‘ರಾಹುಲ್​​ ಗಾಂಧಿಯೋರ್ವ ಮೂರ್ಖ; ಪಾಕಿಸ್ತಾನದ ಏಜೆಂಟ್​​ನಂತೆ ಮಾತಾಡುತ್ತಾರೆ‘; ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​​​

ಕರ್ನಾಟಕ ಉಪಚುನಾವಣೆಯಲ್ಲಿ ಮತದಾರರು ಸುಭದ್ರ ಸರ್ಕಾರಕ್ಕಾಗಿ ಸಿಎಂ ಬಿ.ಎಸ್​​ ಯಡಿಯೂರಪ್ಪಗೆ ಮತ ಹಾಕಿದ್ದಾರೆ. ಕೆ.ಆರ್​​ ಪೇಟೆ ಮತ್ತು ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಗೆದ್ದಿರುವುದು ಬಿ.ಎಸ್​​ ಯಡಿಯೂರಪ್ಪ ಸಾಮರ್ಥ್ಯಕ್ಕೆ ಸಾಕ್ಷಿ ಎಂದರು.

news18-kannada
Updated:December 12, 2019, 5:06 PM IST
‘ರಾಹುಲ್​​ ಗಾಂಧಿಯೋರ್ವ ಮೂರ್ಖ; ಪಾಕಿಸ್ತಾನದ ಏಜೆಂಟ್​​ನಂತೆ ಮಾತಾಡುತ್ತಾರೆ‘; ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​​​
ಬಸನಗೌಡ ಪಾಟೀಲ್ ಯತ್ನಾಲ್.
  • Share this:
ಬೆಂಗಳೂರು(ಡಿ.12): "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ನ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿಯೋರ್ವ ಮೂರ್ಖ, ಪಾಕಿಸ್ತಾನದ ಏಜೆಂಟ್​​ನಂತೆ ಮಾತಾಡುತ್ತಾರೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್​​​, ರಾಹುಲ್​​ ಗಾಂಧಿ ವರ್ತನಿಂದಲೇ ಕಾಂಗ್ರೆಸ್​​ ಅಧೋಗತಿಗೆ ತಲುಪಿದೆ ಎಂದು ಕುಟುಕಿದ್ದಾರೆ.

ಬಹುಕೋಟಿ ಐಎನ್​​ಎಕ್ಸ್​ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಪಿ ಚಿದಂಬರಂ ಎರಡು ತಿಂಗಳು ತಿಹಾರ್​​ ಜೈಲಿಗೋಗಿ ಬಂದ ಮೇಲೂ ದೇಶದ್ರೋಹಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್​ ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಆಗಿ ಉಳಿದಿಲ್ಲ. ಇದರ ಬದಲಿಗೆ ಪಾಕಿಸ್ತಾನ ಕಾಂಗ್ರೆಸ್​​ ಆಗಿದೆ ಎಂದು ಯತ್ನಾಳ್ ಆರೋಪಿಸಿದರು.

ಕರ್ನಾಟಕ ಉಪಚುನಾವಣೆಯಲ್ಲಿ ಮತದಾರರು ಸುಭದ್ರ ಸರ್ಕಾರಕ್ಕಾಗಿ ಸಿಎಂ ಬಿ.ಎಸ್​​ ಯಡಿಯೂರಪ್ಪಗೆ ಮತ ಹಾಕಿದ್ದಾರೆ. ಕೆ.ಆರ್​​ ಪೇಟೆ ಮತ್ತು ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಗೆದ್ದಿರುವುದು ಬಿ.ಎಸ್​​ ಯಡಿಯೂರಪ್ಪ ಸಾಮರ್ಥ್ಯಕ್ಕೆ ಸಾಕ್ಷಿ ಎಂದರು.

ಇನ್ನು ನನಗೇ ಡಿಸಿಎಂ ಹುದ್ದೆ ಬೇಕಾಗಿಲ್ಲ. ನಾನು ಡಿಸಿಎಂ ಆದಲ್ಲಿ ಪೊಲೀಸರು ಝೀರೊ ಟ್ರಾಫಿಕ್​​​ ಕಲ್ಪಿಸಬೇಕಾಗುತ್ತದೆ. ಇದರಿಂದ ಜನರ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ. ಮೂರು ನಾಲ್ಕು ಡಿಸಿಎಂ ಇರುವುದರಿಂದ ಸಾರ್ವಜನಿಕರಿಗೂ ಕಸಿವಿಸಿಯಾಗುತ್ತದೆ. ಡಿಸಿಎಂ ಬದಲಿಗೆ ಉತ್ತರ ಕರ್ನಾಟಕ ಭಾಗದವರಿಗೆ ಜಲಸಂಪನ್ಮೂಲ ಖಾತೆ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್​​ಗೆ ಒತ್ತಾಯಿಸಿದರು.

ಇದನ್ನೂ ಓದಿ: ನನಗೆ 7th ಸೆನ್ಸ್ ಇದೆ; ನಾನು ಹೇಳಿದಾಗೆ ಬಿಜೆಪಿ 12 ಸೀಟು ಗೆದ್ದಿದೆ; ಸಚಿವ ಎಚ್​​. ನಾಗೇಶ್​​

ಉಪಚುನಾವಣೆ ಬಗ್ಗೆ ಸಂಸದ ಪ್ರತಾಪ್​​ ಸಿಂಹ ನೀಡಿದ ಹೇಳಿಕೆಗೂ ಯತ್ನಾಳ್​​​​ ಪ್ರತಿಕ್ರಿಯಿಸಿದರು. ಬಿಜೆಪಿ ಗೆಲ್ಲಲು ಪ್ರಧಾನಿ ಮೋದಿ, ಅಮಿತ ಶಾರ ಜತೆಗೆ ಯಡಿಯೂರಪ್ಪ ಶಕ್ತಿಯೂ ಪ್ರಮುಖವಾಗಿದೆ. ಬಿಜೆಪಿಯನ್ನು ಈ ಸ್ಥಾನಕ್ಕೆ ತಂದವರು ವಾಜಪೇಯಿ ಮತ್ತು ಅಡ್ವಾಣಿ. ಆದರೆ, ಈ ವಿಷಯದಲ್ಲಿ ಕೇವಲ ಅಧಿಕಾರದಲ್ಲಿರುವವರನ್ನು ಹೊಗಳುವುದು ಸರಿಯಲ್ಲ ಎಂದು ಪ್ರತಾಪ್​​ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು.

ಇನ್ನು ಒಂದು ಸೋಲಿನಿಂದ ಸಿದ್ಧರಾಮಯ್ಯ ಯುಗಾಂತ್ಯವಾಗಿಲ್ಲ. ಸಿದ್ಧರಾಮಯ್ಯರ ಶಕ್ತಿ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿ ಮಾಡಲು ಮುಂದಾದ ಕೇಂದ್ರದ ನಿರ್ಧಾರ ಸ್ವಾಗತಾರ್ಹ.  ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಪ್ರವಾಹ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಮತ್ತೆ ಧ್ವನಿ ಎತ್ತುತ್ತೇನೆ. ಕೇಂದ್ರ ಸರ್ಕಾರ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕೂಡಲೇ ರೂ‌. 5000 ಕೋ. ಬಿಡುಗಡೆ ಮಾಡಬೇಕು. ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತೇನೆ. ಸ್ಥಾನ ಕೊಡದಿದ್ದರೂ ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುತ್ತೇನೆ ಎಂದರು.
First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ