ಬೆಂಗಳೂರು: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಷರತ್ತುಬದ್ಧ ಜಾಮೀನು ಮಂಜೂರು ಆಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 5 ಷರತ್ತುಗಳನ್ನು ಹಾಕಿ ಜಾಮೀನು ನೀಡಿದೆ. 5 ಲಕ್ಷ ರೂಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚನೆ ನೀಡಲಾಗಿದೆ. ಮೂರು ವಾರಗಳಿಗೊಮ್ಮೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಬೇಕು. ತನಿಖಾಧಿಕಾರಿಗಳಿಗೆ ಪಾಸ್ಪೋಟ್ ಒಪ್ಪಿಸಬೇಕು ಎಂದು ಆದೇಶ ನೀಡಲಾಗಿದೆ. KSDL ಗುತ್ತಿಗೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಜೈಲು ಸೇರಿದ್ದರು.
ಸಾಕ್ಷಿದಾರರಿಗೆ ಬೆದರಿಕೆ ಹಾಕಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು ಎಂದು ನ್ಯಾಯಾಲಯ ಹೇಳಿದೆ.
ತಪ್ಪಿದ ಬಿಜೆಪಿ ಟಿಕೆಟ್
ಇತ್ತ ಮಾಡಾಳ್ ವಿರೂಪಾಕ್ಷಪ್ಪ ಜೈಲು ಸೇರಿದ್ದ ಹಿನ್ನೆಲೆ ಪುತ್ರ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕೇಳಿ ಬಂದಿತ್ತು. ಆದ್ರೆ ಬಿಜೆಪಿ ಚನ್ನಗಿರಿ ಕ್ಷೇತ್ರದಿಂದ ಶಿವಕುಮಾರ್ ಎಂಬವರಿಗೆ ನೀಡಲಾಗಿದೆ.
ಟಿಕೆಟ್ ತಪ್ಪಿದ ಹಿನ್ನೆಲೆ ಮಲ್ಲಿಕಾರ್ಜುನ್ ಮಾಡಾಳ್ ಪಕ್ಷೇತರರಾಗಿ ನಿಲ್ಲುವಂತೆ ಅಭಿಮಾನಿಗಳು ಒತ್ತಡ ಹಾಕಿ ದ್ದರು. ಇದೀಗ ವಿರೂಪಾಕ್ಷಪ್ಪ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಚನ್ನಗಿರಿ ರಾಜಕೀಯ ಅಂಗಳದಲ್ಲಿ ಬೆಳವಣಿಗೆ ಆಗುವ ಸಾಧ್ಯತೆಗಳಿವೆ.
ಆರು ಕೋಟಿ ನಗದು ಪತ್ತೆ
ಮಾರ್ಚ್ 2ರಂದು ಮಾಡಾಳ್ ವಿರೂಪಾಕ್ಷಪ್ಪ ಕಚೇರಿ, ಮನೆ, ಮಗ ಪ್ರಶಾಂತ್ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿತ್ತು. ಪುತ್ರ ಪ್ರಶಾಂತ್ ಕಚೇರಿಯಲ್ಲಿ 2.02 ಕೋಟಿ ನಗದು, ಶಾಸಕರ ನಿವಾಸದಲ್ಲಿ 6 ಕೋಟಿಗೂ ಅಧಿಕ ನಗದು ಪತ್ತೆಯಾಗಿತ್ತು.
ಇದನ್ನೂ ಓದಿ: Madal Virupakshappa ಏನು ಪಾಕಿಸ್ತಾನದ ವಿರುದ್ಧ ಹೋರಾಡಿದ್ದನಾ? ಮುತಾಲಿಕ್ ವಾಗ್ದಾಳಿ
ಮಾಡಾಳ್ ಕುಟುಂಬದ ಸಂಪತ್ತು
*ಡಾಲರ್ಸ್ ಕಾಲೋನಿಯಲ್ಲಿ 1 ಮನೆ
*ಸಂಜಯನಗರದಲ್ಲಿ 1 ಮನೆ
*ವಿಜಯನಗರದಲ್ಲಿ 2 ಐಷಾರಾಮಿ ಮನೆಗಳು
*ಚನ್ನಗಿರಿಯಲ್ಲಿ 112 ಎಕರೆ ಅಡಿಕೆ ತೋಟ
*ದಾವಣಗೆರೆಯಲ್ಲಿ ಒಟ್ಟು 17 ವಾಣಿಜ್ಯ ಕಟ್ಟಡಗಳು
*ದಾವಣಗೆರೆ ಬಿನ್ನಿ ಮಿಲ್ ರಸ್ತೆಯಲ್ಲಿ 4 ಅಂತಸ್ತಿನ ಬಿಲ್ಡಿಂಗ್
*ಜಿಎಂಐಟಿ ಕಾಲೇಜಿನ ಹಿಂಭಾಗ 50,000 ಅಡಿ ಸೈಟು
*ಕುಂದವಾಡದ ಸರ್ವೇ ನಂ. 255/1 ರಲ್ಲಿ 4.5 ಎಕರೆ ಜಮೀನು
*ಚಿಕ್ಕತೊಗಲೇರಿ ಬಳಿ 47 ಎಕರೆ ಜಮೀನು
*ಮಾದೇನಹಳ್ಳಿ ಬಳಿ 47 ಎಕರೆ ಅಡಿಕೆ ತೋಟ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ