ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸ್ಪರ್ಧಿಸುವವರಿಗೆ 5 ಕೋಟಿ ಕೊಡ್ತೇನೆ; ಶಾಸಕ ರಮೇಶ್​ ಜಾರಕಿಹೊಳಿ ಆಫರ್​​

ಮರಾಠ ಮುಖಂಡರೆಲ್ಲರೂ ಒಂದಾಗಿ. ಮುಂಬರುವ ಚುನಾವಣೆಗೆ ನಿಲ್ಲಿ. ಎಲ್ಲರೂ ಹಣ ಹಾಕಿ ಈ ಸಮಾರಂಭ ಮಾಡಿದ್ದೀರಿ. ಅದೇ ರೀತಿ ವಿಧಾನಸಭಾ ಚುನಾವಣೆಗೆ ಎಷ್ಟು ಕೊಡ್ತೀರಿ ಹೇಳಿ. ನಾನು ಎಲೆಕ್ಷನ್ ಫಂಡ್‌ಗೆ 5 ಕೋಟಿ‌ ಕೊಡ್ತೀನಿ. ಗ್ರಾಮೀಣ ಭಾಗದ ಮರಾಠರೆಲ್ಲರೂ ಒಂದಾಗಬೇಕು. ಉಳಿದ ಸಮುದಾಯದ ಜವಾಬ್ದಾರಿ ನನ್ನದು ಎಂದು ಹೇಳಿದರು.

ಲಕ್ಷ್ಮಿ ಹೆಬ್ಬಾಳ್ಕರ್​​-ರಮೇಶ್ ಜಾರಕಿಹೊಳಿ​​

ಲಕ್ಷ್ಮಿ ಹೆಬ್ಬಾಳ್ಕರ್​​-ರಮೇಶ್ ಜಾರಕಿಹೊಳಿ​​

  • Share this:
ಬೆಳಗಾವಿ(ಡಿ.30): ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರ ಬಗ್ಗೆ ಮಾತನಾಡುವುದು ಬೇಡ. ಆ ಶಾಸಕರು ಗೆಲ್ಲಲು ಕಾರಣ ನಾನು. ಗೆಲ್ಲಿಸಿದ್ದು ನನ್ನ ತಪ್ಪು ಎಂದು ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ವಿರುದ್ಧ ಕಿಡಿಕಾರಿದ್ದಾರೆ. 

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. "ಒಳ್ಳೆಯ ಸಂಸ್ಕೃತಿ ಹೆಣ್ಣುಮಗಳು ಎಂದು ಗೆಲ್ಲಿಸಿದ್ದೆ. ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ," ಎಂದರು.

ಶಿವಸೇನೆಯನ್ನೂ ಮೀರಿಸಿದ ಫಡ್ನವಿಸ್; ಮರಾಠಿಗರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ ಎಂದು ಕರ್ನಾಟಕಕ್ಕೆ ಎಚ್ಚರಿಕೆ ಕೊಟ್ಟ ಮಾಜಿ ಸಿಎಂ

ಇದೇ ವೇಳೆ ರಮೇಶ್​ ಜಾರಕಿಹೊಳಿ ಮರಾಠ ಸಮುದಾಯದವರು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರು. ಮರಾಠಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೆಳಗಾವಿ ಗ್ರಾಮೀಣ ಕೇಂದ್ರ ಮರಾಠಿಗರ ಹಕ್ಕು. ಮರಾಠಿಗರು ಅದನ್ನು ಉಳಿಸಿಕೊಳ್ಳಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮರಾಠರು ಒಂದಾಗಿ ಒಬ್ಬರು ಚುನಾವಣೆಗೆ ಸ್ಪರ್ಧಿಸಿ ಎಂದು ರಮೇಶ್​ ಜಾರಕಿಹೊಳಿ ಮನವಿ ಮಾಡಿದರು.

ಮರಾಠ ಮುಖಂಡರೆಲ್ಲರೂ ಒಂದಾಗಿ. ಮುಂಬರುವ ಚುನಾವಣೆಗೆ ನಿಲ್ಲಿ. ಎಲ್ಲರೂ ಹಣ ಹಾಕಿ ಈ ಸಮಾರಂಭ ಮಾಡಿದ್ದೀರಿ. ಅದೇ ರೀತಿ ವಿಧಾನಸಭಾ ಚುನಾವಣೆಗೆ ಎಷ್ಟು ಕೊಡ್ತೀರಿ ಹೇಳಿ. ನಾನು ಎಲೆಕ್ಷನ್ ಫಂಡ್‌ಗೆ 5 ಕೋಟಿ‌ ಕೊಡ್ತೀನಿ. ಗ್ರಾಮೀಣ ಭಾಗದ ಮರಾಠರೆಲ್ಲರೂ ಒಂದಾಗಬೇಕು. ಉಳಿದ ಸಮುದಾಯದ ಜವಾಬ್ದಾರಿ ನನ್ನದು ಎಂದು ಹೇಳಿದರು.

ಬೆಳಗಾವಿ ಗಡಿಭಾಗ ಉದ್ವಿಗ್ನ; ಶಿವಸೇನೆ ಪುಂಡಾಡಿಕೆ; ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿ; ಬೀದಿಗಿಳಿದ ಕನ್ನಡಪರ ಸಂಘಟನೆಗಳು

ಧನಗರ್, ವಾಲ್ಮೀಕಿ, ಮುಸಲ್ಮಾನ ಸಮುದಾಯದ ಜವಾಬ್ದಾರಿ ನಾನು ತೆಗೆದುಕೊಳ್ಳುವೆ.  ನೀವು ಗಟ್ಟಿ ಆಗಬೇಕು, ನೀವು ಮತ್ತೆ ಗದ್ದಾರ್ ಮಾಡಿ ಹೊರಟರೇ ಏನ್ ಮಾಡೋದು?  ನನ್ನ ತಪ್ಪಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.  ಮುಂದಿನ ಬಾರಿ ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಾನು ತಗೆದುಕೊಳ್ಳುವೆ. ಕಾರ್ಯಕರ್ತರು ಮುಖ್ಯ, ನೀವೆಲ್ಲಾ ಗಟ್ಟಿಯಾದರೆ ಶಕ್ತಿ, ನನ್ನೊಬ್ಬನ ಶಕ್ತಿ ಮಾತ್ರ ಅಲ್ಲ. ಮರಾಠಿಯಲ್ಲಿ ಹೇಳು ಅಂದ್ರೆ ನನ್ನ ಮಗನನ್ನು ಕಳಿಸಿಕೊಡ್ತೇನೆ ಅವನಿಗೆ ಮರಾಠಿ ಬರುತ್ತೆ ಎಂದರು.

 
Published by:Latha CG
First published: