ಚಿತ್ರದುರ್ಗ(ಡಿ.15): ರಾಜ್ಯದ ಹಿರಿಯ ಶಾಸಕರಲ್ಲಿ ನಾನೂ ಒಬ್ಬ. ಈ ಬಾರಿ ನ್ಯಾಯ ಸಿಗುವ ನಂಬಿಕೆ ಇದೆ. 6 ಬಾರಿ ಶಾಸನಸಭೆಯಲ್ಲಿ ಕೆಲಸ ಮಾಡಿದ್ದೇನೆ. ನಾವು ಕೂಡಾ ಜನರಿಗೆ ಸೇವೆ ಮಾಡಬೇಕು. ಅಧಿಕಾರದಲ್ಲಿದ್ದರೆ ಉತ್ತಮ ಸೇವೆ ಅವಕಾಶ ಸಿಗುತ್ತದೆ. ಆ ಆಕಾಂಕ್ಷೆ ನಮಗೂ ಇದೆ. ಸಿಎಂ, ಅಮಿತ್ ಷಾ ಗಮನಕ್ಕೂ ತಂದಿದ್ದೇವೆ. ಅನೇಕ ಸಾರಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ರಜ್ಯದ ಬಿಎಸ್ವೈ, ಹಾಗೂ ರಾಷ್ಟ್ರದ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದೇವೆ. ಅವರು ಅನೇಕ ಸಾರಿ ಅತ್ಯಂತ ಉತ್ತಮವಾದ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮಂತ್ರಿ ಪದವಿ ಆಸೆಯನ್ನು ಬಿಚ್ಚಿಟ್ಟರು. "ಉಪ ಚುನಾವಣೆಯಲ್ಲಿ ಗೆದ್ದಿರುವವರಿಗೆ ಮಾತು ಕೊಟ್ಟಿದ್ದಾರೆ. ಐದಾರು ಜನ ಹಿರಿಯರಿಗೆ ಅವಕಾಶ ಕೊಡುವ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಜಿಲ್ಲೆಯ ಅನೇಕ ವಿಚಾರಗಳು ನೆನೆಗುದಿಗೆ ಬಿದ್ದಿವೆ. ಕಳೆದ 15-20 ವರ್ಷಗಳಿಂದ ನಮ್ಮ ಜಿಲ್ಲೆಯ ಮಂತ್ರಿಗಳಿಲ್ಲ. ಹಾಗಾಗಿ ನಮ್ಮ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಪ್ರಗತಿ ಆಗಿಲ್ಲ. ನಮ್ಮ ಜಿಲ್ಲೆಗೆ ಮಂತ್ರಿಗಿರಿ ಕೊಟ್ಟು, ನನಗೆ ಅವಕಾಶ ಕೊಟ್ಟರೆ, ಜಿಲ್ಲೆಯ ಅಭಿವೃದ್ದಿ, ಮೆಡಿಕಲ್ ಕಾಲೇಜ್ ಗಳ ಬೇಡಿಕೆಯ ಆಸೆ ಇವೆ.ಅಧಿಕಾರ ಸಿಕ್ಕರೆ ಇವುಗಳನ್ನೆಲ್ಲ ಮಾಡಬೇಕೆಂಬ ಆಸೆಗಳಿವೆ. ಇದರ ಮೇಲೆ ರಾಜ್ಯ, ಮತ್ತು ರಾಷ್ಟ್ರದ ನಾಯಕರಿಗೆ ಬಿಟ್ಟ ವಿಚಾರ," ಎಂದರು.
ರಮೇಶ್ ಯಡಿಯೂರಪ್ಪರನ್ನು ಬ್ಲ್ಯಾಕ್ ಮೇಲ್ ಮಾಡೋದು ಶತಸಿದ್ಧ; ಸತೀಶ್ ಜಾರಕಿಹೊಳಿ
ಈ ಸಾರಿ ನಮ್ಮ ಹಿರಿತನಕ್ಕೆ ಅವಕಾಶ ಕೊಟ್ಟು ನನಗೆ ನ್ಯಾಯ ಒದಗಿಸುತ್ತಾರೆ ಎಂಬುವ ನಂಬಿಕೆ ನನಗಿದೆ. ಕಳೆದ ಬಾರಿಯೂ 90% ಸಚಿವ ಸ್ಥಾನ ಸಿಗುವ ಸಾಧ್ಯತೆ ಇತ್ತು. ಅನಿವಾರ್ಯ ಕಾರಣಗಳಿಂದ ರಾಜಕೀಯ ಒತ್ತಡಗಳು ಬರುತ್ತವೆ. ಆ ಸಂದರ್ಭದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ. ಆದರೂ ಪಕ್ಷದ ನಾಯಕರ ಆದೇಶದಂತೆ ತಲೆ ಬಾಗುತ್ತೇವೆ. ಜಿಲ್ಲೆ,ರಾಜ್ಯದ ಅಭಿವೃದ್ದಿಗೆ ಕೆಲಸ ಮಾಡಲು ತಯಾರಾಗಿದ್ದೇನೆ ಎಂದು ಹೇಳಿದರು.
ಸಚಿವ ಆಕಾಂಕ್ಷಿಯಾಗಿರುವ ಹಿರಿಯೂರು ಶಾಸಕಿ ಪೂರ್ಣಿಮಾ ವಿಚಾರವಾಗಿ, ಇನ್ನೊಬ್ಬರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅವರಿಗೂ ರಾಜಕೀಯ ಆಸೆ ಆಕಾಂಕ್ಷೆಗಳು ಇರುತ್ತವೆ. ಇನ್ನೊಬ್ಬರು ಕೇಳುವುದು ಅವರ ಹಕ್ಕು, ತಪ್ಪೇನಿಲ್ಲ. ನನಗೆ ಈ ಜಿಲ್ಲೆಯ ಪ್ರತಿ ಮೂಲೆಯ ಹಳ್ಳಿ, ಜನರ ಸಮಸ್ಯೆ ಗೊತ್ತಿದೆ. ಅಧಿಕಾರ ಸಿಗಲಿ ಬಿಡಲಿ ಮುಂದಿನ ದಿನಗಳಲ್ಲಿಯೂ ಜನರ ಸೇವೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದರು.
‘ಕಾಂಗ್ರೆಸ್ನ ರಾಹುಲ್, ಸೋನಿಯಾ, ಪ್ರಿಯಾಂಕಾ ಸೇರಿದಂತೆ ಎಲ್ಲರೂ ನಕಲಿ ಗಾಂಧಿಗಳು‘: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ