಿದರೆ ನಾವು ಸಹಿಸೋದಿಲ್ಲ. ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡಿದರೂ ಒಂದೇ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರನವರಿಗೆ ಟೀಕೆ ಮಾಡಿದರೂ ಒಂದೇ. ಪಕ್ಷದ ಚೌಕಟ್ಟಲ್ಲಿ ಇರೋದನ್ನು ಯತ್ನಾಳ್ ಕಲಿಯಬೇಕು ಎಂದು ರೇಣುಕಾಚಾರ್ಯ ಯತ್ನಾಳ್​ಗೆ ಎಚ್ಚರಿಕೆ ನೀಡಿದ್ದಾರೆ.
Youtube Video

ನಾವೇ ಸಿಎಂ ಯಡಿಯೂರಪ್ಪನವರಿಗೆ ವರ್ಗಾವಣೆ ಸ್ಥಗಿತಗೊಳಿಸುವಂತೆ ಹೇಳಿದ್ದೇವೆ. ವರ್ಗಾವಣೆ ವಿಚಾರದಲ್ಲಿ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿಲ್ಲ. ವಿಜಯೇಂದ್ರನವರೂ ಭ್ರಷ್ಟಾಚಾರ ಮಾಡಿಲ್ಲ. ಆಡಳಿತ ಪಕ್ಷದ ಶಾಸಕನಾಗಿ ಹಾದಿ ಬೀದಿಲಿ ಮಾತನಾಡುತ್ತೀರಾ? ಏನಾದರೂ ಇದ್ದರೆ ಶಾಸಕಾಂಗ ಸಭೆಯಲ್ಲಿ ಮಾತಾಡಿ. ತಾಕತ್ತಿದ್ರೆ ಯತ್ನಾಳ್ ಹೊನ್ನಾಳಿ ಕ್ಷೇತ್ರಕ್ಕೆ ಬರಲಿ ನೋಡೇ ಬಿಡೋಣ ಎಂದು ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
Published by: Sushma Chakre
First published: March 16, 2021, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories