‘ಮಂತ್ರಿ ಸ್ಥಾನ ನೀಡದಿದ್ದರೂ ಸರಿ, ಕನಿಷ್ಠ ಡೆಪ್ಯೂಟಿ ಸ್ಪೀಕರ್​​​ ಹುದ್ದೆ ಕೊಡಿ‘: ಬಿಜೆಪಿ ಶಾಸಕ ಆನಂದ ಮಾಮನಿ ಅಳಲು

ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸತತ ಮೂರು ಆಯ್ಕೆಯಾಗಿರುವ ಆನಂದ ಮಾಮನಿ ಈ ಬಾರಿ ಪ್ರಭಲ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭಾ ಉಪ ಸಭಾಧ್ಯಕ್ಷ ಅಥವಾ ದೆಹಲಿ ವಿಶೇಷ ಪ್ರತಿನಿಧಿ ಸ್ಥಾನವನ್ನಾದರೂ ನೀಡಿ ಎಂದು ದಂಬಾಲು ಬಿದ್ದಿದ್ದಾರೆ.

ಬಿಜೆಪಿ ಶಾಸಕ ಆನಂದ ಮಾಮನಿ

ಬಿಜೆಪಿ ಶಾಸಕ ಆನಂದ ಮಾಮನಿ

  • Share this:
ಬೆಳಗಾವಿ(ಫೆ.04): ಕರ್ನಾಟಕದಲ್ಲಿ ಕೇವಲ ಬೆಂಗಳೂರು ಮತ್ತು ಬೆಳಗಾವಿ ಕೇಂದ್ರೀಕೃತ ಆಡಳಿತ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆಯೇ ಬೆಳಗಾವಿ ಜಿಲ್ಲೆಯ ಶಾಸಕರು ಮಾತ್ರ, ಪ್ರತಿಬಾರಿಯೂ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಚಿಕ್ಕೋಡಿ ಭಾಗಕ್ಕೆ ಪ್ರಾತಿನಿಧ್ಯ ನೀಡಲಾಗುತ್ತದೆ. ಈ ಬಾರಿಯಾದರೂ ಸಂಪುಟ ವಿಸ್ತರಣೆಯಲ್ಲಿ ನಮಗೆ ಅವಕಾಶ ಕೊಡಿ ಎಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಟ್ವೀಟ್​​ ಮಾಡಿದ್ದಾರೆ.

ಈ ಸಂಬಂಧ ಇಂದು ಮಂಗಳವಾರ ಬೆಳಿಗ್ಗೆ ಟ್ವೀಟ್​ ಮಾಡಿರುವ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ, ಪಕ್ಷ ನಮ್ಮಂತರವನ್ನು ಬೆಳೆಸಲು ಯಾವುದೇ ಆಸಕ್ತಿ ತೋರುತ್ತಿಲ್ಲ. ಇನ್ಮುಂದೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ ಎಂಬ ಯಕ್ಷ ಪ್ರಶ್ನೆ ನನ್ನಲ್ಲಿ ಮೂಡಿದೆ. ಹಾಗಾಗಿ ಹೀಗೆ ಬಿಜೆಪಿಯಿಂದಲೇ ಆದಲ್ಲಿ ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನವಲ್ಲದೇ ಮತ್ತೇನು ಎಂದು ಟ್ವೀಟ್​​ ಮೂಲಕ ಆನಂದ್​​ ಮಾಮನಿ ಕುಟುಕಿದ್ದಾರೆ.

ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸತತ ಮೂರು ಆಯ್ಕೆಯಾಗಿರುವ ಆನಂದ ಮಾಮನಿ ಈ ಬಾರಿ ಪ್ರಭಲ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭಾ ಉಪ ಸಭಾಧ್ಯಕ್ಷ ಅಥವಾ ದೆಹಲಿ ವಿಶೇಷ ಪ್ರತಿನಿಧಿ ಸ್ಥಾನವನ್ನಾದರೂ ನೀಡಿ ಎಂದು ದಂಬಾಲು ಬಿದ್ದಿದ್ದಾರೆ.

ಇನ್ನು ಈ ಕುರಿತಂತೆ ನ್ಯೂಸ್​​​-18 ಕನ್ನಡದ ಜತೆಗೆ ಮಾತಾಡಿದ ಶಾಸಕ ಆನಂದ ಮಾಮನಿ, ಸಚಿವ ಸ್ಥಾನ ಕೇಳಲು ಇದು ಪಕ್ವ ಕಾಲ. ಇದೇ ಫೆ.17ರಿಂದ ರಾಜ್ಯದಲ್ಲಿ ಜಂಟಿ ಅಧಿವೇಶನ ನಡೆಯಲಿದೆ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಕೃಷ್ಣ ರೆಡ್ಡಿಯನ್ನು ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಆಗಿ ಮಾಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಪತನದ ನಂತರ ಕೃಷ್ಣರೆಡ್ಡಿ ರಾಜೀನಾಮೆ ಕೊಟ್ಟಿಲ್ಲ. ಸಚಿವ ಸ್ಥಾನ ಕೊಡದೆ ಇದ್ದರೆ, ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನಾದ್ರು ನನಗೆ ಕೊಡಬೇಕು ಎಂದು ಬಿಜೆಪಿ ನಾಯಕರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ವಲಸಿಗರಿಗೆ ಮಣೆ ಹಾಕುತ್ತಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನ; ಸಿಎಂ ವಿರುದ್ಧ ಶಾಸಕ ಆನಂದ ಮಾಮನಿ ಟ್ವೀಟ್ ದಾಳಿ

ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರು ಚಿಕ್ಕೋಡಿ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತದೆ. ಬೆಳಗಾವಿ ಗ್ರಾಮೀಣ ಜಿಲ್ಲೆಗೆ ಯಾವುದೇ ಉನ್ನತ ಹುದ್ದೆ ಸಿಗದೆ ಇರೋದು ವಿಪರ್ಯಾಸ. ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕುಮಾರ್ ಕಟಿಲ್ ಬಳಿ ನನಗೆ ಸಚಿವ ಸ್ಥಾನದ ಬೇಡಿಕೆ ಇಟ್ಟಿದೇನೆ. ನಾನು ಅಸಮಾಧಾ, ಅತೃಪ್ತರ ಗುಂಪು ಸೇರಲ್ಲ. ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡಲ್ಲ ಎಂದರು.

ಹಾಗೆಯೇ ತನ್ನ ಟ್ವೀಟ್​ ಬಗ್ಗೆ ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿದ ಬಗ್ಗೆ ಶಾಸಕ ಆನಂದ ಮಾಮನಿ ವ್ಯಂಗ್ಯ ಮಾಡಿದ್ದಾರೆ. ಖಾತೆ ಸಿಗಲಿಲ್ಲ ಎಂದು ಹಿಂದೆ ಕಾರ್ ಬಿಟ್ಟು ಹೋಗುವ ಕೆಲಸ ಮಾಡಲ್ಲ ಎಂದಿದ್ದಾರೆ. ಈ ಹಿಂದೆ ಅತೃಪ್ತರ ಗುಂಪು ಸೇರಲು ಆಹ್ವಾನ ಬಂದಿತ್ತು, ಆದರೇ ನಾನು ನಿಷ್ಠಾವಂತ ಬಿಜೆಪಿ ಶಾಸಕನಾಗಿದ್ದೇನೆ. ಇಂತಹ ಯಾವುದೇ ಗುಂಪುಲ ಸೇರಲ್ಲ ಎಂದು ಮಾಮನಿ ಹೇಳಿದರು.
First published: