ರೇವಣ್ಣ ಮಾಡುವ ವಾಮಾಚಾರದಿಂದಲೇ ಎಚ್​ಡಿಕೆ ರಾಜಕೀಯ ಭವಿಷ್ಯ ನಾಶವಾಗುತ್ತದೆ; ರೇಣುಕಾಚಾರ್ಯ

ವಿಶ್ವಾಸ ಮತಯಾಚನೆ ಮಾಡುವುದು ಮೈತ್ರಿ ಸರ್ಕಾರಕ್ಕೆ ಸಾಧ್ಯವಿಲ್ಲ. ನೀವಾಗೆ ರಾಜಿನಾಮೆ ಕೊಟ್ಟು ಹೋದರೆ ಮರ್ಯಾದೆ ಉಳಿಯುತ್ತದೆ. 

Latha CG | news18
Updated:July 14, 2019, 11:39 AM IST
ರೇವಣ್ಣ ಮಾಡುವ ವಾಮಾಚಾರದಿಂದಲೇ ಎಚ್​ಡಿಕೆ ರಾಜಕೀಯ ಭವಿಷ್ಯ ನಾಶವಾಗುತ್ತದೆ; ರೇಣುಕಾಚಾರ್ಯ
ಸಚಿವ ಹೆಚ್​ ಡಿ ರೇವಣ್ಣ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ
Latha CG | news18
Updated: July 14, 2019, 11:39 AM IST
 ಬೆಂಗಳೂರು,(ಜು.14): ಸಿಎಂ ಎಚ್​ಡಿ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ರೇವಣ್ಣನವರ ವಾಮಾಚಾರದಿಂದಲೇ ನಾಶವಾಗುತ್ತೆ. ರೇವಣ್ಣನವರು ವಾಮಾಚಾರ ನಡೆಸುತ್ತಾರೆ. ಜನರಿಗಾಗಿ ಇವರು ದೇವರ ಮೊರೆ ಹೋಗಲ್ಲ. ಅವರು ತಮ್ಮ ಸ್ವಾರ್ಥಕ್ಕೆ, ತಮ್ಮ ಕುಟುಂಬಕ್ಕೆ ವಾಮಾಚಾರ ಮಾಡುತ್ತಾರೆ. ಅವರ ವಾಮಾಚಾರ ದೇವೇಗೌಡರನ್ನು ಬಲಿಕೊಟ್ಟಿತು. ನಾಳೆ ಕುಮಾರಸ್ವಾಮಿಯವರನ್ನು ಕೂಡಾ ಬಲಿ ಕೊಡುತ್ತದೆ. ನಾಳೆ ಈ ಸರ್ಕಾರ ಅಂತ್ಯ ಆಗುತ್ತೆ,  ಶ್ರದ್ಧಾಂಜಲಿ‌ ಅರ್ಪಿಸುತ್ತೇವೆ. ಇನ್ನಾದರೂ ಮಾನ್ಯ ಮುಖ್ಯ ಮಂತ್ರಿಗಳು ರಾಜೀನಾಮೆ‌ ಕೊಟ್ಟು ಹೋಗಲಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಲೇವಡಿ ಮಾಡಿದರು.

ರಮಡ ರೆಸಾರ್ಟ್ ಬಳಿ ಮಾತನಾಡಿದ ಅವರು, ದೋಸ್ತಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಮುಖ್ಯಮಂತ್ರಿಗಳು ಸರ್ಕಾರಕ್ಕೆ ‌ಸಂತಾಪ ಸೂಚಿಸುವ ಕಾಲ ಬಂದಿದೆ. ಸಭಾಧ್ಯಕ್ಷರು ಯಡಿಯೂರಪ್ಪನವರ ಬಳಿ‌ ಮಾತನಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಗೆ ಬಹುಮತ ಸಿಕ್ಕಿ ಸರ್ಕಾರ ರಚನೆ ಮಾಡುತ್ತದೆ. ನಾಗೇಶ್ ಮತ್ತೆ ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ನಾಳೆ ಈ ಸರ್ಕಾರ ಅಂತ್ಯವಾಗುತ್ತೆ ಎಂದರು.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ; ಏನಿದು ಮೈತ್ರಿ ನಾಯಕರ ಹೊಸ ತಂತ್ರ?

ಮೈತ್ರಿ ಸರ್ಕಾರದಲ್ಲಿ 99 ಸೀಟುಗಳು‌ ಮಾತ್ರ ಇವೆ. ಸಿಎಂ ಕುಮಾರಸ್ವಾಮಿ ಬಂಡ ಧೈರ್ಯ ಮಾಡುತ್ತಿದ್ದಾರೆ. ವಿಶ್ವಾಸ ಮತಯಾಚನೆ ಮಾಡುವುದು ಮೈತ್ರಿ ಸರ್ಕಾರಕ್ಕೆ ಸಾಧ್ಯವಿಲ್ಲ. ನೀವಾಗೆ ರಾಜಿನಾಮೆ ಕೊಟ್ಟು ಹೋದರೆ ಮರ್ಯಾದೆ ಉಳಿಯುತ್ತದೆ.  ಇಲ್ಲವಾದರೆ ಇದೇ ರೀತಿಯಾಗಿ  ವರ್ತಿಸಿದರೆ  ಜನ ತಿರುಗಿ ಬೀಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಸಂಖ್ಯಾಬಲ‌ ಇದೆ. ಪಕ್ಷೇತರರು ಸಹ ನಮಗೆ ಬೆಂಬಲ ಘೋಷಿಸಿದ್ದಾರೆ. ಸಿಎಂ ವಿಶ್ವಾಸ ಮತ ಯಾಚನೆ ಮಾಡಲೇಬೇಕು. ಇಲ್ಲವಾದರೆ ಗೌರವದಿಂದ ರಾಜೀನಾಮೆ ಕೊಟ್ಟು ಹೋಗಲಿ. ಸಿಎಂ ಗಾಳಿಯಲ್ಲಿ ಗುಂಡು ಹಾರಿಸುವ ಹೇಳಿಕೆ ಕೊಡಬಾರದು. ಹೇಳಿದ ಮೇಲೆ ನಿಭಾಯಿಸಬೇಕು ಎಂದು ಕಿಡಿಕಾರಿದರು.
First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...