Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್

ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ಇಟ್ಟಿದ್ದರು. ಗೋಮಾತೆಯ ಬಗ್ಗೆಯೂ ಅವಹೇಳನಾಕಾರಿಯಾಗಿ ಮುರುಘಾ ಶ್ರೀಗಳು ಮಾತನಾಡಿದ್ದರು. ಹಿಂದೂ ಧರ್ಮ ರಕ್ಷಣೆ ಮಾಡಲು ಖಾವಿಯಿದೆ. ಇಸ್ಲಾಂ ಧರ್ಮ ವರ್ಣನೆ ಮತ್ತು ಗುಣಗಾನ ಮಾಡಲಿಕ್ಕೆ ಅಲ್ಲ ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಘಾ ಶ್ರೀ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಘಾ ಶ್ರೀ

  • Share this:
ಚಿತ್ರದುರ್ಗದ ಮುರುಘಾ  ಮಠದ ಶಿವಮೂರ್ತಿ ಶರಣರು (Murugha Shri) ಪೊಲೀಸ್ ಕಸ್ಟಡಿಯಲ್ಲಿದ್ದು (Police Custody), ವಿಚಾರಣೆ ಎದುರಿಸುತ್ತಿದ್ದಾರೆ. ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (BJP MLA Basanagowda Patil Yatnal) ಯತ್ನಾಳ್, ಟಿಪ್ಪು ಸುಲ್ತಾನ್​​​ನನ್ನು (Tipu Sultan) ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗಳಿಗೆ ಈ ಸ್ಥಿತಿ ಬಂದಿದೆ ಎಂದರು. ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಿಸ್ಥಿತಿ ಏನಾಗಿದೆ ಎಂದು ನೋಡಿ. ಟಿಪ್ಪು ಖಡ್ಗ ಪಡೆದ ವಿಜಯ್ ಮಲ್ಯ (Vijay Malya) ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೂಡ್ಯೂಸರ್ ಹಾಳಾದ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ (Siddaramaiah) ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ಹೇಳಿದರು.

ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು. ಅಂತಹ ನಾಯಕರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು‌ ತಪ್ಪು. ಮದಕರಿ ನಾಯಕರು ನೂರಾರು ಎಕರೆ ಜಮೀನು ಮಠಕ್ಕೆ ನೀಡಿದ್ದಾರೆ. ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು ಎಂದು ಶಾಸಕ ಯತ್ನಾಳ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಠಕ್ಕೆ ಉತ್ತಮ ಆಡಳಿತಗಾರರ ನೇಮಕ ಆಗಲಿ

ಮುರುಘಾ ಮಠ ಲಿಂಗಾಯತ ಮಠ. ಹಿಂದೂಗಳ ಮಠ. ಆದರೆ ಅಲ್ಲಿನ ಸ್ವಾಮಿಗಳು ಕಮುನಿಷ್ಠರನ್ನು ನಂಬಿ ಹೀಗಾದರು. ಶ್ರೀಗಳನ್ನು ಬದಲಾಯಿಸಿ ಬೇರೆಯವರಿಗೆ ಮಠ ನೀಡಬೇಕು. ಉತ್ತಮ ಆಡಳಿತಗಾರರನ್ನು ನೇಮಕ ಮಾಡಬೇಕು. ಸಮಾಜದ ಹಿರಿಯರು ಈ ವಿಚಾರದಲ್ಲಿ ಗಮನ ಹರಿಸಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.

Murugha Math Location, Murugha Math Seer Allegation, Kannada News, Karnataka News, ಮುರುಘಾ ಮಠ ಎಲ್ಲಿದೆ?, ಮುರುಘಾ ಸ್ವಾಮೀಜಿ ಆರೋಪ, ಮುರುಘಾ ಶ್ರೀ ಹೇಳಿಕೆ, HDK ಸ್ಪೋಟಕ ಹೇಳಿಕೆ , ಮುರುಘಾ ಶ್ರೀ ಮತ್ತು ಪೋಕ್ಸೋ ಕೇಸ್ , Murugha Shri investigation, Murugha Shri Police Custody, Murugha Shir Arrest, ಪೊಲೀಸ್ ಕಸ್ಟಡಿಗೆ ಮುರುಘಾ ಶ್ರೀ, ಮುರುಘಾ ಶ್ರೀ ಅರೆಸ್ಟ್, ಮುರುಘಾ ಶ್ರೀಗಳಿಂದ ಟಿಪ್ಪು ವರ್ಣನೆ, ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
ಮುರುಘಾಶ್ರೀ


ಇದೇ ವೇಳೆ ಮುರುಘಾ ಶ್ರೀಗಳು ಮಠದಿಂದ ನೀಡಿದ್ದ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಪ್ರಶಸ್ತಿ ಪಡೆದವರು ವಾಪಸ್ ಕೊಡಲಿ. ವಿಜಯೇಂದ್ರ ಅಲ್ಲಿ ಏನಿಟ್ಟಾನೋ ಅದನ್ನು ವಾಪಸ್ ಕೊಡಲಿ. ವಿಜಯೇಂದ್ರ ಏನು ಕೊಟ್ಟಾನು ಅದನ್ನು ಪಾಪಸ್ ಕೊಡಲಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ

ಪ್ರಗತಿಪರರಿಂದ ಮುರುಘಾ ಶ್ರೀಗಳು ಹಾಳಾಗಿದ್ದು

ಮುರುಘಾ ಶ್ರೀಗಳನ್ನು ಹಾಳು ಮಾಡಿದ್ದು ಪ್ರಗತಿಪರರು. ಪ್ರಗತಿಪರರ ಹಾಗೂ ಬುದ್ದಿ ಜೀವಿಗಳು ಎಂದು ಹೇಳಿಕೊಂಡಿದ್ದಾರಲ್ಲ ಅವರೇ ದೇಶ ಹಾಳು ಮಾಡಿದವರು. ಇಂಥ ಸಂದರ್ಭದಲ್ಲಿ ಯಾರೂ ಅವರ ಪರ ನಿಲ್ಲಲ್ಲ. ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಠಿಣ ಕ್ರಮ ತೆಗದುಕೊಳ್ಳಬೇಕೆಂದು ಹೇಳಿದ್ದಾರೆ. ಮುರುಘಾ ಶ್ರೀಗಳು ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು ಎಂದು ಆರೋಪಿಸಿದರು.

ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ಇಟ್ಟಿದ್ದರು. ಗೋಮಾತೆಯ ಬಗ್ಗೆಯೂ ಅವಹೇಳನಾಕಾರಿಯಾಗಿ ಮುರುಘಾ ಶ್ರೀಗಳು ಮಾತನಾಡಿದ್ದರು. ಹಿಂದೂ ಧರ್ಮ ರಕ್ಷಣೆ ಮಾಡಲು ಖಾವಿಯಿದೆ. ಇಸ್ಲಾಂ ಧರ್ಮ ವರ್ಣನೆ ಮತ್ತು ಗುಣಗಾನ ಮಾಡಲಿಕ್ಕೆ ಅಲ್ಲ ಎಂದರು.

ಇದನ್ನೂ ಓದಿ:  DC Tammanna: ಸುಮಲತಾ ಬಂಡವಾಳ ನಮ್ಗೆ ಗೊತ್ತು, ಬುಡು ಬುಡುಕೆ ಮಾಡ್ಕೊಂಡು ರಾಜಕಾರಣಕ್ಕೆ ಬಂದಿಲ್ಲ: ಡಿ ಸಿ ತಮ್ಮಣ್ಣ

ಪ್ರಕರಣದ ಬಗ್ಗೆ ಮಾತನಾಡೋಕೆ ವಾಕರಿಕೆ ಎಂದ ಈಶ್ವರಪ್ಪ!

ಮುರುಘಾ ಸ್ವಾಮೀಜಿಯನ್ನು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಇದರ ನಡುವೆ ಮುರುಘಾ ಸ್ವಾಮೀಜಿಯ ಈ ಪ್ರಕರಣದ ಬಗ್ಗೆ ಯಾವೊಬ್ಬ ನಾಯಕರು ತುಟಿ ಬಿಚ್ಚುತ್ತಿಲ್ಲ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರ ನಡುವೆ ಈ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಅಂತಾ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮಠದ ಸ್ವಾಮಿಗಳು ಅಂದ್ರೆ ನನಗೆ ದೇವರಿದ್ದಂತೆ

ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಮುರುಘಾ ಸ್ವಾಮೀಜಿ ಪ್ರಕರಣದ ಬಗ್ಗೆ ಮಾತನಾಡುವುದಕ್ಕೆ ವಾಕರಿಕೆಯಾಗುತ್ತಿದೆ. ಅದಕ್ಕೆ ಇನ್ನೊಂದು ಪದ ಅಂದ್ರೆ ಅನಿಷ್ಠ. ಮಠದ ಸ್ವಾಮಿಗಳು ಅಂದ್ರೆ ನನಗೆ ದೇವರಿದ್ದಂತೆ ಅಂತಾ ಹೇಳಿದ್ದಾರೆ.
Published by:Mahmadrafik K
First published: