HOME » NEWS » State » BJP MLA MP RENUKACHARYA METS CONGRESS LEADER DK SHIVAKUMAR SESR

ಡಿಕೆ ಶಿವಕುಮಾರ್​ ಭೇಟಿ ಮಾಡಿದ ರೇಣುಕಾಚಾರ್ಯ; ಕುತೂಹಲ ಮೂಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ನಡೆ

ಸವದಿ ಸೋಲಿಸುವಷ್ಟು ಕೀಳು ಮಟ್ಟದ ರಾಜಕೀಯ ಮಾಡಲ್ಲ. ಹಾಗೆ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಅಂತಹ ಕೆಲಸ ನಾನು ಮಾಡಲ್ಲ- ರೇಣುಕಾಚಾರ್ಯ

news18-kannada
Updated:February 12, 2020, 1:45 PM IST
ಡಿಕೆ ಶಿವಕುಮಾರ್​ ಭೇಟಿ ಮಾಡಿದ ರೇಣುಕಾಚಾರ್ಯ; ಕುತೂಹಲ ಮೂಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ನಡೆ
ಸವದಿ ಸೋಲಿಸುವಷ್ಟು ಕೀಳು ಮಟ್ಟದ ರಾಜಕೀಯ ಮಾಡಲ್ಲ. ಹಾಗೆ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಅಂತಹ ಕೆಲಸ ನಾನು ಮಾಡಲ್ಲ- ರೇಣುಕಾಚಾರ್ಯ
  • Share this:
ಬೆಂಗಳೂರು (ಫೆ. 12): ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಅವರನ್ನು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಭೇಟಿ ಮಾಡಿ ಕೆಲ ಹೊತ್ತು ಮಾತನಾಡಿದ್ದಾರೆ. ಇನ್ನೇನು ವಿಧಾನಪರಿಷತ್​ ಚುನಾವಣೆಗೆ ಐದು ದಿನ ಬಾಕಿ ಇದೆ ಎನ್ನುವಾಗ ನಡೆದ ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿದೆ. 

ಫೆ. 17ರಂದು ವಿಧಾನ ಪರಿಷತ್​ ಚುನಾವಣೆ ನಡೆಯಲಿದ್ದು, ಲಕ್ಷ್ಮಣ ಸವದಿ ಸೋಲಿಸಲು ಪಕ್ಷದ ಕೆಲವರು ಹುನ್ನಾರ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಲಕ್ಷ್ಮಣ ಸವದಿ ಟೀಕಿಸಿದ್ದ ರೇಣುಕಾಚಾರ್ಯ, ಅಲ್ಪನಿಗೆ ಐಶ್ಚರ್ಯ ಬಂದಂತೆ ಸವದಿ ಆಡುತ್ತಿದ್ದಾರೆ. ಉಪಚುನಾವಣೆ ಬಳಿಕ ಅವರ ಸ್ಥಿತಿ ಏನಾಗಲಿದೆ ಎಂದು ತಿಳಿದುಕೊಳ್ಳಲಿ ಎಂದು ಟೀಕಿಸಿದ್ದರು. ಅಲ್ಲದೇ ತಮಗೆ ಸಚಿವ ಸ್ಥಾನ ನೀಡದ ಬಗ್ಗೆ ಕೂಡ ಅವರು ಅಸಮಾಧಾನ ತೋರಿದ್ದರು.

ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್​ ಅವರನ್ನು ಭೇಟಿಯಾದಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸವದಿ ಸೋಲಿಸುವಷ್ಟು ಕೀಳು ಮಟ್ಟದ ರಾಜಕೀಯ ಮಾಡಲ್ಲ. ಹಾಗೆ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಅಂತಹ ಕೆಲಸ ನಾನು ಮಾಡಲ್ಲ ಎಂದು ಸ್ಪಷ್ಟಪಡಿಸಿದರು.ಮುಂದಿನ ತಿಂಗಳು 5ನೇ ತಾರೀಖಿನಿಂದ ತಮ್ಮ ಕ್ಷೇತ್ರವಾದ ಹೊನ್ನಾಳಿಯಲ್ಲಿ ಮೂರು ದಿನ ನಡೆಯುವ ಕೃಷಿ ಮೇಳಕ್ಕೆ ಡಿಕೆ ಶಿವಕುಮಾರ್​ ಅವರನ್ನು ಆಹ್ವಾನಿಸಲು ಬಂದಿರುವುದಾಗಿ ಸ್ಪಷ್ಟನೆ ನೀಡಿದರು. ಕೇವಲ ಡಿಕೆ ಶಿವಕುಮಾರ್​ ಮಾತ್ರವಲ್ಲ, ಪಕ್ಷಾತೀತವಾಗಿ ರಾಜಕೀಯ ನಾಯಕರನ್ನು ಆಮಂತ್ರಿಸಲಾಗುತ್ತಿದೆ ಎಂದರು.

ಇದನ್ನು ಓದಿ: ನನಗೆ ಸಚಿವ ಸ್ಥಾನ ಇಲ್ಲ; ರಮೇಶ್ ಕತ್ತಿಯನ್ನಾದರೂ ರಾಜ್ಯಸಭೆಗೆ ಕಳುಹಿಸಿ: ಉಮೇಶ್ ಕತ್ತಿ ಹೊಸ ಪಟ್ಟು

ತಿಹಾರ್​ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಾಗ ಡಿಕೆ ಶಿವಕುಮಾರ್​ಗೆ ಅವರು ಅಭಿಮಾನಿಗಳು ನೀಡಿದ ಸ್ವಾಗತ ನೋಡಿ, 'ಅವರೇನು ಟಾಟಾ-ಬಿರ್ಲಾನಾ' ಎಂದು ರೇಣುಕಾಚಾರ್ಯ ಟೀಕಿಸಿದ್ದರು. ಮಾಧ್ಯಮದವರು ಇದನ್ನು ಪ್ರಸ್ತಾಪಿಸಿ ಕೇಳಿದಾಗ, ರಾಜಕೀಯ ಟೀಕೆ ಟಿಪ್ಪಣಿ ಬೇರೆ. ರಾಜಕೀಯ ಹೊರತಾಗಿ ನಮ್ಮ ನಡುವೆ ಉತ್ತಮ ಸಂಬಂಧ ಇದೆ. ಅವರು ಹಿರಿಯರು, ನಾನು ರಾಜಕೀಯದಲ್ಲಿ ತುಂಬಾ ಚಿಕ್ಕವನು ಎಂದು ಎಂ.ಪಿ. ರೇಣುಕಾಚಾರ್ಯ ಸಮಾಜಾಯಿಷಿ ನೀಡಿದರು.ಖಾತೆ ಹಂಚಿಕೆಯಾದ 24 ಗಂಟೆಯೊಳಗೆ ಸಚಿವರ ಖಾತೆ ಬದಲಾವಣೆಯಾದ ಕುರಿತು ಪ್ರತಿಕ್ರಿಯಿಸಿದ ಅವರು, ಖಾತೆ ಬದಲಾವಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅದರಲ್ಲಿ ತಲೆ ಹಾಕಲು ನಾನು ಯಾರು? ನಾನು ಮಂತ್ರಿನೇ ಅಲ್ಲ ಎಂದು ಸ್ಪಷ್ಟಪಡಿಸಿದರು.
Youtube Video
First published: February 12, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories