ಎಸ್ಸಿ ಮತ್ತು ಎಸ್ಟಿಗೆ ಮೀಸಲಾತಿ (SC ST Reservation) ಹೆಚ್ಚಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಗುಲಾಮರಾಗಿ ಇರ್ತೀವಿ ಎಂಬ ಹೇಳಿಕೆಗೆ ಶಾಸಕ ರಾಜುಗೌಡ (MLA Rajugowda) ಕ್ಷಮೆ ಕೇಳಿದ್ದಾರೆ. ನನ್ನ ಮಾತಿನಿಂದ ಸಿಎಂಗೆ ಮುಜುಗರ ಉಂಟಾಗಿದೆ. ಹಾಗಾಗಿ ಸಿಎಂ ಹಾಗೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾ (Social Media) ಮೂಲಕ ಕೇಳಿದ್ದಾರೆ. ಖುಷಿಯಲ್ಲಿ ಭಾವುಕನಾಗಿ ಮಾತನಾಡುವ ಸಂದರ್ಭದಲ್ಲಿ ನಿಮಗೆ ಗುಲಾಮರಾಗಿ ಇರ್ತೀವಿ ಅಂತ ಪದ ಬಳಿಸಿದೆ. ಆಗ ಸಿಎಂ ಬೊಮ್ಮಾಯಿ ಅವರು ಗುಲಾಮರಾಗಿ ಇರ್ತೀವಿ ಅನ್ನೋ ನನ್ನ ಮಾತಿಗೆ ವೇದಿಕೆ ಮೇಲೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಗುಲಾಮನಾಗಿ ಇರುತ್ತೇನೆ ಎಂಬ ಹೇಳಿಕೆಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದರು. ಈ ಹಿನ್ನೆಲೆ ಶಾಸಕರು ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ.
ಶಾಸಕ ರಾಜುಗೌಡ ಹೇಳಿದ್ದೇನು?
ವಿಧಾನಸೌಧದ ಮುಂಭಾಗದಲ್ಲಿ ಪೂಜ್ಯ ಮಹರ್ಷಿ ವಾಲ್ಮೀಕಿರವರ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ನಾನು ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ ಖುಷಿಯಲ್ಲಿ ಭಾವುಕನಾಗಿ ಮಾತನಾಡುವ ಸಂದರ್ಭದಲ್ಲಿ ನಿಮಗೆ ಗುಲಾರಾಗಿರ್ತಿವಿ ಅನ್ನುವ ಪದ ಬಳಸಿದೆ.
ಆಗ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಗುಲಾಮರಾಗಿ ಇರ್ತೀವಿ ಅನ್ನೋ ನನ್ನ ಮಾತಿಗೆ ವೇದಿಕೆ ಮೇಲೆಯೇ ಆಕ್ಷೇಪ ವ್ಯಕ್ತಪಡಿಸಿ ನೀನು ತಪ್ಪು ಮಾತಾಡಿದ್ಯಲೇ ರಾಜೂಗೌಡˌನೀನು ಯಾರಿಗೂ ಗುಲಾಮ ಆಗಬೇಕಿಲ್ಲˌಬದುಕು ಕೊಟ್ಟ ದೈವಕ್ಕೆ ಮಾತ್ರ ಗುಲಾಮನಾಗಬೇಕು.
ಅಪ್ಪಿತಪ್ಪಿ ಇನ್ನೊಮ್ಮೆ ಆ ಶಬ್ದ ಬಂದರೆ ನಿನ್ನ ನಾನು ಬಿಡಲ್ಲ ಎಂದು ಗದರಿದರು. ಈ ನನ್ನ ಮಾತಿನಿಂದ ಮುಖ್ಯಮಂತ್ರಿಗಳಿಗೆ ಮುಜುಗರ ಉಂಟಾಗಿದೆ ಆದ್ದರಿಂದ ನಾನು ಮುಖ್ಯಮಂತ್ರಿಗಳಲ್ಲಿ ಹಾಗೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನನ್ನನ್ನು ಶ್ರೀರಾಮನಿಗೆ ಹೋಲಿಸಬೇಡಿ: ಸಿಎಂ ಬೊಮ್ಮಾಯಿ
ವಿಧಾನಸೌಧದ ಮುಂದೆಯೇ ಸರ್ಕಾರದಿಂದ ವಾಲ್ಮೀಕಿ ಜಯಂತಿ (Valmiki Jayanti )ಆಚರಣೆ ಮಾಡಲಾಯ್ತು. ಸಿಎಂ ಹಾಗೂ ಸಚಿವ ಶ್ರೀರಾಮುಲು (Minister Sriramulu) ಸೇರಿ ಸಮುದಾಯದ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮೀಸಲಾತಿ ಏರಿಕೆ ಮಾಡಿದ್ದಕ್ಕೆ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಸಿಎಂಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು.
ಇದನ್ನೂ ಓದಿ: Tippu Express: ಅವರೆಲ್ಲ ಮೌನವಾಗಿರೋದು ಯಾಕೆ? ರೈಲಿನ ಹೆಸರು ಮರುನಾಮಕರಣಕ್ಕೆ ಟಿಪ್ಪು ವಂಶಸ್ಥರ ಪ್ರತಿಕ್ರಿಯೆ
ಸಮುದಾಯದ ನಾಯಕರು ಕೂಡ ಸಿಎಂ ಬೊಮ್ಮಾಯಿಗೆ ಗೌರವ ಸಲ್ಲಿಸಿದರು. ಸಿಎಂ ಬಗ್ಗೆ ಸಮುದಾಯದ ನಾಯಕರು ಹಾಗೂ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಂ ಬೊಮ್ಮಾಯಿ ಶ್ರೀರಾಮ ಇದ್ದಂತೆ ಎಂದು ಶ್ರೀರಾಮುಲು ಬಣ್ಣಿಸಿದರು. ಇದೇ ವೇದಿಕೆಯಲ್ಲಿ ಮಾತಾಡಿದ ಸಿಎಂ, ನನ್ನನ್ನ ಶ್ರೀರಾಮನಿಗೆ ಹೋಲಿಸಬೇಡಿ ಎಂದರು.
ನರಜೀವಿಗಳಿಗೆ ಗುಲಾಮನಾಗಬಾರದು
ಶಾಸಕ ರಾಜುಗೌಡ ಗುಲಾಮನಾಗ್ತೀನಿ ಎಂದು ಹೇಳಿದ್ದಾನೆ. ಗುಲಾಮನಾಗಬಾರದು, ನಮಗೆ ಜೀವ ಕೊಟ್ಟಿರುವ ದೇವರಿಗೆ ಮಾತ್ರ ಗುಲಾಮನಾಗಬೇಕು. ನರಜೀವಿಗಳಿಗೆ ಗುಲಾಮನಾಗಬಾರದು ಇನ್ನೊಮ್ಮೆ ಈ ಮಾತು ನಿನ್ನ ಬಾಯಿಂದ ಬರಬಾರದು ಅಂತ ರಾಜುಗೌಡರಿಗೆ ಮುಖ್ಯಮಂತ್ರಿಗಳು ತಿಳಿ ಹೇಳಿದರು.
ಇದನ್ನೂ ಓದಿ: Karnataka Assembly Elections: ಯುವ ನಾಯಕನ ಜೊತೆ ಸ್ಪರ್ಧಿಸ್ತಾರಾ ಹಳೆ ನಾಯಕ? ಕುತೂಹಲದ ಕಣವಾದ ಶಿವಾಜಿನಗರ
ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಆಗಲ್ಲ. ಗಾಂಧಿಜೀ ರಾಮರಾಜ್ಯ ಆಗಬೇಕು ಎಂದಿದ್ದರು. ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಮೀಸಲಾತಿ ಕೊಡುವ ವಿಚಾರದಲ್ಲಿ ಹಲವರು ನನಗೆ ಕೋರ್ಟ್ ಹಾಗೆ ಹೇಳುತ್ತದೆ. ಮುಂದೆ ಹೀಗೆ ಆಗುತ್ತದೆ ಎಂದು ಸಲಹೆ ಕೊಟ್ಟರು. ಒಂದು ಹೆಜ್ಜೆ ಇಡೋಣ, ಹೆಜ್ಜೆ ಇಡಕ್ಕೆ ಬೆಕ್ಕು ಅಡ್ಡಿ ಬಂತು ಅಂತ ಮನೆಯಲ್ಲಿಯೇ ಇದ್ರೆ ಹೇಗೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ