ಅಮಿತ್​ ಶಾ ಭೇಟಿಗೆ ಕಾದು ಕಾದು ಸುಸ್ತಾದ ಶಾಸಕ ರಮೇಶ್ ಜಾರಕಿಹೊಳಿ; ಬೆಳಗಾವಿ ಸಾಹುಕಾರನಿಗೆ ಮತ್ತೆ ನಿರಾಸೆ..!

ಉಪಚುನಾವಣೆ ಸಂದರ್ಭದಲ್ಲಿ ಗೆದ್ದ 24 ಗಂಟೆಯಲ್ಲಿ ಎಲ್ಲರೂ ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೋದ ಕಡೆಯಲ್ಲ ಪ್ರಚಾರ ಮಾಡಿದ್ರು. ಗೆದ್ದ ತಕ್ಷಣ ಸಚಿವರಾಗುತ್ತೇವೆ ಎಂದು ಅರ್ಹ ಶಾಸಕರು ಭಾವಿಸಿದ್ದರು.

ಸಚಿವ ರಮೇಶ್​ ಜಾರಕಿಹೊಳಿ

ಸಚಿವ ರಮೇಶ್​ ಜಾರಕಿಹೊಳಿ

  • Share this:
ಹುಬ್ಬಳ್ಳಿ (19) : ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಹುಬ್ಬಳ್ಳಿಗೆ ಆಗಮಿಸಿ ಸಿಎಎ ಹಾಗೂ ಎನ್ ಆರ್ ಸಿ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿದರು. ಇದಾದ ಬಳಿಕ ಬಹು ನಿರೀಕ್ಷಿತ ರಾಜ್ಯ  ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅರ್ಹ ಶಾಸಕರು ಭಾವಿಸಿದ್ದರು. ಆದರೆ,  ಸಿ ಎಂ ಯಡಿಯೂರಪ್ಪ, ಗೃಹ ಸಚಿವ ಅಮಿತ್ ಶಾ ಭೇಟಿ ನಡೆಯಲಿಲ್ಲ. ಇದು ಅರ್ಹ ಶಾಸಕರ ಬೇಸರಕ್ಕೆ ಕಾರಣವಾಗಿದೆ.

ಸಂಪುಟ ವಿಸ್ತರಣೆ ಚರ್ಚೆ ನಡೆಯಲಿದೆ ಎಂದು ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ ‌ಹಾಗೂ ಶ್ರೀಮಂತ ಪಾಟೀಲ್ ಅವರು ಗೃಹ ಸಚಿವ ಅಮಿತ್ ಶಾ ವಾಸ್ತವ್ಯ ಹೂಡಿದ್ದ‌‌ ಹೋಟೆಲ್ ಗೆ ಆಗಮಿಸಿದ್ದರು. ಹೋಟೆಲ್ ಗೆ ಅಮಿತ್ ಶಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತ್ರ ಆಗಮಿಸಿದ್ದರು.

ಸಚಿವ ಜಗದೀಶ್ ಶೆಟ್ಟರ್ ನಿವಾಸದಿಂದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನೇರವಾಗಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಹೊದರು. ಇದು ಸಚಿವ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿತು.

ಹೋಟೆಲ್ ನಿಂದ ಸಿಟ್ಟಿನಿಂದಲೇ ಶಾಸಕ ರಮೇಶ ಜಾರಕಿಹೊಳಿ‌ ಹೊರ ನಡೆದರು.. ಇನ್ನೂ ಮತ್ತೊಬ್ಬ ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಬಿ ಸಿ ಪಾಟೀಲ್ ಇದೊಂದು ಸೌಹಾರ್ದ ಭೇಟಿ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಜ್ಯ ನಾಯಕರು ನಿರ್ಧರಿಸಲಿದ್ದಾರೆ ಎಂದರು.

ಇದನ್ನೂ ಓದಿ : ನೋಟು ಯಂತ್ರ ಇಟ್ಕೊಂಡೋನು, ಪತ್ರಕರ್ತೆಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ; ಈಶ್ವರಪ್ಪನಿಗೆ ಎಚ್​ಡಿಕೆ ತಿರುಗೇಟು

ಉಪಚುನಾವಣೆ ಸಂದರ್ಭದಲ್ಲಿ ಗೆದ್ದ 24 ಗಂಟೆಯಲ್ಲಿ ಎಲ್ಲರೂ ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೋದ ಕಡೆಯಲ್ಲ ಪ್ರಚಾರ ಮಾಡಿದ್ರು. ಗೆದ್ದ ತಕ್ಷಣ ಸಚಿವರಾಗುತ್ತೇವೆ ಎಂದು ಅರ್ಹ ಶಾಸಕರು ಭಾವಿಸಿದ್ದರು. ಆದರೇ ಸದ್ಯ‌ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ.

ಶೂನ್ಯಮಾಸ, ಸಿಎಂ  ಯಡಿಯೂರಪ್ಪ ಅವರು ವಿದೇಶ ಪ್ರವಾಸ ಮುಗಿದ ಬಳಿಕ ಮತ್ತೊಮ್ಮೆ ಸರ್ಕಸ್ ನಡೆಯಲಿದೆ. ಆದರೆ ಅಲ್ಲಿಯ ವರೆಗೆ ಅರ್ಹ ಶಾಸಕರು ಸುಮ್ಮನೆ ಇರುತ್ತಾರಾ. ಮತ್ತೆ ಬಂಡಾಯ ಬಾವುಟ ಹಾರಿಸಲಿದ್ದಾರೆ ಎಂಬ ಬಗ್ಗೆ ಕಾದು ನೋಡಬೇಕಿದೆ.
First published: