ವಿಧಾನಸೌಧದಲ್ಲಿ ಬಿಜೆಪಿ ಸಚಿವರು-ಶಾಸಕರ ಜಟಾಪಟಿ: ಅವರ ಪದ ಬಳಕೆ ಬೇಜಾರಾಯ್ತು ಎಂದ ನಾರಾಯಣಗೌಡ

ಗಲಾಟೆ ಏನಿಲ್ಲ. ಒಂದು ಸಾಮಾನ್ಯ ವರ್ಗಾವಣೆ ಪ್ರಕರಣ. ಅದರ ಬಗ್ಗೆ ಮಾತನಾಡೋಣ ಬನ್ನಿ ಎಂದಿದ್ದೆ. ಅವರು ಸ್ವಲ್ಪ ಏಕವಚನದಲಿ ಮಾತಾಡಿದರು. ಅದಕ್ಕೆ ನನಗೆ ಸ್ವಲ್ಪ ಬೇಜಾರು ಆಯ್ತು. ಅವರು ಇನ್ಮುಂದೆ ಹೀಗೆಲ್ಲಾ ಮಾತಾಡಬಾರದು ಅಷ್ಟೇ ‌. ಅವರು ಮಾತಾಡೋದು ರಫ್. ಆ ರೀತಿ ಮಾತಾಡಬಾರದು- ನಾರಾಯಣ ಗೌಡ

ಸಚಿವ ನಾರಾಯಣ ಗೌಡ- ಶಾಸಕ ಬೆಳ್ಳಿ ಪ್ರಕಾಶ್​​

ಸಚಿವ ನಾರಾಯಣ ಗೌಡ- ಶಾಸಕ ಬೆಳ್ಳಿ ಪ್ರಕಾಶ್​​

 • Share this:
  ಬೆಂಗಳೂರು (ಸೆ.21): ಕೊರೋನಾ ಸಂಕಷ್ಟದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ ಪ್ರಾರಂಭವಾಗಿದೆ. ಅನುದಾನ ಹಂಚಿಕೆ, ಡಿಜೆ ಹಳ್ಳಿ ಗಲಭೆ, ಕೊರೋನಾ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಆಡಳಿತ ಪಕ್ಷದ ಮೇಲಿನ ಪ್ರವಾಹರಕ್ಕೆ ವಿಪಕ್ಷ ಸಜ್ಜಾಗಿದೆ. ಈ ನಡುವೆ ವಿಧಾನಸೌಧದ ಕ್ಯಾಂಟೀನ್​ನಲ್ಲಿ ಆಡಳಿತ ಪಕ್ಷದ ಶಾಸಕರು-ಸಚಿವರೇ ವಿರೋಧ ಪಕ್ಷದ ನಾಯಕರ ನಡುವೆ ಜಟಾಪಟಿ ನಡೆಸಿರುವ ಘಟನೆ ನಡೆದಿದೆ. ಕಡೂರು ಶಾಸಕ ಬೆಳ್ಳಿ ಪ್ರಕಾಶ್​ ಹಾಗೂ ತೋಟಗಾರಿಕಾ ಸಚಿವ ನಾರಾಯಣ ಗೌಡ ನಡುವೆ ಗಲಾಟೆ ನಡೆದಿದ್ದು, ಏಕವಚನದಲ್ಲಿ ಇಬ್ಬರು ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ. ಇಲಾಖೆ ಅನುದಾನ‌ ಮತ್ತು ಇಲಾಖೆಯ ಕೆಲಸದ ವಿಚಾರದಲ್ಲಿ ಸಚಿವರ ನಿರ್ಲಕ್ಷ್ಯಕ್ಕೆ ಬೇಸತ್ತು  ಶಾಸಕ ಬೆಳ್ಳಿಪ್ರಕಾಶ್​ ಕೂಗಾಡಿದ್ದು, ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೃಷ್ಣಭೈರೇಗೌಡ, ಸಚಿವ ಸೋಮಣ್ಣ ಘಟನೆಗೆ ಸಾಕ್ಷ್ಯಿಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸಚಿವ ಈಶ್ವರಪ್ಪ, ಸಿಟಿ ರವಿ ಇಬ್ಬರನ್ನು ಸಮಾಧಾನಿಸುವ ಯತ್ನ ನಡೆಸಿದರು. ವಿಪಕ್ಷ ನಾಯಕ ಕೂಡ ಇಬ್ಬರಿಗೂ ಕಿವಿಮಾತು ಹೇಳಿದರು ಎಂಬ ಮಾಹಿತಿ ಲಭ್ಯವಾಗಿದೆ. 

  ವಿಧಾನಸೌಧದಲ್ಲಿ ತಿಂಡಿಗೆಂದು ವ್ಯವಸ್ಥೆಗೆಂದು ಮಾಡಿದ್ದ ಲಾಂಜ್​ನಲ್ಲಿ ಈ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಸಚಿವರು, ಶಾಸಕರು ಹೋಗಿದ್ದಾರೆ. ಕ್ಷೇತ್ರದ ಕೆಲಸ ಮಾಡದ ನೀನು ಅಸಮರ್ಥ ಮಂಥ್ರಿ. ನೀನೇನು ಅಂತಾ ಗೊತ್ತಿದೆ ಎಂದು ಬೆಳ್ಳಿ ಪ್ರಕಾಶ ಮಾತಿನ ಚಕಮಕಿ ಆರಂಭಿಸಿದ್ದಾರೆ. ಈ ವೇಳೆ ಖಾರದಿಂದಲೇ ಉತ್ತರಿಸಿರುವ ಸಚಿವರು  ನಿನ್ನ ಸರ್ಟಿಫಿಕೇಟ್ ಯಾವನಿಗೆ ಬೇಕು ಹೋಗೋ ಎಂದಿದ್ದಾರೆ.

  ಅಧಿಕಾರಿಯ ಟ್ರಾನ್ಸ್​ಫರ್​ ವಿಷಯಕ್ಕೆ ನಡೆದ ಜಟಾಪಟಿ:

  ತೋಟಗಾರಿಕಾ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಟ್ರಾನ್ಸ್'ಫರ್ ಬಗ್ಗೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಅಸಿಸ್ಟೆಂಟ್ ಡೈರೆಕ್ಟರ್ ಸೀಮಾರನ್ನು ಬೇಲೂರಿಂದ ಕಡೂರಿಗೆ ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದರು. ಈ ಕುರಿತು ಬೆಳ್ಳಿ ಪ್ರಕಾಶ್​ ಸಿಎಂ ಬಳಿ ಪತ್ರಕ್ಕೆ ಸಹಿ ಹಾಕಿಸಿಕೊಟ್ಟಿದ್ದರು. ಈ ಕುರಿತು ಕ್ಯಾಂಟಿನ್​ನಲ್ಲಿ ಬೆಳ್ಳಿ ಪ್ರಕಾಶ್​ ವಿಚಾರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಗೌಡ, ಮಾಡುತ್ತೇನೆ ಎಂದಿದ್ದಾರೆ. ಈ ವೇಳೆ ಬೆಳ್ಳಿ ಪ್ರಕಾಶ್​, ನಾಲ್ಕು ತಿಂಗಳಿಂದ ಹೀಗೆ ಹೇಳ್ತಾ ಇದ್ದಿಯಾ ಬಿಡಿ ಅಣ್ಣ. ಬೇರೆ ರಾಜ್ಯದಲ್ಲಿ ಆದರೆ ಶಾಸಕರಿಗೆ ಇರುವ ಕಿಮ್ಮತ್ತೆ ಬೇರೆ. ಇಲ್ಲಿ ನಾವೆಲ್ಲಾ ನಾಲಾಯಕ್ ಎಂ ಎಲ್ ಎಗಳು ಎಂದಿದ್ದಾರೆ.

  ಈ ವೇಳೆ ತನಗೆ ನಾಲಾಯಕ್ ಎಂದು ಬೈಯ್ದ ಎಂದು ತಪ್ಪು ಗ್ರಹಿಕೆ ಮಾಡಿಕೊಂಡ ನಾರಾಯಣ ಗೌಡ, ಶಾಸಕ ಬೆಳ್ಳಿ ಪ್ರಕಾಶ್​ ಮೇಲೆ ರೇಗಿದ್ದಾರೆ.

  ಇನ್ನು ಗಲಾಟೆ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಅದು ನನಗೆ ಗೊತ್ತಿಲ್ಲ, ಅವರ ಪಕ್ಷಕ್ಕೆ ಸೇರಿದ ವಿಷಯ. ಆ ಬಗ್ಗೆ ನಾನು ಮಾತಾಡಲ್ಲ  ಎಂದಿದ್ದಾರೆ.

  ಶಾಸಕರ ಮಾತು ಬೇಜಾರುತರಿಸಿತು:

  ಗಲಾಟೆ ಬಳಿಕ ಈ ಕುರಿತು ಸ್ಪಷ್ಟಣೆ ನೀಡಿರುವ ಸಚಿವ ನಾರಾಯಣ ಗೌಡ, ಗಲಾಟೆ ಏನಿಲ್ಲ. ಒಂದು ಸಾಮಾನ್ಯ ವರ್ಗಾವಣೆ ಪ್ರಕರಣ. ಅದರ ಬಗ್ಗೆ ಮಾತನಾಡೋಣ ಬನ್ನಿ ಎಂದಿದ್ದೆ. ಅವರು ಸ್ವಲ್ಪ ಏಕವಚನದಲಿ ಮಾತಾಡಿದರು. ಅದಕ್ಕೆ ನನಗೆ ಸ್ವಲ್ಪ ಬೇಜಾರು ಆಯ್ತು. ಅವರು ಇನ್ಮುಂದೆ ಹೀಗೆಲ್ಲಾ ಮಾತಾಡಬಾರದು ಅಷ್ಟೇ ‌. ಅವರು ಮಾತಾಡೋದು ರಫ್. ಆ ರೀತಿ ಮಾತಾಡಬಾರದು ಎಂದರು.
  Published by:Seema R
  First published: