• Home
  • »
  • News
  • »
  • state
  • »
  • Raju Gowda: ಸಿದ್ದರಾಮಯ್ಯಗೆ ಶ್ರೀರಾಮುಲು ಮೇಲೆ ಲವ್ ಆಗಿದೆ; ಶಾಸಕ ರಾಜುಗೌಡ

Raju Gowda: ಸಿದ್ದರಾಮಯ್ಯಗೆ ಶ್ರೀರಾಮುಲು ಮೇಲೆ ಲವ್ ಆಗಿದೆ; ಶಾಸಕ ರಾಜುಗೌಡ

ಶಾಸಕ ರಾಜು ಗೌಡ

ಶಾಸಕ ರಾಜು ಗೌಡ

ನಮಗೆ ಮೀಸಲಾತಿ ಏರಿಕೆಯಾಗಿದೆ. ಡಿಸಿಎಂಗಿಂತ ಮೀಸಲಾತಿ ದೊಡ್ಡದು‌.‌ ಡಿಸಿಎಂ ಕೊಟ್ರೆ ರಾಮುಲು ಅವರೊಬ್ಬರೇ ಆಗ್ತಾರೆ. ಆದ್ರೆ ನಮ್ಮ ಸಮುದಾಯಕ್ಕೆ ಮೀಸಲಾತಿ ದೊಡ್ಡ ವಿಚಾರ. ಮರೆಯಲಾರದ ಕೊಡುಗೆ ನಮಗೆ ಸಿಕ್ಕಿದೆ ಎಂದು ಹೇಳಿದರು.

  • Share this:

ಕಳೆದ ಕೆಲವು ದಿನಗಳಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಮತ್ತು ಸಚಿವ ಶ್ರೀರಾಮುಲು (Minister B Sriramulu) ನಡುವೆ ವಾಕ್ಸಮರ ಏರ್ಪಟ್ಟಿದೆ. ಸಚಿವ ಶ್ರೀರಾಮುಲು ತಮ್ಮ ಭಾಷಣಗಳಲ್ಲಿ ಏಕವಚನ ಬಳಸಿಯೇ ನೇರವಾಗಿಯೇ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ  ಸುರಪುರ (Surapura) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ (BJP MLA Rajugowda) ರಾಯಚೂರಿನಲ್ಲಿ (Raichur) ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯಗೆ ರಾಮುಲು ಅವರ ಮೇಲೆ ಲವ್ ಆಗಿದೆ. ಅವರ ಮೇಲೆ ರಾಮುಲು ಅವರಿಗೆ ಲವ್ ಆಗಿದೆ. ಅವರಿಬ್ಬರ ಮಧ್ಯೆ ನಾವು ಅಡ್ಡಬರಲ್ಲ ಎಂದು ಹೇಳಿದ್ದಾರೆ.


ಈ ವೇಳೆ ಬಿಜೆಪಿ‌ ಅವರಿಂದ ಮೋಸ ಆಗಿದೆ ಅಂತ ಜನಾರ್ನದ ರೆಡ್ಡಿ (Former Minister Janardana Reddy) ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದರು. ರಾಮುಲು,  ಜನಾರ್ನದ ರೆಡ್ಡಿ ಅವರನ್ನ ಭೇಟಿಯಾಗಲಿದ್ದಾರೆ. ಅವರಿಬ್ಬರೂ ಆತ್ಮೀಯರು‌, ಎಲ್ಲವೂ ಸುಖಾಂತ್ಯ ಆಗಲಿದೆ. ರೆಡ್ಡಿ ಅವರು 2008 ರಿಂದ‌ ಪ್ರಮುಖ ಕೆಲಸ ಮಾಡಿದ್ರು. ಕೆಲ ಇನ್ಸಿಡೆಂಟ್ ನಿಂದ ರಾಜಕೀಯದಿಂದ ದೂರವಿದ್ದಾರೆ. ನಾಳೆ ಮಾತನಾಡಿ ಸರಿ ಮಾಡ್ತಾರೆ ಎಂದಿದ್ದಾರೆ.


ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ


ಸಚಿವ ಸಂಪುಟ ವಿಸ್ತಾರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಾಜುಗೌಡ, ನಾವೆಲ್ಲರೂ ಸೇರಿ ರಮೇಶ್ ಜಾರಕಿಹೊಳಿ ಅಣ್ಣನನ್ನ ಸೇರಿಸುವಂತೆ ಹೇಳಿದ್ದೀವಿ.ಈಶ್ವರಪ್ಪ ಸಾಹೇಬ್ರು ಸೇರಿ ಇಬ್ಬರನ್ನ ಸೇರಿಸಿಕೊಳ್ಳಲು ಮನವಿ ಮಾಡಿದ್ದೇವೆ ಎಂದು ಹೇಳುವ ಮೂಲಕ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ತಿಳಿಸಿದರು.


 bjp mla raju gowda reacts on siddaramaiah and sriramulu talk war mrq
ಸಿದ್ದರಾಮಯ್ಯ , ಶ್ರೀರಾಮುಲು


ನಮ್ಮ ಸಮುದಾಯಕ್ಕೆ ಮೀಸಲಾತಿ ದೊಡ್ಡ ವಿಷಯ


ನಮಗೆ ಮೀಸಲಾತಿ ಏರಿಕೆಯಾಗಿದೆ. ಡಿಸಿಎಂಗಿಂತ ಮೀಸಲಾತಿ ದೊಡ್ಡದು‌.‌ ಡಿಸಿಎಂ ಕೊಟ್ರೆ ರಾಮುಲು ಅವರೊಬ್ಬರೇ ಆಗ್ತಾರೆ. ಆದ್ರೆ ನಮ್ಮ ಸಮುದಾಯಕ್ಕೆ ಮೀಸಲಾತಿ ದೊಡ್ಡ ವಿಚಾರ. ಮರೆಯಲಾರದ ಕೊಡುಗೆ ನಮಗೆ ಸಿಕ್ಕಿದೆ ಎಂದು ಹೇಳಿದರು.


ನವೆಂಬರ್ 20 ರಂದು ಬಳ್ಳಾರಿಯಲ್ಲಿ ಸಮಾವೇಶ


ಎಸ್​​ಟಿ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ರಾಜುಗೌಡರು, ಶ್ರೀರಾಮುಲು ಅಣ್ಣನವರು ಮೀಸಲಾತಿ ಹೆಚ್ಚಿಸಿ ಅನುಕೂಲ ಮಾಡಿದ್ದಾರೆ. ನಮ್ಮ ತಂಡದ ನಾಯಕ ಶ್ರೀರಾಮುಲು ಅಣ್ಣ. ನವೆಂಬರ್ 20 ರಂದು ಬಳ್ಳಾರಿಯಲ್ಲಿ ಬೃಹತ್ ಎಸ್​​ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.  ಹೆಚ್ಚಿನ ಪ್ರಮಾಣದಲ್ಲಿ ಜನರು ಕಾರ್ಯಕ್ರಮಕ್ಕೆ ಬರಬೇಕು ಎಂದು ಕರೆ ಕೊಟ್ಟರು.


ತಳವಾರ ಸಮಾಜನ ಎಸ್​ಟಿ ಸೇರ್ಪಡೆಯಾಗುತ್ತಾ?


ತಳವಾರ ಸಮಾಜವನ್ನ ಎಸ್​​ಟಿ ಸೇರ್ಪಡೆ ವಿಚಾರದ ಕುರಿತು ಮಾತನಾಡಿದ ಶಾಸಕರು, ತಳವಾರ ಸಮಾಜ ಬೇಡ ಎನ್ನುವದು ಬೇಡ. ಗೊಂದಲ ಬಗೆಹರಿಸಲಾಗುತ್ತದೆ. ಕುಲಶಾಸ್ತ್ರ ಅಧ್ಯಯನ ಮಾಡಿ ವರದಿ ಸಲ್ಲಿಸಿದ ನಂತರ ತಳವಾರ ಸಮಾಜ ಎಷ್ಟು  ಮೀಸಲಾತಿ ಎಂದು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದರು.


 bjp mla raju gowda reacts on siddaramaiah and sriramulu talk war mrq
ಸಿದ್ದರಾಮಯ್ಯ , ಡಿಕೆ ಶಿವಕುಮಾರ್, ಶ್ರೀರಾಮುಲು


ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ.


ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಶೀರ್ವಾದಿಂದ ಗೆದ್ದಿದ್ದೇನೆ.  ಹೃದಯದಿಂದ ಸಿಎಂ ಅವರಿಗೆ ಬಸಪ್ಪಣ್ಣ ಎಂದು ಕರೆಯುತ್ತೇನೆ. ಕಾಂಗ್ರೆಸ್ ನಾಯಕರು ಎಲುಬಿಲ್ಲದ ನಾಲಿಗೆ ರೀತಿ ಮಾತನಾಡಬೇಡಿ. ಹುಣಸಗಿಯಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ಗಾರ್ಮೆಂಟ್ಸ್ ಆರಂಭ ಮಾಡುತ್ತೇವೆ. ನಮ್ಮ ಮಗ ಸಿನಿಮಾ ಮಾಡಿದರೆ ಜನರು ಸಂತಸ ವ್ಯಕ್ತಪಡಿಸಿದ್ರೆ, ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ.


ನನ್ನನ್ನು ಸೋಲಿಸುವ ಶಕ್ತಿ ಕಾಂಗ್ರೆಸ್​​ಗೆ ಇಲ್ಲ. ನನ್ನನ್ನು ಸೋಲಿಸುವ ಶಕ್ತಿ ಮತದಾರರಿಗೆ ಇದೆ. ಶ್ರೀರಾಮುಲು ಮತ್ತು ನಮ್ಮ ಮಧ್ಯೆ ಜಗಳ ಉಂಟಾದಾಗ ಮುಖ್ಯಮಂತ್ರಿಗಳೇ ನಮ್ಮನ್ನು ಕೂಡಿಸುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಬೊಮ್ಮಾಯಿ ಅವರನ್ನು ಮತ್ತೆ ಸಿಎಂ ಮಾಡಬೇಕಿದೆ ಎಂದು ಹೇಳಿದರು.

Published by:Mahmadrafik K
First published: