• Home
  • »
  • News
  • »
  • state
  • »
  • MP Renukacharya: ಸೋದರನ ಪುತ್ರ ನಾಪತ್ತೆ; ಮಗನೇ ಮನೆಗೆ ಬಾ ಎಂದು ರೇಣುಕಾಚಾರ್ಯ ಕಣ್ಣೀರು

MP Renukacharya: ಸೋದರನ ಪುತ್ರ ನಾಪತ್ತೆ; ಮಗನೇ ಮನೆಗೆ ಬಾ ಎಂದು ರೇಣುಕಾಚಾರ್ಯ ಕಣ್ಣೀರು

ಶಾಸಕ ರೇಣುಕಾಚಾರ್ಯ ಕಣ್ಣೀರು

ಶಾಸಕ ರೇಣುಕಾಚಾರ್ಯ ಕಣ್ಣೀರು

ನಾನು ಚುನಾವಣೆಯಲ್ಲಿ ಸೋತಾಗಲೂ ಇಷ್ಟು  ನೋವು ಆಗಿರಲಿಲ್ಲ. ಇಂದು ಮಗ ಕಾಣಿಸುತ್ತಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಆತಂಕ ಉಂಟಾಗುತ್ತಿದೆ. ಯಾವಾಗಲೂ ಸ್ನೇಹಿತರ ಜೊತೆಯಲ್ಲಿಯೇ ಇರುತ್ತಿದ್ದ ಚಂದ್ರಶೇಖರ್ ಭಾನುವಾರ ಮಾತ್ರ ಒಬ್ಬನೇ ಗೌರಿಗದ್ದೆಗೆ ಹೋಗಿದ್ದಾನೆ ಎಂದು ಮಾಹಿತಿ ನೀಡಿದರು.

  • News18 Kannada
  • Last Updated :
  • Honnali, India
  • Share this:

ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯರ (BJP MLA MP Renukacharya) ಸಹೋದರನ ಮಗ (Missing) ನಾಪತ್ತೆಯಾಗಿದ್ದು, ಭಾರೀ ಅನುಮಾನ ಮೂಡಿಸಿದೆ. ರೇಣುಕಾಚಾರ್ಯರ ಸಹೋದರನ ಮಗ 27 ವರ್ಷದ ಚಂದ್ರಶೇಖರ್ ನಾಪತ್ತೆಯಾದವರು. ಇದರಿಂದ ಇಡೀ ಕುಟುಂಬಕ್ಕೆ ಆಘಾತಕ್ಕೊಳಗಾಗಿದೆ. ಚಂದ್ರಶೇಖರ್, ವಿನಯ್ ಗುರೂಜಿ (Vinay Guruji) ಭೇಟಿಯಾಗಲು ಭಾನುವಾರ ತೆರಳಿದ್ದರು. ವಿನಯ್ ಗುರೂಜಿ ಭೇಟಿಯಾದ ನಂತರ ಹೊನ್ನಾಳಿವರೆಗೆ (Honnalli) ವಾಪಸ್ ಬಂದಿದ್ದಾರೆ. ಆದ್ರೆ ಹೊನ್ನಾಳಿಯಿಂದ ಮನೆಗೆ ಚಂದ್ರಶೇಖರ್ ಬಂದಿಲ್ಲ. ಈ ಹಿನ್ನೆಲೆ ಇಡೀ ಕುಟುಂಬ ಚಂದ್ರಶೇಖರ್ ಹುಡುಕಾಟದಲ್ಲಿದೆ. ಪೊಲೀಸರಿಗೆ (Police) ಕೊಟ್ಟ ದೂರಿನಲ್ಲೂ ನಾಪತ್ತೆ ಅಂತಷ್ಟೇ ಉಲ್ಲೇಖಿಸಲಾಗಿದೆ. ಚಂದ್ರಶೇಖರ್‌ಗಾಗಿ ಹೊನ್ನಾಳಿ  ಪೊಲೀಸರು ಹುಡುಕಾಡ್ತಿದ್ದಾರೆ. ಇನ್ನು ಸೋದರನ ಮಗನನ್ನು ಶಾಸಕ ರೇಣುಕಾಚಾರ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.


ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗ (Shivamogga) ದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.


ಆದರೆ ಇದ್ದಕ್ಕಿದಂತೆ ಭಾನುವಾರ ನಾಪತ್ತೆಯಾದವರು ಇನ್ನೂ ಪತ್ತೆಯಾಗಿಲ್ಲವಂತೆ. ಭಾನುವಾರ ರಾತ್ರಿ ಸುಮಾರು 11.30ಕ್ಕೆ ಹೊನ್ನಾಳಿ ಸಂತೆ ಮೈದಾನದಲ್ಲಿ ಚಂದ್ರಶೇಖರ್ ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ.


ಮಗನಿಗಾಗಿ ರೇಣುಕಾಚಾರ್ಯ ಕಣ್ಣೀರು


ಮಾಧ್ಯಮಗಳ ಜೊತೆ ಮಾತನಾಡುತ್ತಲೇ ರೇಣುಕಾಚಾರ್ಯ ಕಣ್ಣೀರು ಹಾಕಿದರು. ಪುತ್ರ ಚಂದ್ರಶೇಖರ್ ತುಂಬಾ ಸೌಮ್ಯ ಸ್ವಭಾವದವನು. ಎಂದೂ ಒಂದು ಕೆಟ್ಟ ಪದ ಸಹ ಬಳಸದ ಮಗ. ಆದ್ರೆ ಈಗ ಇದ್ದಕ್ಕಿದ್ದಂತೆ ಮಗ ಕಾಣಿಸುತ್ತಿಲ್ಲ. ಆತನ ಮೊಬೈಲ್​ ಸಹ ಸ್ವಿಚ್ಛ್ ಆಫ್ ಆಗಿದೆ. ಆತನ ಕಾರ್  ಸಹ ಪತ್ತೆಯಾಗಿಲ್ಲ ಎಂದು ಕಣ್ಣೀರು ಹಾಕಿದರು.


bjp mla mp renukacharya brother son chandrashekhar missing mrq
ಶಾಸಕ ರೇಣುಕಾಚಾರ್ಯ


ಮಗನೇ ಮನೆಗೆ ಬಾ


ಮಗ ನಾಪತ್ತೆಯಾದ ದುಃಖದದಲ್ಲಿಯೇ ಎರಡು ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದಿದ್ದೇನೆ. ಪೊಲೀಸರು ಸೇರಿದಂತೆ ಆಪ್ತರು ಧೈರ್ಯ ಹೇಳುತ್ತಿದ್ದಾರೆ. ಎಲ್ಲರೂ ಮಗನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮಗನೇ ಮನೆಗೆ ಬಾ ಎಂದು ಮಾಧ್ಯಮಗಳ ಮೂಲಕ ಕೇಳಿಕೊಂಡರು.


ಗೌರಿಗದ್ದೆಗೆ ಹೋದವ ಬರಲಿಲ್ಲ


ನಾನು ಚುನಾವಣೆಯಲ್ಲಿ ಸೋತಾಗಲೂ ಇಷ್ಟು  ನೋವು ಆಗಿರಲಿಲ್ಲ. ಇಂದು ಮಗ ಕಾಣಿಸುತ್ತಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಆತಂಕ ಉಂಟಾಗುತ್ತಿದೆ. ಯಾವಾಗಲೂ ಸ್ನೇಹಿತರ ಜೊತೆಯಲ್ಲಿಯೇ ಇರುತ್ತಿದ್ದ ಚಂದ್ರಶೇಖರ್ ಭಾನುವಾರ ಮಾತ್ರ ಒಬ್ಬನೇ ಗೌರಿಗದ್ದೆಗೆ ಹೋಗಿದ್ದಾನೆ ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ: Murugha Swamy Case: ಮುರುಘಾ ಸ್ವಾಮಿ ಕೇಸ್; ಪೊಲೀಸರಿಂದ ಒಡನಾಡಿ ಸಂಸ್ಥೆ ಮುಖ್ಯಸ್ಥರ ವಿಚಾರಣೆ


ಸದಾ ನನ್ನ ಜೊತೆಯಲ್ಲಿಯೇ ಇರುತ್ತಿದ್ದ ಚಂದ್ರಶೇಖರ್ ಎಲ್ಲರೊಂದಿಗೆ ಬೆರೆಯುತ್ತಿದ್ದನು. ಮಗ ಚಂದ್ರು ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂದು ನಂಬಿದ್ದೇನೆ. ಆತ ಬಂದ ಕೂಡಲೇ ಮಗನನ್ನು ಮುದ್ದಾಡಬೇಕೆಂಬ ಆಸೆ ಆಗ್ತಿದೆ ಎಂದು ಶಾಸಕರು ಅಳಲು ತೋಡಿಕೊಂಡರು.


bjp mla mp renukacharya brother son chandrashekhar missing mrq
ಶಾಸಕ ರೇಣುಕಾಚಾರ್ಯ


ರಾಜಕೀಯದಲ್ಲಿ ಸಕ್ರಿಯವಾಗಿದ್ದ ಚಂದ್ರಶೇಖರ್


ಚಂದ್ರಶೇಖರ್ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ರೇಣುಕಾಚಾರ್ಯ ಅವರಿಗೆ ಸಂಬಂಧಿಸಿದ ರಾಜಕೀಯ ಕಾರ್ಯಕ್ರಮಗಳಲ್ಲಿಯೂ ಚಂದ್ರಶೇಖರ್ ಭಾಗಿಯಾಗುತ್ತಿದ್ದರು.


ಸ್ವಾಮೀಜಿ ವಿಡಿಯೋ ಸೀಕ್ರೆಟ್


ಬಂಡೇಮಠದ ಸ್ವಾಮೀಜಿ ವಿಡಿಯೋ ಮೂಲ ಯಾವುದು? ಯಾರ ಮೊಬೈಲ್​​ನಲ್ಲಿ ರೆಕಾರ್ಡ್ ಮಾಡಿದ್ರು ಎಂದು ಪೊಲೀಸರು ತನಿಖೆ ನಡೆಸ್ತಿದ್ದಾರೆ. ಆರೋಪಿಗಳು ಮೂಲ ಫೋನ್ ಬಗ್ಗೆ ಇದುವರೆಗೂ ಬಾಯ್ಬಿಟ್ಟಿಲ್ವಂತೆ.


ಇದನ್ನೂ ಓದಿ:  Kannada Rajyotsava: ಬೆಳಗಾವಿಯಲ್ಲಿ ಕನ್ನಡ ಡಿಂಡಿಮ; ಕರಾಳ ದಿನ ಆಚರಿಸಲು ಬಂದ MESಗೆ ಮುಖಭಂಗ


ಆರೋಪಿಗಳ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಲ್ಲವಂತೆ. ಹಾಗಿದ್ರೆ ಯಾರ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ರು ಅನ್ನೋದೇ ನಿಗೂಢವಾಗಿದೆ. ಪೊಲೀಸರು 6 ತಿಂಗಳ ಕಾಲ್ ಲಿಸ್ಟ್​ ಪರಿಶೀಲಿಸಲು ಮುಂದಾಗಿದ್ದು, ಮೂವರು ಆರೋಪಿಗಳ 5 ಸಿಮ್ ಕಾರ್ಡ್​ ಪಡೆದಿದ್ದಾರೆ. ಜತೆಗೆ ವಾಟ್ಸಾಪ್ ಚಾಟಿಂಗ್ ರಿಟ್ರೀವ್​ಗೆ ಮುಂದಾಗಿದ್ದಾರೆ.

Published by:Mahmadrafik K
First published: