ಆಡಿಯೋ ಪ್ರಕರಣ; ಎಸ್​ಐಟಿ ತನಿಖೆ ಬೇಡ, ನಿರ್ಧಾರ ಮರುಪರಿಶೀಲಿಸುವಂತೆ ಸ್ಪೀಕರ್​ಗೆ ಮಾಧುಸ್ವಾಮಿ ಮನವಿ

ಎಸ್​ಐಟಿಯಿಂದ 15 ದಿನದಲ್ಲಿ ಏನು ತನಿಖೆ ಆಗುತ್ತದೆ. ಎಸ್​ಐಟಿಯಿಂದ ಯಾವ ಸಾಧನೆಯೂ ಆಗಲ್ಲ. ನಿಮ್ಮ ಮನಸಲ್ಲಿ ಏನಿದೆಯೋ ಅದು ಈಡೇರುವುದಿಲ್ಲ. ನಿಮ್ಮ ಅಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ, ಪ್ರಕರಣದ ಕುರಿತು ಮರುಪರಿಶೀಲನೆ ಮಾಡಿ ಎನ್ನುವುದು ಅಪರಾಧವಲ್ಲ ಎಂದು ಮನವಿ ಮಾಡಿದರು 

Seema.R | news18
Updated:February 12, 2019, 12:07 PM IST
ಆಡಿಯೋ ಪ್ರಕರಣ; ಎಸ್​ಐಟಿ ತನಿಖೆ ಬೇಡ, ನಿರ್ಧಾರ ಮರುಪರಿಶೀಲಿಸುವಂತೆ ಸ್ಪೀಕರ್​ಗೆ ಮಾಧುಸ್ವಾಮಿ ಮನವಿ
ಬಿಜೆಪಿ ಶಾಸಕ ಮಾಧುಸ್ವಾಮಿ
Seema.R | news18
Updated: February 12, 2019, 12:07 PM IST
ಬೆಂಗಳೂರು (ಫೆ.12):  ಆಪರೇಷನ್​ ಕಮಲ ನಡೆಸಲಾಗಿದೆ ಎಂಬ ಆಡಿಯೋ ಸಂಭಾಷಣೆ ಕುರಿತು ಎಸ್​ಐಟಿ ತನಿಖೆಗೆ ನಡೆಸಬೇಕು ಎಂಬ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ದಯಮಾಡಿ ಈ ಪ್ರಕರಣವನ್ನು ಬಿಟ್ಟುಬಿಡುವಂತೆ ಬಿಜೆಪಿ ಶಾಸಕ ಮಾಧುಸ್ವಾಮಿ ಸ್ಪೀಕರ್​ ರಮೇಶ್​ ಕುಮಾರ್​ಗೆ ಮನವಿ ಮಾಡಿದರು.

ಸದನ ಆರಂಭವಾಗುತ್ತಿದ್ದಂತೆ ಮಾತನಾಡಿದ ಅವರು, ಎಸ್​ಐಟಿ ತನಿಖೆಗೆ ನಾವು ವಿರೋಧಿಸುತ್ತೇವೆ. ಹಾಗೆಂದು ನಿಮ್ಮ ತೀರ್ಮಾನಕ್ಕೆ ಅಗೌರವ ಕೊಡುತ್ತಿಲ್ಲ. ಎಸ್​ಐಟಿಯಿಂದ 15 ದಿನದಲ್ಲಿ ಏನು ತನಿಖೆ ಆಗುತ್ತದೆ. ಎಸ್​ಐಟಿಯಿಂದ ಯಾವ ಸಾಧನೆಯೂ ಆಗಲ್ಲ. ನಿಮ್ಮ ಮನಸಲ್ಲಿ ಏನಿದೆಯೋ ಅದು ಈಡೇರುವುದಿಲ್ಲ. ನಿಮ್ಮ ಅಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ, ಪ್ರಕರಣದ ಕುರಿತು ಮರುಪರಿಶೀಲನೆ ಮಾಡಿ ಎನ್ನುವುದು ಅಪರಾಧವಲ್ಲ ಎಂದು ಮನವಿ ಮಾಡಿದರು

ನಮಗೆ ಯಾರ ವಿಷಯದಲ್ಲೂ ಹಠ ಇಲ್ಲ. ನಮ್ಮ ಬಳಿಯೂ ಹಲವು ಸಾಕ್ಷ್ಯಗಳಿವೆ. ಹಣ ಕೊಟ್ಟವರು ಯಾರು,  ಪಡೆದವರು ಯಾರು, ಯಾವ ಮಾಹಿತಿಯೂ ಇಲ್ಲ. ಹೀಗಿರುವಾಗ ಶಾಸಕರ ಕ್ರಿಮಿನಲ್ ಪ್ರಾಸಿಕ್ಯೂಷನ್ ಬೇಡ ಎಂದು ಒತ್ತಾಯಿಸಿದರು.

ಎಸ್​ಐಟಿ ತನಿಖೆಗೆ ಒಪ್ಪಿಸಿದರೆ ಶೇ.60ರಷ್ಟು ಶಾಸಕರಿಗೆ ಸಂಕಷ್ಟ ಅದರ ಬದಲು ಶಾಸಕರಿರುವ ಸದನ ಸಮಿತಿ ಮಾಡಿ ಇಲ್ಲ ಹಾಲಿ ಜಡ್ಜ್​ನ ತನಿಖೆ ಜವಾಬ್ದಾರಿ ನೀಡಿ

ಇಡೀ ರಾಜ್ಯ ನಿಮ್ಮ ಪರ ಇದೆ.  ಇದೆಲ್ಲದರ ಬಗ್ಗೆ ನಾನು ದಾಖಲೆ ಕೊಡುತ್ತೇನೆ. ಈ ಕುರಿತು ತೀರ್ಮಾನ ಬದಲಿಸುವಂತೆ ತಿಳಿಸಿದರು.

ಇದನ್ನು ಓದಿ: ಆಡಿಯೋ ಪ್ರಕರಣ: ಎಸ್​ಐಟಿ ತನಿಖೆಗೆ ಒಪ್ಪಿಸಲೇಬೇಕು ಇದೇ ನನ್ನ ಇಂಗಿತ; ರಮೇಶ್​ ಕುಮಾರ್​

ಪೊಲೀಸರೊಂದಿಗೆ ಸ್ನೇಹವೂ ಒಳ್ಳೇದಲ್ಲ.  ದ್ವೇಷವೂ ಒಳ್ಳೇದಲ್ಲ. ಶಾಸಕರು ಪೊಲೀಸರ ಮುಂದೆ ಹೇಳಿಕೆ ಕೊಡಬೇಕಾ. ಎಸ್​ಐಟಿ ತನಿಖೆಗೆ ಒಪ್ಪಿಸುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ. ಇದನ್ನ ಎಳೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಇದರಲ್ಲಿ ಕೆಟ್ಟ ಉದ್ದೇಶ ಯಾರದ್ದು ಎನ್ನುವುದನ್ನು ಪರಿಶೀಲಿಸಬೇಕು. ನಿಮ್ಮ ಮೇಲೆ ಗೌರವ ಇದೆ. ನಮ್ಮ ಭಾವನೆಗಳಿಗೆ ಬೆಲೆ ಕೊಡಲಿಲ್ಲ ಎಂದಾಗಬಾರದು ಎಂದರು.
Loading...

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ