Hijab ಗಲಾಟೆಯಲ್ಲಿ ಭಯೋತ್ಪಾದಕ, ಉಗ್ರ ಸಂಘಟನೆಗಳ ಕೈವಾಡ: MP Renukacharya ಹೇಳಿಕೆ

ಹಿಜಾಬ್ ಪರ ಮಾತನಾಡುವ ಶಾಸಕ ತನ್ವೀರ್ ಸೇಠ್, ಯು ಟಿ ಖಾದರ್ ಸೇರಿದಂತೆ ಯಾರೇ ಆಗಲಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಎಂ.ಪಿ.ರೇಣುಕಾಚಾರ್ಯ

ಎಂ.ಪಿ.ರೇಣುಕಾಚಾರ್ಯ

  • Share this:
Hijab controversy: ರಾಜ್ಯದಲ್ಲಿ ತಲೆದೋರಿರುವ ಹಿಜಾಬ್ (Hijab) ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ಕಡ್ಡಾಯ ಸಮವಸ್ತ್ರದ (Uniform) ಆದೇಶ ಜಾರಿಗೆ ತಂದಿದೆ. ಸದ್ಯ ಪ್ರಕರಣ ನ್ಯಾಯಾಲದಲ್ಲಿದ್ದು, ಜನವರಿ 8ರಂದು ವಿಚಾರಣೆಗೆ ಬರಲಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಸಹ ನಡೆಯುತ್ತಿವೆ. ಇದೀಗ ಹೊನ್ನಾಳಿ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ (BJP MLA MP Renukacharya) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಗಲಾಟೆಯಲ್ಲಿ ಭಯೋತ್ಪಾದಕ ಮತ್ತು ಉಗ್ರ ಸಂಘಟನೆಗಳ ಕೈವಾಡ ಇದೆ. ಈ ವಿಷಯದಲ್ಲಿ ರಾಜಕಾರಣ ಮಾಡುವವರನ್ನು ಪಾಕಿಸ್ತಾನ(Pakistan)ಕ್ಕೆ ಕಳುಹಿಸಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡಿದರೆ  ದೇಶದ್ರೋಹ ಕೇಸ್ ಆಗುತ್ತದೆ. ಅಂತವರನ್ನ ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕು. ಪಾಕಿಸ್ತಾನದಲ್ಲಿ ಹೀಗೆ ಮಾಡಿದರೆ ಶೂಟ್ ಮಾಡಿ ಬಿಸಾಕ್ತಾರೆ. ಹಿಜಾಬ್ ಪರ ಮಾತನಾಡುವ ಶಾಸಕ ತನ್ವೀರ್ ಸೇಠ್, ಯು ಟಿ ಖಾದರ್ ಸೇರಿದಂತೆ ಯಾರೇ ಆಗಲಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಸರ್ಕಾರದ ಆದೇಶ ಪಾಲಿಸಬೇಕು!

ಶ್ರೀಮಂತರ ಮಕ್ಕಳ ಒಳ್ಳೆಯ ಬಟ್ಟೆ ಧರಿಸುತ್ತಾರೆ. ಬಡವರ ಮಕ್ಕಳು ಕಡಿಮೆ ದರದ ಬಟ್ಟೆ ಧರಿಸುತ್ತಾರೆ. ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಆದೇಶ ಹೊರಡಿಸಿದೆ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  Hijab Controversy: ಹಿಜಾಬ್ ವಿವಾದಕ್ಕೆ ಸರ್ಕಾರದಿಂದ ಸಮವಸ್ತ್ರ ಅಸ್ತ್ರ; ವಿದ್ಯಾರ್ಥಿಗಳ ಸಹಿಯುಳ್ಳ ತಿಳುವಳಿಕೆ ಪತ್ರ ವೈರಲ್

ಸಮವಸ್ತ್ರ ಸಂಹಿತೆ ಉಲ್ಲಂಘಿಸಿರೋದು ಖಂಡನೀಯ

ಕಾಲೇಜು, ಶಿಕ್ಷಣ ಸಂಸ್ಥೆಗೆ ತನ್ನದೇ ಸಮವಸ್ತ್ರ ಸಂಹಿತೆ ಇರುತ್ತದೆ. ಅದನ್ನ ಉಲ್ಲಂಘಿಸಿರುವುದು ಖಂಡನೀಯ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನಾ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮಿ ಹೇಳಿಕೆ ನೀಡಿದ್ದಾರೆ. ಹಿಜಾಬ್/ಬುರ್ಖಾ ಧರಿಸಿ ಕಾಲೇಜು ಬರುವವರಿಗೆ ಅವಕಾಶ ಮಾಡಿಕೊಡಬಾರದು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.ಓರ್ವ ಮುಸ್ಲಿಂ ಯುವಕನಿಗೆ ಪಿಎಸ್‌ಐ ಹುದ್ದೆ ಸಿಕ್ಕರೆ, ನನಗೆ ಸರ್ಕಾರ ಕೊಟ್ಟಂತಹ ಕ್ಯಾಪ್ ಬೇಡ. ನನಗೆ ಮುಸ್ಲಿಂ ಧರ್ಮದ ಜಾಲಿ ಟೋಪಿ ಹಾಕೋತಿನಿ ಅಂದ್ರೆ ಒಪ್ಪಿಕೊಳ್ಳೊಕೆ ಆಗುತ್ತಾ?  ನಾನು ಇಸ್ಲಾಂ ಧರ್ಮ ಪಾಲನೆ ಮಾಡ್ತಿನಿ.. ನಾನು ಮೀಸೆ ಬೋಳಿಸಿಕೊಂಡು ಗಡ್ಡ ಬಿಟ್ಟು ಪೊಲೀಸ್ ಡ್ಯೂಟಿ ಮಾಡ್ತಿನಿ ಅಂದ್ರೆ ನಡೆಯುತ್ತಾ? ಮುಸ್ಲಿಂ ಧರ್ಮದ ಮಹಿಳಾ ಪೊಲೀಸ್ ಅಧಿಕಾರಿ ನಾನು‌ ಬುರ್ಖಾ ಹಾಕಿಕೊಂಡು ಕರ್ತವ್ಯ ನಿರ್ವಹಿಸ್ತಿನಿ ಅಂದ್ರೆ ಒಪ್ಪಿಕೊಳ್ಳೊಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದರು.

ಹೀಗಾಗಿ ಇವರ ಉದ್ಧಟತನದ ಹೋರಾಟಕ್ಕೆ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಶಾಲಾ ಕಾಲೇಜುಗಳಲ್ಲಿ ಹಿಜಾಬ್/ಬುರ್ಖಾಗೆ ಅವಕಾಶ ಮಾಡಿಕೊಡಬಾರದು ಎಂದು ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  ವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಮಾತನಾಡೋರು ಮಸೀದಿ ಒಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ: Sunil Kumar

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಪ್ರತಿಕ್ರಿಯೆ

ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸಂಪ್ರದಾಯ ಸರಿಯಲ್ಲ. ಶಾಲೆ ಅಂದರೆ ದೇವಸ್ಥಾನ ಇದ್ದ ಹಾಗೆ. ಮಕ್ಕಳು ದೇವರ ಸಮಾನ. ಶಾಲೆ ಕಾಲೇಜುಗಳಲ್ಲಿ ಸಾವಿರಾರು ದೇವರು ನೋಡಬಹುದು. ಆದ್ರೆ ಈ ಶಾಲೆ ಕಾಲೇಜುಗಳಲ್ಲಿ ವಾರದ ಈಚೆ ನಡೆಯುತ್ತಿರುವ ಈ ಘಟನೆ ಸರಿಯಲ್ಲ ಎಂದು ನ್ಯೂಸ್ ೧೮ ಕನ್ನಡಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.ಸರ್ಕಾರದ ವಸ್ತ್ರಸಂಹಿತೆ ಕಾನೂನು ಇದೆ. ಶಾಲೆಗೊಂದು ಸಮವಸ್ತ್ರ ಇದೆ. ಸಮವಸ್ತ್ರ ಧರಿಸಿ ಬಂದವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಕುಂದಾಪುರ ತಾಲೂಕಿನಲ್ಲಿ ಆರ್ ಎನ್ ಶೆಟ್ಟಿ,  ಬಿಬಿ ಹೆಗ್ಡೆ, ವಿಕಾರ್ ಆಚಾರ್ಯ ಹಾಗೂ ಬೈಂದೂರಿನ ಎಲ್ಲಾ ಶಾಲೆ ಕಾಲೇಜು ನನ್ನ ಆಡಳಿತದಲ್ಲಿದೆ. ಅಲ್ಲೆಲ್ಲೂ ಬೇರೆ ವಸ್ತ್ರಕ್ಕೆ ಅವಕಾಶ ಇಲ್ಲ.  ಈಗ ವಸ್ತ್ರಸಂಹಿತೆ ಕಡ್ಡಾಯ ಮಾಡಿ ಸರ್ಕಾರದ ಸುತ್ತೋಲೆಯೂ ಬಂದಿದೆಮಂಗಳವಾರ ಬರುವ ಹೈಕೋರ್ಟ್ ತೀರ್ಪಿಗೆ ಬದ್ದರಾಗಿದ್ದೇವೆ ಎಂದರು.
Published by:Mahmadrafik K
First published: