ಮಂಡ್ಯ(ಜ.19): ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಬಿಜೆಪಿಯಲ್ಲಿ ಏನೇ ಮಾಡಬೇಕಾದರೂ ಕಾಲ, ದಿನ, ಘಳಿಗೆ ಎಲ್ಲವನ್ನೂ ನೋಡಿ ಮಾಡಲಾಗುತ್ತದೆ. ಗೆದ್ದಿರುವ ಎಲ್ಲರಿಗೂ ಸ್ಥಾನಮಾನ ತುಂಬಲಿದ್ದಾರೆ ಎಂದು ಕೆ.ಆರ್.ಪೇಟೆ ಬಿಜೆಪಿ ಶಾಸಕ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆ.ಆರ್ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಲವರಿಗೆ ಮಾತ್ರ ಸಚಿವ ಸ್ಥಾನ ಎನ್ನುವುದು ಸುಳ್ಳು. ಸಿಎಂ ಯಡಿಯೂರಪ್ಪ ಮಾತು ತಪ್ಪುವವರಲ್ಲ. ಅವರು ಈವರೆಗೂ ಮಾತು ತಪ್ಪಿಲ್ಲ. ಸಚಿವ ಸ್ಥಾನ ಸಿಗುವ ಬಗೆಗೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದರಾಗುತ್ತೇವೆ," ಎಂದರು.
ಬಿಜೆಪಿಯಲ್ಲಿ ನಮ್ಮನ್ನು ಅವರಲ್ಲಿ ಒಬ್ಬರಂತೆ ಕಾಣುತ್ತಾರೆ. ಬಿಜೆಪಿಯಲ್ಲಿ ಸಿಗುತ್ತಿರುವ ಗೌರವ ಬೇರೆ ಪಕ್ಷದಲ್ಲಿ ಸಿಕ್ಕಿದ್ದರೆ ನಾವು ಪಕ್ಷ ಬಿಡುತ್ತಿರಲಿಲ್ಲ. ಯಡಿಯೂರಪ್ಪ ಅವರ ಮನೆಗೆ ಹೋದಾಗ ಅವರು ಕೊಡುವ ಗೌರವದಲ್ಲಿ ಶೇ.10 ರಷ್ಟು ಸಹ ಗೌರವ ಹಿಂದಿನ ಪಕ್ಷದಲ್ಲಿರಲಿಲ್ಲ. ಅವರು ಮುಖ ಕೊಟ್ಟೇ ಮಾತನಾಡುತ್ತಿರಲಿಲ್ಲ," ಎಂದು ಜೆಡಿಎಸ್ ನಾಯಕರ ವಿರುದ್ದ ಮತ್ತೆ ಅಸಮಾಧಾನ ಹೊರ ಹಾಕಿದರು.
ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಕೆ.ಎಸ್. ಈಶ್ವರಪ್ಪ
"ಇಲ್ಲಿ ಜನರ ನಡುವೆ ಹೇಗಿರಬೇಕು, ಕೆಲಸ ಹೇಗೆ ಮಾಡಬೇಕು ಎನ್ನುವುದರ ಬಗೆಗೆ ತರಬೇತಿ ನೀಡಿದ್ದಾರೆ. ನಾನು ಎರಡು ಬಾರಿ ಜೆಡಿಎಸ್ ಶಾಸಕನಾಗಿದ್ದೆ. ಆದರೆ ಈ ರೀತಿಯ ತರಬೇತಿ ಅವರೆಂದೂ ಕೊಟ್ಟಿಲ್ಲ," ಎಂದು ಕಿಡಿಕಾರಿದರು.
"ನಾವು 17 ಜನರು ಒಟ್ಟಿಗೆ ಇದ್ದೀವಿ. ಸೋತವರಿಗೂ ಮಂತ್ರಿ ಸ್ಥಾನ ಸಿಗಲಿದೆ. ಈ ಬಗೆಗೆ ವರಿಷ್ಠರು ಸಿಎಂಗೆ ಸೂಚಿಸಿದ್ದಾರೆ. ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಯಾರ್ಯಾರಿಗೆ ಯಾವ ಖಾತೆ ಕೊಡಬೇಕು ಎನ್ನುವುದು ಅವರಿಗೆ ಗೊತ್ತಿದೆ. ಯಾವ ಯಾವ ಜಿಲ್ಲೆಗೆ ಯಾವ ಯಾವ ಖಾತೆ ನೀಡಬೇಕೆಂದು ಸಿಎಂಗೆ ಗೊತ್ತಿದೆ," ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ, ಕೆಪಿಸಿಸಿ ಮನೆಯೊಂದು ಮೂರು ಬಾಗಿಲು; ಕಿಡಿಕಾರಿದ ಎಂಟಿಬಿ ನಾಗರಾಜ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ