ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಮಹತ್ವದ ಸಭೆ; ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ

ಬಿಎಎಸ್​​ವೈ ವಿರುದ್ಧ ಸಿಎಂ ಕುಮರಾಸ್ವಾಮಿ ನೀಡಿರುವ ವ್ಯಂಗ್ಯ ಹೇಳಿಕೆ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಧರಣಿ ಬಿಜೆಪಿ ಧರಣಿ ನಡೆಸುತ್ತಿದೆ. ಈ ಧರಣಿಯನ್ನು ಕೂಡ ಮುಂದುವರೆಸಬೇಕಾ ಅಥವಾ ಬೇಡವಾ ಬಗ್ಗೆ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.

Rajesh Duggumane | news18
Updated:March 28, 2019, 8:59 PM IST
ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಮಹತ್ವದ ಸಭೆ; ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ
ಸಾಂದರ್ಭಿಕ ಚಿತ್ರ
  • News18
  • Last Updated: March 28, 2019, 8:59 PM IST
  • Share this:
ಮೇಶ್​ ಹಿರೇಜಂಬೂರು

ಬೆಳಗಾವಿ (ಡಿ.20): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಯನ್ನು ಸೋಲಿಸಲೇಕು ಎನ್ನುವ ಜಿದ್ದಿಗೆ ಬಿದ್ದಿರುವ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ ಇಂದು, ಬೆಳಗಾವಿಯ ಖಾಸಗಿ ಹೋಟೆಲ್​​ನಲ್ಲಿ ಬಿಜೆಪಿ ನಾಯಕರು ಮಹತ್ವದ ಸಭೆ ಆರಂಭಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೆಳಿಗ್ಗೆ ಸಭೆ ಆರಂಭವಾಗಿದೆ. ಸಭೆಯಲ್ಲಿ ಲೋಕಸಭೆ ಚುನಾವಣೆಯ ಸಿದ್ಧತೆ, ಕ್ಷೇತ್ರವಾರು ಚುನಾವಣೆ ರಣತಂತ್ರ, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಬಲವರ್ಧನೆ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ರಾಜ್ಯ ನಾಯಕರು ಚರ್ಚೆ ನಡೆಸಲಿದ್ದಾರೆ.

ಬಿಎಎಸ್​​ವೈ ವಿರುದ್ಧ ಸಿಎಂ ಕುಮರಾಸ್ವಾಮಿ ನೀಡಿರುವ ವ್ಯಂಗ್ಯ ಹೇಳಿಕೆ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಧರಣಿ ಬಿಜೆಪಿ ಧರಣಿ ನಡೆಸುತ್ತಿದೆ. ಈ ಧರಣಿಯನ್ನು ಕೂಡ ಮುಂದುವರೆಸಬೇಕಾ ಅಥವಾ ಬೇಡವಾ ಬಗ್ಗೆ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.

ಇದನ್ನೂ ಓದಿ:  ಬಿಜೆಪಿ ಔತಣಕೂಟದಲ್ಲಿ ಕಾಣಿಸಿಕೊಂಡ 'ಕೈ' ನಾಯಕ'; ಮತ್ತೆ ಶುರುವಾಗುತ್ತಾ ಆಪರೇಷನ್​ ಕಮಲ?

ಇನ್ನು, ರಾಜ್ಯ ಪದಾಧಿಕಾರಿಗಳ ಜೊತೆ ಬೆಳಗಾವಿಯ ರೂಪಾಲಿ ಕನ್ವೆನ್ಶನ್ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಯಿಂದ ಸಭೆ ಆರಂಭವಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು, ವಿಭಾಗಸಂಘಟನಾ ಕಾರ್ಯದರ್ಶಿಗಳು, ಸಹ ಸಂಘಟನಾ ಕಾರ್ಯದರ್ಶಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳು, ರಾಜ್ಯ ಸಂಘಟನಾ ಕಾರ್ಯದರ್ಶಿ ಗಳು ಭಾಗಿಯಾಗಲಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕುರಿತು ಚರ್ಚೆ.

ಇದನ್ನೂ ಓದಿ: ಡಿಕೆಶಿಯಿಂದಲೇ ಕಾಂಗ್ರೆಸ್ ಪಕ್ಷ ಬಿಡ್ತಾರಂತೆ ರಮೇಶ್​ ಜಾರಕಿಹೊಳಿ!; ಮೈತ್ರಿ ನಾಯಕರಿಗೆ ಮತ್ತೊಂದು ತಲೆನೋವು
First published: December 20, 2018, 9:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading