• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • MLA Raju Gowda: ಚುನಾವಣೆ ಹೊಸ್ತಿಲಿನಲ್ಲಿ ಕೇಸರಿ ಬಿಟ್ಟು ಮುಸ್ಲಿಂ ಟೋಪಿ ಧರಿಸಿದ ಬಿಜೆಪಿ ಶಾಸಕ

MLA Raju Gowda: ಚುನಾವಣೆ ಹೊಸ್ತಿಲಿನಲ್ಲಿ ಕೇಸರಿ ಬಿಟ್ಟು ಮುಸ್ಲಿಂ ಟೋಪಿ ಧರಿಸಿದ ಬಿಜೆಪಿ ಶಾಸಕ

ಮುಸ್ಲಿಂ ಟೋಪಿ ಧರಿಸಿದ ಬಿಜೆಪಿ ಶಾಸಕ ರಾಜೂ ಗೌಡ

ಮುಸ್ಲಿಂ ಟೋಪಿ ಧರಿಸಿದ ಬಿಜೆಪಿ ಶಾಸಕ ರಾಜೂ ಗೌಡ

ಮುಸ್ಲಿಂ ಮತಗಳು ಕಾಂಗ್ರೆಸ್​​ನತ್ತ ಹೋಗದೇ ಬಿಜೆಪಿಯತ್ತ ಸೆಳೆಯಲು ಒಂದಾಗಿ ಬಾಳಬೇಕೆಂದು ಅಸ್ತ್ರವನ್ನು ರಾಜುಗೌಡ ಪ್ರಯೋಗಿಸಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ.

 • News18 Kannada
 • 3-MIN READ
 • Last Updated :
 • Yadgir, India
 • Share this:

ಯಾದಗಿರಿ: ವಿಧಾನಸಭಾ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಮುಖಂಡರು (Political Leaders) ಎಲ್ಲಾ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಬಿಜೆಪಿ ನಾಯಕರು (BJP Leaders) ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗುತ್ತಿರೋದು ಕಂಡು ಬರುತ್ತಿದೆ. ಸ್ವಗ್ರಾಮ ಕೊಡೇಕಲ್ ನಲ್ಲಿ ಮಸೀದಿ ನಿರ್ಮಾಣದ ವೇಳೆ ಶಾಸಕ ರಾಜೂಗೌಡ (BJP MLA Raju Gowda) ಮುಸ್ಲಿಂ ಟೋಪಿ  (Namaz Cap) ಹಾಕಿರೋದು ಕಂಡು ಬಂತು. ನಾನು ಮುಸ್ಲಿಂ ಆಗಿ ಟೋಪಿ ಧರಿಸಿದ್ದೇನೆ. ಮುಸ್ಲಿಂ ವ್ಯಕ್ತಿಯಾಗಿ ಕೇಸರಿ ಶಾಲು ಧರಿಸಿದ್ದೇನೆ. ನಮ್ಮ ಹತ್ತಿರ ಜಾತಿ ಬೇಧ ಭಾವ ಇಲ್ಲ. ಬಸವಣ್ಣಪ್ಪನ ಮಕ್ಕಳಾಗಿ ಒಂದಾಗಿ ಹೋಗುತ್ತೇವೆ ಎಂದು ಹೇಳಿದರು.


ಇದೇ ವೇಳೆ ಕೊಡೇಕಲ್ ಗ್ರಾಮದ ಬಸವಣ್ಣನವರ ಜಾತ್ರೆಯಲ್ಲಿ ಸರ್ವ ಸಮಾಜದವರು ಭಾಗವಹಿಸುವ ಬಗ್ಗೆ ಉಲ್ಲೇಖ ಮಾಡಿ ಎಲ್ಲರೂ ಒಂದಾಗಿ ಇರಬೇಕೆಂದು ಹೇಳಿ ಮುಸ್ಲಿಂ ಮತಗಳ ಸೆಳೆಯಲು ಬಿಜೆಪಿ ಶಾಸಕ ರಾಜುಗೌಡ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.


BJP MLA Raju gowda wearing muslim cap mrq
ಬಿಜೆಪಿ ಶಾಸಕ ರಾಜೂ ಗೌಡ


ಮುಸ್ಲಿಂ ಮತಗಳು ಕಾಂಗ್ರೆಸ್​​ನತ್ತ ಹೋಗದೇ ಬಿಜೆಪಿಯತ್ತ ಸೆಳೆಯಲು ಒಂದಾಗಿ ಬಾಳಬೇಕೆಂದು ಅಸ್ತ್ರವನ್ನು ರಾಜುಗೌಡ ಪ್ರಯೋಗಿಸಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ.
ಯಾದಗಿರಿಯಲ್ಲಿ ಕಮಲ ಪಡೆ ಶಕ್ತಿ ಕುಗ್ಗಿಸಲು ಪ್ಲಾನ್


ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ  ಯಾದಗಿರಿಯಲ್ಲಿ ಕಮಲ ಪಡೆ ಶಕ್ತಿ ಕುಗ್ಗಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ರಣತಂತ್ರ ರಚಿಸುತ್ತಿವೆ. ಜನವರಿ 19ರಂದು ಯಾದಗಿರಿಯ ಕೊಡೇಕಲ್​​ಗೆ ಪಿಎಂ ಮೋದಿ ಆಗಮಿಸಿ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದರು.


ಇದನ್ನೂ ಓದಿ:  Basavaraj Bommai: ಚಿಂತೆ ಮಾಡಬೇಡಿ, ನಾನೇ ಮುಂದಿನ ಮುಖ್ಯಮಂತ್ರಿ; ಪಕ್ಕಾ ಆಯ್ತಾ ಸೀಟ್?


ಇದು ಯಾದಗಿರಿ ಭಾಗದಲ್ಲಿ ಬಿಜೆಪಿ ಅಲೆ ಹೆಚ್ಚಿಸಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಯಾದಗಿರಿ ಭಾಗದಲ್ಲಿ ಬೃಹತ್ ಸಮಾವೇಶಗಳ ಆಯೋಜನೆಗೆ ಮುಂದಾಗಿದೆ.

top videos
  First published: