ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (JDS State President CM Ibrahim), ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagowda Patil Yatnal) ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದಾರೆ. 10 ವರ್ಷಗಳ ಹಿಂದೆಯೇ ಈ ಮಾತನ್ನು ನಾನು ಹೇಳಿದ್ದೆ ಅಂತ ಇಬ್ರಾಹಿಂ ನೆನಪು ಮಾಡಿಕೊಂಡರು. ವಿಜಯಪುರದಲ್ಲಿ (Vijayapura) ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ಬಸವ ತತ್ವದ (Basava Tatvas) ಬಗ್ಗೆ ಮಾತನಾಡಿದರು. ಶಾಸಕ ಯತ್ನಾಳ್ ಅವರು ಬಸವಣ್ಣರ ಪುಣ್ಯಭೂಮಿಯಲ್ಲಿ ಹುಟ್ಟಿದ್ದಾರೆ. ಹಾಗಾಗಿ ಬಸವ ತತ್ವಗಳನ್ನು ಅನುಸರಿಸಿ ಎಂದು ಹೇಳುತ್ತಿದ್ದೇನೆ. ಹಿಂದುತ್ವ (Hindutva) ಬಿಟ್ಟು ಬಸವತತ್ವ ಅನುಸರಿಸಿದ ದಿನದಂದು ಯತ್ನಾಳ್ ಸಿಎಂ ಸ್ಥಾನ ಅಲಂಕರಿಸುತ್ತಾರೆ ಎಂದು ಭವಿಷ್ಯ ನುಡಿದ ಅವರು ಬಸವತತ್ವದಲ್ಲಿ ಅಂತಹ ಶಕ್ತಿ ಇದೆ,ಈ ಹಿಂದೆಯೇ ನೀವು ಸಿಎಂ ಆಗುವ ಸರಕು, ಚಿಲ್ಲರೆ ಆಗಲು ಹೋಗಬೇಡಿ ಎಂದು ಹೇಳಿದ್ದೆ ಎಂದರು.
ಶಾಸಕ ಯತ್ನಾಳ್ ಅವರ ಮೇಲೆ ನನಗೆ ಇಂದೂ ಸಹ ಪ್ರೀತಿ ಇದೆ. ನಾನು ಇಂದೂ ಸಹ ಎಲ್ಕೆ ಅಡ್ವಾಣಿಯವರ ಮನೆಗೆ ಹೋಗುತ್ತೇನೆ. ಒಂದು ಕಾಲದಲ್ಲಿ ನನಗೆ ಅವರು ಜೈಲ್ಮೇಟ್ ಆಗಿದ್ದರು. ಇನ್ನು ನರಗುಂದಕ್ಕೆ ಹೋದ್ರೆ ಜಗನ್ನಾಥರಾವ್ ಜೋಶಿಯವರ ಮನೆಗೆ ಹೋಗೋದನ್ನು ಮಿಸ್ ಮಾಡಲ್ಲ. ನಾವೆಲ್ಲಾ ಒಂದೇ ಸಮಾಜದಲ್ಲಿ ಬೆಳೆದವರು, ಅದುವೇ ನಮ್ಮ ಸಂಸ್ಕೃತಿ ಎಂದು ಹೇಳಿದರು.
ಇದು ಋಣದ ಸೂತಕ
ಹೆತ್ತ ಸೂತಕ ಹತ್ತು ದಿನಕ್ಕೆ ತೀರುವುದು. ಸತ್ತ ಸೂತಕ ಹನ್ನೊಂದನೇ ದಿನಕ್ಕೆ ತೀರುವುದು ಎಂದು ಹೇಳುತ್ತಾರೆ. ಋಣ ಮತ್ತು ಸೂತನ ಅನ್ನೋದು ಜನ್ಮ ಜನ್ಮಾಂತರದ ಬಂಧನ. ನಮಗೂ ಮತ್ತು ಜನರ ಮಧ್ಯೆ ಇರೋದು ಋಣದ ಸೂತಕ. ಇದು ಜನ್ಮ ಜನ್ಮಾಂತರದ ಬಂಧನವಾಗಿದ್ದು, ಅಷ್ಟು ಸುಲಭವಾಗಿ ನಮ್ಮಿಂದ ದೂರ ಹೋಗಲ್ಲ ಎಂದು ಆಧ್ಯಾತ್ಮದ ಮಾತುಗಳನ್ನಾಡಿದರು.
ರಾಜಕಾರಣ ಮತ್ತು ಅಧಿಕಾರ ಇಂದು ಇರಬಹುದು, ನಾಳೆ ಹೋಗಬಹುದು. ಅಧಿಕಾರ ಸಿಕ್ಕ ಸಂದರ್ಭದಲ್ಲಿ ನಾವು ಮಾಡಿದ ಕೆಲಸಗಳು ಉಳಿಯುವಂತಾಗಬೇಕು. ನಮ್ಮ ನಾಡಿನ ಸಂಸ್ಕೃತಿ ಮತ್ತು ನಮ್ಮ ದೇಶದ ಸಂಸ್ಕೃತಿ ಉಳಿಯಬೇಕೆಂದು ಸಿಎಂ ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: D K Shivakumar: ಸಿಎಂ ಕುರ್ಚಿ ಮೇಲೆ ಡಿಕೆ ಶಿವಕುಮಾರ್ ಕಣ್ಣು! ಸಭೆಯಲ್ಲಿ ಹೊರಬಂತು ಡಿಕೆ ಮನದಾಸೆ
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧ
2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಎಲ್ಲಾ ರೀತಿಯಿಂದಲೂ ಸಿದ್ಧವಾಗಿದೆ. ಸುಮಾರು 70 ರಿಂದ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದೆ. ಪಟ್ಟಿ ಬಿಡುಗಡೆ ಕುರಿತು ನಮ್ಮ ಗುರುಗಳು ಹೆಚ್.ಡಿ.ರೇವಣ್ಣ ಹೇಳಬೇಕಿದೆ ಎಂದು ಹೇಳಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆ
ಜೆಡಿಎಸ್ ಪಂಚರತ್ನ ರಥಯಾತ್ರೆಗೆ (Pancharatna Yatre) ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಜೆಡಿಎಸ್ ರಥಯಾತ್ರೆ ಹೋದಲೆಲ್ಲಾ ಜನಸಾಗರವೇ ಸೇರುತ್ತಿದೆ. ದಳಪತಿಗಳ ಪಂಚರತ್ನ ರಥಯಾತ್ರೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಿನ್ನೆ ಕೊನೆಯ ದಿನ ಆರೋಗ್ಯ ಸಚಿವ ಸುಧಾಕರ್ ಹುಟ್ಟೂರಿನಲ್ಲಿ ಭರ್ಜರಿಯಾಗಿ ರೋಡ್ ಶೋ (Road Show) ಮಾಡಿದರು.
ಇದನ್ನೂ ಓದಿ: V S Ugrappa: ರಾಮ ಮರ್ಯಾದ ಪುರುಷೋತ್ತಮ ಅನ್ನೋ ಮೋದಿ ಹಿಂಗ್ಯಾಕ್ ಮಾಡಿದ್ರು? ಉಗ್ರಪ್ಪ ಖಡಕ್ ಪ್ರಶ್ನೆ
ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (Former CM HD Kumaraswamy), ಸಚಿವ ಡಾ.ಕೆ.ಸುಧಾಕರ್ (Minister Sudhakar) ವಿರುದ್ಧ ಗುಡುಗಿದ್ರು. ಯುವಕರ, ಮಹಿಳೆಯರ ಸಮಸ್ಯೆಗೆ ಜನಪ್ರತಿನಿಧಿಗಳ ಬಳಿ ಬರೋದು ತಪ್ಪಿಲ್ಲ. ಆದ್ರೆ ಸಚಿವ ಸುಧಾಕರ್ ಎಲ್ಲದರಲ್ಲೂ ವ್ಯಾಪಾರ ಮಾಡ್ತಿದ್ದಾರೆ. ಮೆಡಿಕಲ್ ಕಾಲೇಜ್ (Medical College) ನಿರ್ಮಾಣದಲ್ಲೂ ಸುಧಾಕರ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅಂತ ಕಿಡಿಕಾರಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ