ನಿಮ್ಮ ಮಗನ ಚುನಾವಣೆಯಲ್ಲಿ ದುಡ್ಡಿನ ಬದಲು ಸೊಪ್ಪು ಹಂಚಿದ್ರಾ?; ಎಚ್​.ಡಿ. ರೇವಣ್ಣಗೆ ಶಾಸಕ ಪ್ರೀತಮ್ ಗೌಡ ತಿರುಗೇಟು

ಮೈಸೂರಿನ ಐಜಿಪಿ ನೇತೃತ್ವದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕೆಆರ್ ಪೇಟೆಯ ಹತ್ತಿರದ ತೋಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೆ, ಸರ್ಕಲ್ ಇನ್ಸ್​ಪೆಕ್ಟರ್​ ಸಹಾಯದಿಂದ ಮತದಾರರಿಗೆ ಪೊಲೀಸರಿಂದಲೇ ಹಣ ಹಂಚುತ್ತಿದ್ದಾರೆ. ಪ್ರತಿ ಮತಕ್ಕೆ ಒಂದು ಎರಡು ಸಾವಿರ ಹಣ ಹಂಚಲಾಗುತ್ತಿದೆ ಎಂದು ಎಚ್​.ಡಿ. ರೇವಣ್ಣ ಆರೋಪ ಮಾಡಿದ್ದರು.

news18-kannada
Updated:December 7, 2019, 2:51 PM IST
ನಿಮ್ಮ ಮಗನ ಚುನಾವಣೆಯಲ್ಲಿ ದುಡ್ಡಿನ ಬದಲು ಸೊಪ್ಪು ಹಂಚಿದ್ರಾ?; ಎಚ್​.ಡಿ. ರೇವಣ್ಣಗೆ ಶಾಸಕ ಪ್ರೀತಮ್ ಗೌಡ ತಿರುಗೇಟು
ಮಾಜಿ ಸಚಿವ ರೇವಣ್ಣ ಹಾಗೂ ಶಾಸಕ ಪ್ರೀತಮ್​​ ಗೌಡ
  • Share this:
ಹಾಸನ (ಡಿ. 7): ರಾಜ್ಯ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರು ಹಾಗೂ ಮೈಸೂರು ಐಜಿಪಿ ಮತದಾರರಿಗೆ ಹಣ ಹಂಚಿದ್ದಾರೆ ಎಂದು ಕೆಲವು ದಿನಗಳ ಹಿಂದಷ್ಟೆ ಮಾಜಿ ಸಚಿವ ಎಚ್​.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದರು. ಆ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರ ಮಗನ ಚುನಾವಣೆಯಲ್ಲಿ ದುಡ್ಡಿನ ಬದಲು ಸೊಪ್ಪು ಹಂಚಿದ್ದರಾ? ಎಂದು ವ್ಯಂಗ್ಯವಾಡಿದ್ದಾರೆ. 

ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಪೊಲೀಸರೆ ಜನರಿಗೆ ಹಣ ವಿತರಣೆ ಮಾಡುತ್ತಿದ್ದಾರೆ. ಮೈಸೂರು ಐಜಿಪಿ ಹೆಚ್​.ಜಿ. ರಾಘವೇಂದ್ರ ಸುಹಾಸ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ ಅವರ ಮುಂದಾಳತ್ವದಲ್ಲಿ ಇವೆಲ್ಲ ನಡೆಯುತ್ತಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದರು.

ಅನೈತಿಕ ಸಂಬಂಧದ ಶಂಕೆ; ಮೊಮ್ಮಕ್ಕಳ ಎದುರೇ ಹೆಂಡತಿ, ಸೊಸೆಯನ್ನು ಬರ್ಬರವಾಗಿ ಕೊಂದ ನಿವೃತ್ತ ಶಿಕ್ಷಕ

ಮೈಸೂರಿನ ಐಜಿಪಿ ನೇತೃತ್ವದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕೆಆರ್ ಪೇಟೆಯ ಹತ್ತಿರದ ತೋಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೆ, ಸರ್ಕಲ್ ಇನ್ಸ್​ಪೆಕ್ಟರ್​ ಸಹಾಯದಿಂದ ಮತದಾರರಿಗೆ ಪೊಲೀಸರಿಂದಲೇ ಹಣ ಹಂಚುತ್ತಿದ್ದಾರೆ. ಐಜಿಪಿ ಮುಖಾಂತರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹೆದರಿಸಲಾಗುತ್ತಿದೆ. ಪ್ರತಿ ಮತಕ್ಕೆ ಒಂದು ಎರಡು ಸಾವಿರ ಹಣ ಹಂಚಲಾಗುತ್ತಿದೆ. ಬೆಂಗಳೂರಿನ ಪಾಲಿಕೆ ಸದಸ್ಯರಿಂದ ಹಣ ವಸೂಲಿ ಮಾಡಲಾಗಿದೆ. ಅಲ್ಲದೆ, ನಗರದಲ್ಲಿ 15 ಲಾಡ್ಜ್ ಬುಕ್ ಮಾಡಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಖುದ್ದು ಹಣ ಹಂಚುತ್ತಿದ್ದಾರೆ. ಐಜಿಪಿ ಇದನ್ನು ಖುದ್ದು ಮಾನಿಟರಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಈ ಕುರಿತು ನಾವು ದೂರು ನೀಡಿದರೂ ಸಹ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

ಬೆಂಕಿ ಹಚ್ಚಿದವರು ನೇಣಿಗೇರುವುದನ್ನು ನೋಡಿಯೇ ನಾನು ಸಾಯಬೇಕು; ಉನ್ನಾವೋ ಸಂತ್ರಸ್ತೆಯ ಆಸೆ ಕೊನೆಗೂ ಈಡೇರಲೇ ಇಲ್ಲ!

ಈ ಹೇಳಿಕೆಗೆ ಕಿಡಿಕಾರಿರುವ ಪ್ರೀತಮ್ ಗೌಡ, ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲ್ಲಲಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲುವ ಹಿನ್ನೆಲೆ ಜೆಡಿಎಸ್ ಪಕ್ಷದವರು ಹತಾಶರಾಗಿದ್ದಾರೆ. ಕೆಆರ್ ಪೇಟೆಯಲ್ಲಿ ಚುನಾವಣೆ ನಡೆದರೆ ಹಾಸನದಲ್ಲಿ ಸ್ವಿಚ್ ಬೋರ್ಡ್ ಇದೆ. ಚುನಾವಣೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಐಜಿಪಿ ಹಣ ಹಂಚಿದ್ದಾರೆಂದು ಮಾಜಿ ಸಚಿವ ಎಚ್​ಡಿ ರೇವಣ್ಣ ಆರೋಪ ಮಾಡಿದ್ದಾರೆ. ಹಾಸನದಲ್ಲಿ ಇವರ ಮಗನ ಚುನಾವಣೆಯಲ್ಲಿ ದುಡ್ಡಿನ ಬದಲು ಕೊತ್ತಂಬರಿ ಸೊಪ್ಪು ಹಂಚಿದ್ರಾ? ಎಂದು ವ್ಯಂಗಗ್ಯವಾಡಿದ್ದಾರೆ.ಇವರು ಮಾತ್ರ ಗೌಡರಲ್ಲ. ನಾನೂ ಗೌಡನೇ. ಹೇಮಾವತಿ ನೀರು ಕುಡಿದು ಬೆಳೆದಿರುವ ನಾನು ಕೂಡ ಗೌಡನೇ. ಪ್ರೀತಮ್ ಗೌಡರು ಚನ್ನರಾಯಪಟ್ಟಣ ಮತ್ತು ಶ್ರವಣಬೆಳಗೊಳದಲ್ಲಿ ಯಾಕೆ ಇದ್ದರು ಅಲ್ಲಿ ಏನು ಕೆಲಸ? ಎಂದು ಮಾಜಿ ಸಚಿವ ರೇವಣ್ಣ ಕೇಳಿದ್ದರು. ನಾನು ಭಾರತ ದೇಶದ ಯಾವ ಮೂಲೆಯಲ್ಲಾದರೂ ಇರುತ್ತೇನೆ,  ಅದನ್ನು ಕೇಳೋಕೆ ಅವರ್ಯಾರು? ಎಂದು ಎಚ್​.ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ