ನಟಿಯರಿಗೆ ಸ್ವಂತ ಬುದ್ಧಿ ಇರಲ್ಲ; ದೀಪಿಕಾ ಪಡುಕೋಣೆ ಬಗ್ಗೆ ಬಿಜೆಪಿ ಶಾಸಕ ರಾಜೂಗೌಡ

ಸೆಲೆಬ್ರಿಟಿಗಳು ಜನಪ್ರಿಯತೆ ಮತ್ತು ಪ್ರಚಾರಕ್ಕಾಗಿ ತಮ್ಮ ಬೇಕಾದ್ದನ್ನು ಮಾತ್ರ ಮಾಡುತ್ತಾರೆ. ಹೀಗಾಗಿ ನಟ-ನಟಿಯರ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಪ್ರಚಾರಕ್ಕಾಗಿ ಮಾತನಾಡುವುದನ್ನು ಬಿಟ್ಟು, ಸತ್ಯಕ್ಕಾಗಿ ಮಾತನಾಡಲಿ-ರಾಜೂಗೌಡ

news18-kannada
Updated:January 11, 2020, 12:08 PM IST
ನಟಿಯರಿಗೆ ಸ್ವಂತ ಬುದ್ಧಿ ಇರಲ್ಲ; ದೀಪಿಕಾ ಪಡುಕೋಣೆ ಬಗ್ಗೆ ಬಿಜೆಪಿ ಶಾಸಕ ರಾಜೂಗೌಡ
ದೀಪಿಕಾ ಪಡುಕೋಣೆ- ಬಿಜೆಪಿ ಶಾಸಕ ರಾಜೂಗೌಡ
  • Share this:
ಯಾದಗಿರಿ(ಜ.11): ಜೆಎನ್​ಯು ವಿದ್ಯಾರ್ಥಿಗಳ ಪರವಾಗಿ ನಿಂತ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಬಗ್ಗೆ ಸುರಪುರದ ಬಿಜೆಪಿ ಶಾಸಕ ರಾಜೂಗೌಡ  ನಾಲಿಗೆ ಹರಿಬಿಟ್ಟಿದ್ದಾರೆ. 

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಿಕಾ ಪಡುಕೋಣೆ ವಿರುದ್ಧ ಲೇವಡಿ ಮಾಡಿದ್ದಾರೆ. "ನಟ-ನಟಿಯರಿಗೆ ಸ್ವಂತ ಬುದ್ಧಿ ಇರಲ್ಲ. ಅವರು ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ ಅಷ್ಟೇ. ತಮ್ಮ ಸ್ವಂತ ಬುದ್ಧಿಯಿಂದ ಕೆಲಸ ಮಾಡುವುದು ತುಂಬಾ ಕಡಿಮೆ," ಎಂದು ವ್ಯಂಗ್ಯವಾಡಿದ್ದಾರೆ.

"ಸೆಲೆಬ್ರಿಟಿಗಳು ಜನಪ್ರಿಯತೆ ಮತ್ತು ಪ್ರಚಾರಕ್ಕಾಗಿ ತಮ್ಮ ಬೇಕಾದ್ದನ್ನು ಮಾತ್ರ ಮಾಡುತ್ತಾರೆ. ಹೀಗಾಗಿ ನಟ-ನಟಿಯರ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಪ್ರಚಾರಕ್ಕಾಗಿ ಮಾತನಾಡುವುದನ್ನು ಬಿಟ್ಟು, ಸತ್ಯಕ್ಕಾಗಿ ಮಾತನಾಡಲಿ," ಎಂದು ಸವಾಲು ಎಸೆದಿದ್ದಾರೆ.

ಜೆಎನ್​ಯು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿ, ಬೆಂಬಲ ಸೂಚಿಸಿದ ನಟಿ ದೀಪಿಕಾ ಪಡುಕೋಣೆ

"ದೀಪಿಕಾ ಪಡುಕೋಣೆಯನ್ನು ದುಡ್ಡು ಕೊಟ್ಟು ಹೋಗಿ ನೋಡುವ ಸಿನಿಮಾಗಳಲ್ಲಿ ಮಾತ್ರ ನೋಡೋಕೆ ಚೆನ್ನಾಗಿರುತ್ತೆ. ಅದನ್ನು ಬಿಟ್ಟು, ಅವರ ಇತಿಹಾಸ ತೆಗೆದು ನೋಡಿದರೆ ಉತ್ತರ ಸಿಗುತ್ತೆ. ಅವರ ಮುಂದಿನ ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ, ಚೆನ್ನಾಗಿಲ್ಲ ಅಂದ್ರೆ ನೋಡಲ್ಲ,"ಎಂದು ರಾಜೂಗೌಡ  ವಾಗ್ಧಾಳಿ ನಡೆಸಿದ್ದಾರೆ.

ಸಿನಿಮಾ ಪ್ರಚಾರಕ್ಕಾಗಿ ದೆಹಲಿಯಲ್ಲಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಳೆದ ಮಂಗಳವಾರ ಸಂಜೆ ಜೆಎನ್​ಯು ಕ್ಯಾಂಪಸ್​ಗೆ ತೆರಳಿ, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಜೊತೆಗೆ ದುಷ್ಕರ್ಮಿಗಳಿಂದ ಥಳಿತಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದ್ದರು.

ಪಕ್ಕೆಲುಬು ಪದ ತಪ್ಪು ಉಚ್ಛಾರಣೆ; ವಿದ್ಯಾರ್ಥಿ ವಿಡಿಯೋ ಹರಿಬಿಟ್ಟಿದ್ದ ಶಿಕ್ಷಕ ಸಸ್ಪೆಂಡ್​​ 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ