6 ಬಾರಿ ಗೆದ್ದರೂ ಏನು ಪ್ರಯೋಜನ; ಹಿರಿತನ ಕಡೆಗಣಿಸಿದ್ದು ನೋವು ತಂದಿದೆ: ಶಾಸಕ ಜಿ.ಹೆಚ್​. ತಿಪ್ಪಾರೆಡ್ಡಿ ಬೇಸರ

ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಿಂದ ಹಿರಿಯತನಕ್ಕೆ ಧಕ್ಕೆಯಾಗುತ್ತದೆ ಎಂದು ಆ ರೀತಿ ಮಾಡಲಿಲ್ಲ. ಆರು ಬಾರಿ ಗೆದ್ದು ಶಾಕರಾಗಿ ಏನು ಮಾಡಬೇಕು ಎನ್ನುವುದೇ ದಿಕ್ಕು ತೋಚದಂತಾಗಿದೆ.

Latha CG | news18
Updated:August 20, 2019, 12:55 PM IST
6 ಬಾರಿ ಗೆದ್ದರೂ ಏನು ಪ್ರಯೋಜನ; ಹಿರಿತನ ಕಡೆಗಣಿಸಿದ್ದು ನೋವು ತಂದಿದೆ: ಶಾಸಕ ಜಿ.ಹೆಚ್​. ತಿಪ್ಪಾರೆಡ್ಡಿ ಬೇಸರ
ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ
  • News18
  • Last Updated: August 20, 2019, 12:55 PM IST
  • Share this:
ಚಿತ್ರದುರ್ಗ(ಆ. 20): ಸಿಎಂ ಬಿ.ಎಸ್. ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಹಿರಿಯ ಶಾಸಕ ಜಿ.ಹೆಚ್​. ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಜಿಲ್ಲೆಯಲ್ಲಿ 6 ಬಾರಿ ಶಾಸಕನಾಗಿದ್ದೇನೆ. ಪ್ರತೀ ಚುನಾವಣೆಯಲ್ಲಿ ನನ್ನ ಕ್ಷೇತ್ರದಿಂದ ಬಹುಮತ ನೀಡಿದ್ದೇವೆ. ಆದರೆ ಜಿಲ್ಲೆಗೆ ಪ್ರತಿಬಾರಿಯೂ ಅಭಿವೃದ್ಧಿ ಸೊನ್ನೆಯಾಗಿದೆ. ಹಿರಿಯ ಶಾಸಕನಾಗಿ ಸಚಿವ ಸ್ಥಾನದ ನಿರೀಕ್ಷೆ ಇತ್ತು. ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ಕೈತಪ್ಪಿದೆ. ನನಗೆ ನಿಜವಾಗಿಯೂ ಅಸಮಾಧಾನ ಉಂಟಾಗಿದೆ ಎಂದು ತಿಪ್ಪಾರೆಡ್ಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಈಗ ಬೆಂಗಳೂರಿಗೆ ತೆರಳುತ್ತಿದ್ದೇನೆ. ಹಿರಿಯ ಶಾಸಕರೆಲ್ಲ ಸೇರಿ ಹೈಕಮಾಂಡ್ ಮುಂದೆ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ ಎಂದರು. ದೂರವಾಣಿ‌ ಮೂಲಕ ಹಿರಿಯ ಶಾಸಕರನ್ನು ಸಂಪರ್ಕ ಮಾಡಿದ್ದೇನೆ. ಬೇರೆಯವರ ರೀತಿ ಬಸ್ಸುಗಳಲ್ಲಿ ಜನರನ್ನು ಕರೆದೊಯ್ದು ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ. ಹಿರಿತನವನ್ನ ಕಡೆಗಣಿಸಿದ್ದು ನಮಗೆ ನಿಜವಾಗಿಯೂ ನೋವು ತಂದಿದೆ. ಮೋದಿ, ಷಾ, ಅವರ ನೇತೃತ್ವದಲ್ಲಿ ಕೆಲಸ ಮಾಡುವ ಆಸೆ ಇತ್ತು. ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಕೆಲವೇ ಜಿಲ್ಲೆ, ಜನಾಂಗಕ್ಕೆ ಸಚಿವ ಸ್ಥಾನ ಕೊಟ್ಟಿರುವುದು ನಿಜವಾಗಿಯೂ ನೋವಾಗಿದೆ. ಇದರಲ್ಲಿ ಮುಚ್ಚು ಮರೆಯ ಮಾತೇ ಇಲ್ಲ. ಹಿರಿಯ ಶಾಸಕರೆಲ್ಲ ಒಟ್ಟಿಗೆ ಸೇರಿ ಚರ್ಚಿಸುತ್ತೇವೆ.ಯಾರ್ಯಾರು ಸೇರುತ್ತೇವೆ ಎಂಬುದು ಎರಡು ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದರು.

Karnataka Cabinet Expansion: ಅರವಿಂದ ಲಿಂಬಾವಳಿಗೆ ಮುಳುವಾಯ್ತೇ ಅಶ್ಲೀಲ ವಿಡಿಯೋ?; ಸಚಿವ ಸ್ಥಾನವಲ್ಲ ರಾಜ್ಯಾಧ್ಯಕ್ಷ ಹುದ್ದೆಗೂ ಕುತ್ತು?

ನಾವು ಶಾಸಕರಾಗಿ ಎಷ್ಟು ಬಾರಿ ಗೆಲ್ಲಬೇಕು. ನಮ್ಮ ಸೇವೆ ಪರಿಗಣಿಸದೆ, ಹಿರಿತನ ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು ನಮಗೆ ಆಘಾತವಾಗಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಿಂದ ಹಿರಿಯತನಕ್ಕೆ ಧಕ್ಕೆಯಾಗುತ್ತದೆ ಎಂದು ಆ ರೀತಿ ಮಾಡಲಿಲ್ಲ. ಆರು ಬಾರಿ ಗೆದ್ದು ಶಾಕರಾಗಿ ಏನು ಮಾಡಬೇಕು ಎನ್ನುವುದೇ ದಿಕ್ಕು ತೋಚದಂತಾಗಿದೆ. ಈ ಬಾರಿ ಸಚಿವ ಸ್ಥಾನ ಮಿಸ್ ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಮಿಸ್​ ಆಯಿತು. ಇದರಿಂದ ತುಂಬಾ ನೋವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚನೆ ಮಾಡಿ ನಿರ್ಧರಿಸುತ್ತೇವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಶಾಸಕ ತಿಪ್ಪಾರೆಡ್ಡಿ ಸಚಿವ ಸಂಪುಟ ರಚನೆಗೂ ತೆರಳದೆ ಮನೆಯಲ್ಲಿಯೇ ಉಳಿದು, ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 

First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ