ಸಿಎಂ ಬೊಮ್ಮಾಯಿಗೆ ಮೂಢನಂಬಿಕೆ ಇಲ್ಲ, ಚಾಮರಾಜನಗರಕ್ಕೆ ಬಂದೇ ಬರ್ತಾರೆ; ಶಾಸಕ ಎನ್​​ ಮಹೇಶ್​​

ಈಗಾಗಲೇ ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ, ಬಿಜೆಪಿ ಶಾಸಕ ಎನ್ ಮಹೇಶ್ ಸೇರಿದಂತೆ ಹಲವು ಶಾಸಕರು ಸಿಎಂ ಜಿಲ್ಲೆಗೆ ಬರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ಚಾಮರಾಜನಗರಕ್ಕೆ ಬಂದು ಆಸ್ಪತ್ರೆ ಉದ್ಘಾಟನೆ ಮಾಡ್ತಾರಾ ಎಂಬ ಕುತೂಹಲ ಮೂಡಿದೆ.

ಎನ್​ ಮಹೇಶ್

ಎನ್​ ಮಹೇಶ್

  • Share this:
ಬೆಂಗಳೂರು(ಆ.22): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಚಾಮರಾಜನಗರ ಜಿಲ್ಲೆಗೆ ಬರೋಕೆ ತಾಕತ್ತು ಯಾಕೆ ಬೇಕು..? ಅವ್ರು ಜಿಲ್ಲೆಗೆ ಹೆಲಿಕಾಪ್ಟರ್​​ನಲ್ಲೇ ಬರ್ತಾರೆ ಎಂದು ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ಹೇಳಿಕೆಗೆ ಬಿಜೆಪಿ ಶಾಸಕ ಎನ್ ಮಹೇಶ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಇಂದಿರಾ ಗಾಂಧಿ ಸರ್ಕಲ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಆಕ್ಯಾ ಆಸ್ಪತ್ರೆ ಉದ್ಘಾಟನೆ ನಂತರ ಮಾತಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ನೂತನವಾಗಿ 164 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ವಾಗಿದ್ದು, ಇದೀಗ ಅದು ಉದ್ಘಾಟನೆ ಹಂತಕ್ಕೆ ಬಂದು ನಿಂತಿದೆ.

ಇದೀಗ ಅದನ್ನು ಉದ್ಘಾಟನೆ ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬರಬೇಕಿತ್ತು. ಈಗಾಗಲೇ ಈ ಕಾರ್ಯಕ್ರಮ ಕೂಡ ನಿಗದಿಯಾಗಿತ್ತು. ಆದರೆ ಕೋವಿಡ್​​ನಿಂದ ಆ ಕಾರ್ಯಕ್ರಮ ನಿಂತಿದೆ. ಇವಾಗ ಅದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮೂಢ ನಂಬಿಕೆ ಅನ್ನೋದು ಏನು ಇಲ್ಲ. ಅವ್ರು ನಮ್ಮ ಜಿಲ್ಲೆಗೆ ಬರ್ತಾರೆ, ಅವರು ನಮ್ ಜಿಲ್ಲೆಗೆ ಬರೋಕೆ ತಾಕತ್ತು ಯಾಕೆ ಬೇಕು.. ಅವ್ರು ಹೆಲಿಕಾಪ್ಟರ್ ನಲ್ಲೇ ಜಿಲ್ಲೆಗೆ ಬರ್ತಾರೆ ಎಂದು ಕೈ ಶಾಸಕ ಪುಟ್ಟರಂಗ ಶೆಟ್ಟಿಗೆ ತಿರುಗೇಟು ನೀಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿಯನ್ನು ಜಿಲ್ಲೆಗೆ ಆಹ್ವಾನಿಸಿದ ಶಾಸಕ ಎನ್ ಮಹೇಶ್

ಇನ್ನೂ ಇದೇ ವೇಳೆ ಆಡಳಿತ ಪಕ್ಷದ ಶಾಸಕನಾಗಿ ತಮ್ಮ ನಾಯಕ ಸಿಎಂ ಬಸವರಾಜ್ ಬೊಮ್ಮಾಯಿಯನ್ನು ಎನ್ ಮಹೇಶ್ ಜಿಲ್ಲೆಗೆ ಆಹ್ವಾನಿಸಿದ್ದಾರೆ. ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಕಳೆದುಕೊಳ್ಳುವ ಭಯದಿಂದ ಮಾಜಿ ಸಿಎಂ ಯಡಿಯೂರಪ್ಪ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಜಿಲ್ಲೆಗೆ ಹೋಗದೇ ಇದ್ರು. ಇವಾಗ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಪಕ್ಷದ ಶಾಸಕರ ಆಹ್ವಾನದಂತೆ ಜಿಲ್ಲೆಗೆ ಹೋಗ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಈಗಾಗಲೇ ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ, ಬಿಜೆಪಿ ಶಾಸಕ ಎನ್ ಮಹೇಶ್ ಸೇರಿದಂತೆ ಹಲವು ಶಾಸಕರು ಸಿಎಂ ಜಿಲ್ಲೆಗೆ ಬರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ಚಾಮರಾಜನಗರಕ್ಕೆ ಬಂದು ಆಸ್ಪತ್ರೆ ಉದ್ಘಾಟನೆ ಮಾಡ್ತಾರಾ ಎಂಬ ಕುತೂಹಲ ಮೂಡಿದೆ.

ನನಗೆ ಬೇರೆ ಆಯ್ಕೆ ಇಲ್ಲ ಅದಕ್ಕಾಗಿ ನಾನು ಬಿಜೆಪಿ ಸೇರಿದ್ದೇನೆ, ಇನ್ನೂ ನನ್ನ ಮುಂದೆಯದ್ದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು

ಇತ್ತೀಚಿಗೆ ಬಿಜೆಪಿ ಸೇರಿರುವ ಎನ್ ಮಹೇಶ್ ಇದೀಗ ಸಿಎಂ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗ್ತಾ ರಾ ಎಂಬ ಚರ್ಚೆ ಶುರುವಾಗಿದೆ. ಎನ್ ಮಹೇಶ್​ರ​​ನ್ನು ಬಿಜೆಪಿಗೆ ಸೇರಿಸಿಕೊಂಡಿದ್ದು ಮುಂದೆ ಮಂತ್ರಿ ಮಾಡಿ, ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಉದ್ದೇಶ ಎಂಬುದು ಪಕ್ಷದ ವರಿಷ್ಠರ ಚಿಂತನೆಯಾಗಿದೆ ಎಂದು ಹೇಳಲಾಗ್ತಿದೆ. ಇದೀಗ ಈ ಸಂಬಂಧ ಮಾತನಾಡಿರುವ ಎನ್ ಮಹೇಶ್, ನನಗೆ ಬೇರೆ ಆಯ ದಾರಿ ಇರಲಿಲ್ಲ. ಈ ಕಾರಣಕ್ಕೆ ಬಿಜೆಪಿ ಸೇರಿದ್ದೇನೆ. ಶಾಸಕನಾಗಿ ಕ್ಷೇತ್ರದ ಕೆಲಸ ಮಾಡುತ್ತಾ, ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡ್ತಿದ್ದೇನೆ. ಮುಂದೆ ನಡೆ ಬಗ್ಗೆ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ಎಂದು ಪರೋಕ್ಷವಾಗಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: