HOME » NEWS » State » BJP MLA BASANAGOUDA PATIL YATNAL SPARKED AGAIN AGAINST CM BS YEDIYURAPPA RHHSN

ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ್ ಕಿಡಿ: ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಸವಾಲು!

ಸಿಸಿಬಿ ಎಲ್ಲಿ‌ಹೋಯ್ತು. ಯುವರಾಜ್ ವಿಜಯೇಂದ್ರ ಜೊತೆ ಇದ್ದ ಫೋಟೋ ಎಲ್ಲಿದೆ?  ರಾಧಿಕಾ ಕುಮಾರಸ್ವಾಮಿ ಜೊತೆ ಇದ್ದವರು ಮಂತ್ರಿಯಾಗಿಲ್ವೇ? ನನ್ನನ್ನ‌ಹೊರಗೆ‌ ಹಾಕೋಕೆ ಯಾರಿಗೂ ತಾಕತ್ತಿಲ್ಲ. ಬಿಜೆಪಿ ಪುನರುತ್ಥಾನಕ್ಕಾಗಿ‌ ಹೋರಾಡುತ್ತಿದ್ದೇನೆ ಎಂದು ಹೇಳಿದರು. 

news18-kannada
Updated:March 17, 2021, 6:46 PM IST
ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ್ ಕಿಡಿ: ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಸವಾಲು!
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ಬೆಂಗಳೂರು: ನಾನು ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ನನ್ನ ಎಲ್ಲಾ ಪ್ರಶ್ನೆಗಳನ್ನು ಕೇಳಿದ್ದೇನೆ. 21 ಜನರ ಕುಟುಂಬಗಳು ಮಾರಿಷಸ್ ಗೆ ಹೋಗಿತ್ತು. ವಿಜಯೇಂದ್ರ ಕುಟುಂಬವೂ ಅಲ್ಲಿಗೆ ಹೋಗಿತ್ತು. ಅಲ್ಲಿ ಹೋಗಿದ್ದು ಏತಕ್ಕೆ? ಇದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ನಲ್ಲೇ ಓಡಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾಕ್ಷಿ ಏನಿದೆ ಅಂತ ಕೇಳಿದ್ದರು. ಸಾಕ್ಷಿ ಇಲ್ಲೇ ಇದೆ ನೋಡಿ ಎಂದು ದಾಖಲೆ ತೋರಿಸಿದರು.

ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆ ಪ್ರಶ್ನೆ ಬಗ್ಗೆ ಉತ್ತರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಚೀಫ್ ಜಡ್ಜ್ ಅವರೇ ಇದನ್ನು ಎತ್ತಿ ಹಿಡಿದಿದ್ದಾರೆ. ಎರಡು ಪ್ರಕರಣದಲ್ಲಿ ಸಿಎಂಗೆ 25 ಸಾವಿರ ದಂಡ ವಿಧಿಸಿದೆ. ಸುಪ್ರೀಂನಲ್ಲಿ ಬಂಧನ ಮಾಡದಂತೆ ಸ್ಟೇ ತಂದಿದ್ದಾರೆ. ಶಿವರಾಮ ಕಾರಂತ್ ಬಡವಾಣೆ ಕೇಸ್ ಇದೆ. ಗಂಗೇನಹಳ್ಳಿ ಡಿನೋಟಿಪಿಕೇಶನ್ ಕೇಸ್ ಇದೆ. ಈ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ. ಇಂದು ಹೈಕೋರ್ಟ್ ಇದನ್ನು ಎತ್ತಿ ಹಿಡಿದಿದೆ. ನಾನು ವ್ಯಾಪಕ‌ ಭ್ರಷ್ಟಾಚಾರವನ್ನು ಉಲ್ಲೇಖ ಮಾಡಿದ್ದೇನೆ ಎಂದು ಸ್ವಪಕ್ಷೀಯರ ವಿರುದ್ಧ ಹರಿಹಾಯ್ದರು.

ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ‌ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ಹಾಗಾದರೆ ರಾಜ್ಯದಲ್ಲಿ‌ನಡೆಯುತ್ತಿರುವುದು ಏನು?  ಯಡಿಯೂರಪ್ಪನವರೇ ಯಾವಾಗ ಇಳಿಯುತ್ತಾರೆ ಅಂತ ಶಾಸಕರೇ ಹೇಳ್ತಿದ್ದಾರೆ.  ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಿ. ನಾನು 10 ವರ್ಷ ಸಂಸದನಾಗಿದ್ದೆ.  ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿದ್ದು. ಎಷ್ಟು ದಿನಗಳಿಂದ ಶಾಸಕಾಂಗ ಪಕ್ಷದ ಸಭೆ ನಡೆದಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ಕಿಡಿಕಾರಿದರು.

ಇದನ್ನು ಓದಿ: Belagavi By Election | ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಚಿಕ್ಕೋಡಿ ನಾಯಕರ ಕಣ್ಣು; ಟಿಕೆಟ್​ಗಾಗಿ ತೆರೆಮರೆಯ ಕಸರತ್ತು

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಇವತ್ತು ಅವರ ಯುವತಿಯ ತಂದೆ -ತಾಯಿ ದೂರು ಕೊಟ್ಟಿದ್ದಾರೆ. ಇದು ರಮೇಶ್ ಜಾರಕಿಹೊಳಿ ಅವರೊಬ್ಬರದ್ದೇ ಅಲ್ಲ ಸಿಡಿ. ಸಿಡಿ ತಯಾರು ಮಾಡುವ ಗುಂಪು ಅವರಲ್ಲಿದೆ. ಈ ಗುಂಪುಗಳು ಬಿಜೆಪಿ ಹಾಗೂ ಕಾಂಗ್ರೆಸ್  ಎರಡು ಪಕ್ಷಗಳಲ್ಲಿದೆ. ಒಂದು ಕೋಟಿ ಕೊಟ್ಟು ಎರಡು ಕೋಟಿ ಕೊಟ್ಟು ಸಿಡಿ ಖರೀದಿ ಮಾಡ್ತಾರೆ. ಕೋಟ್ಯಂತರ ರೂಪಾಯಿಗೆ ಸಿಡಿ ಖರೀದಿಯಾಗ್ತಾ ಇದೆ. ಇದರಲ್ಲಿ ಜಾಯಿಂಟ್ ವೆಂಚರ್ ಇದೆ. ಕೆಪಿಸಿಸಿ ಅಧ್ಯಕ್ಷರು, ಇವರದ್ದು ಜಾಯಿಂಟ್ ವೆಂಚರ್ ಇದೆ. ಈಗ ರಮೇಶ್ ಜಾರಕಿಹೊಳಿ ಪರಿಸ್ಥಿತಿ ಅಯೋಮಯವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
Youtube Video
ಸಿಸಿಬಿ ಎಲ್ಲಿ‌ಹೋಯ್ತು. ಯುವರಾಜ್ ವಿಜಯೇಂದ್ರ ಜೊತೆ ಇದ್ದ ಫೋಟೋ ಎಲ್ಲಿದೆ?  ರಾಧಿಕಾ ಕುಮಾರಸ್ವಾಮಿ ಜೊತೆ ಇದ್ದವರು ಮಂತ್ರಿಯಾಗಿಲ್ವೇ? ನನ್ನನ್ನ‌ಹೊರಗೆ‌ ಹಾಕೋಕೆ ಯಾರಿಗೂ ತಾಕತ್ತಿಲ್ಲ. ಬಿಜೆಪಿ ಪುನರುತ್ಥಾನಕ್ಕಾಗಿ‌ ಹೋರಾಡುತ್ತಿದ್ದೇನೆ ಎಂದು ಹೇಳಿದರು.
Published by: HR Ramesh
First published: March 17, 2021, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories